ಟೋಕಿಯೋ(ಜಪಾನ್): ಯೋಶಿಹಿಡೆ ಸುಗಾ ಅವರ ನಂತರದ ಜಪಾನ್ನ ನೂತನ ಪ್ರಧಾನ ಮಂತ್ರಿಯಾಗಿ ಫುಮಿಯೋ ಕಿಶಿಡಾ ಆಯ್ಕೆಯಾಗಿದ್ದು, ಆಡಳಿತ ಪಕ್ಷವಾದ ಲಿಬರಲ್ ಡೆಮಾಕ್ರಟಿಕ್ ಪಾರ್ಟಿಯ ನಾಯಕರಾಗಿ ಆಯ್ಕೆಯಾಗಿದ್ದಾರೆ.
ರಾಯಿಟರ್ಸ್ ಈ ಕುರಿತು ವರದಿ ಮಾಡಿದ್ದು, ಟಾರೋ ಕೊನೊ, ಪುಮಿಯೋ ಕಿಶಿಡಾ, ಸಾನೆ ಟಕೈಚಿ ಮತ್ತು ಸಿಯಾಕೊ ನೊಡ ಅವರು ಪಕ್ಷದ ನಾಯಕ ಸ್ಥಾನಕ್ಕೆ ಅರ್ಥಾತ್ ಪ್ರಧಾನ ಮಂತ್ರಿ ಗಾದಿಗೆ ರೇಸ್ನಲ್ಲಿದ್ದರು.
ಪ್ರಧಾನಿಯಾಗಿ ಆಯ್ಕೆಯಾಗಿರುವ ಫುಮಿಯೋ ಕಿಶಿಡಾ ಅವರಿಗೆ ಹೊಸ ಹೊಸ ಸವಾಲುಗಳು ಎದುರಾಗಲಿವೆ. ಕೋವಿಡ್ ಸಾಂಕ್ರಾಮಿಕ, ಆರ್ಥಿಕ ವ್ಯವಸ್ಥೆಯ ಚೇತರಿಕೆ, ಅಮೆರಿಕದೊಂದಿಗೆ ಸಂಬಂಧ ವೃದ್ಧಿ ಮತ್ತು ಪ್ರಾದೇಶಿಕ ಭದ್ರತಾ ಅಪಾಯಗಳನ್ನು ತಡೆಯುವ ಸವಾಲುಗಳಿವೆ.
ಇದನ್ನೂ ಓದಿ: ಭಾರತದಲ್ಲಿ ತರಬೇತಿಯಲ್ಲಿರುವ ಆಫ್ಘನ್ ಸೈನಿಕರಿಗೆ 6 ತಿಂಗಳ ಇ-ವೀಸಾ ವಿತರಣೆ