ಬೀಜಿಂಗ್: ನಿಯಂತ್ರಣ ಕಳೆದುಕೊಂಡಿದ್ದ ಚೀನಾದ ಅತೀ ದೊಡ್ಡ ರಾಕೆಟ್ 'ಲಾಂಗ್ ಮಾರ್ಚ್ -5ಬಿ' ಅವಶೇಷಗಳು ಹಿಂದೂ ಮಹಾಸಾಗರದಲ್ಲಿ ಬಿದ್ದಿರುವುದಾಗಿ ಚೀನಾ ಮಾನವಸಹಿತ ಬಾಹ್ಯಾಕಾಶ ಎಂಜಿನಿಯರಿಂಗ್ ಕಚೇರಿ (ಸಿಎಮ್‌ಎಸ್‌ಇಒ) ಮಾಹಿತಿ ನೀಡಿದೆ.
ಏಪ್ರಿಲ್ 29ರಂದು ಮೊದಲ ಮಾಡ್ಯೂಲ್‌ನೊಂದಿಗೆ ಉಡಾವಣೆಯಾಗಿದ್ದ ಲಾಂಗ್ ಮಾರ್ಚ್ -5ಬಿ ರಾಕೆಟ್ನ ದೊಡ್ಡ ಭಾಗವೊಂದು ಕಳಚಿ ಯಾವುದೇ ಕ್ಷಣದಲ್ಲಿಯೂ ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸುತ್ತಿದೆ. ಆದರೆ ಅಪಾಯ ಸಂಭವಿಸುವ ಸಾಧ್ಯತೆ ಕಡಿಮೆಯಿದೆ ಎಂದು ಚೀನಾ ಹೇಳಿತ್ತು. ಈ ಬಗ್ಗೆ ಯೂರೋಪ್ ಮತ್ತು ಅಮೆರಿಕ ಟ್ರ್ಯಾಕಿಂಗ್ ಸೆಂಟರ್ಗಳು ಮಾಹಿತಿ ಕಲೆ ಹಾಕುತ್ತಿದ್ದವು.
ಇದನ್ನೂ ಓದಿ: ಅರಬ್ಬೀ ಸಮುದ್ರದಲ್ಲಿ ಭಾರಿ ಪ್ರಮಾಣದ ಅಕ್ರಮ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಯುಎಸ್ ನೇವಿ
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಮ್‌ಎಸ್‌ಇಒ, "ಮೇ 9 ರ ತಡರಾತ್ರಿ 2.24ರ ವೇಳೆಗೆ ಲಾಂಗ್ ಮಾರ್ಚ್ -5ಬಿ ರಾಕೆಟ್ನ ಅವಶೇಷಗಳು ಹಿಂದೂ ಮಹಾಸಾಗರದಲ್ಲಿ ಬೀಳುವ ಮೂಲಕ ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸಿದೆ. ಭೂಮಿಯ ವಾತಾವರಣಕ್ಕೆ ಪ್ರವೇಶಿಸಿದ ಬೆನ್ನಲ್ಲೇ ಅವಶೇಷಗಳು ಸುಟ್ಟುಹೋಗಿವೆ" ಎಂದು ಹೇಳಿದೆ.
ಸಾಮಾನ್ಯವಾಗಿ ಹೀಗೆ ಬೀಳುವ ರಾಕೆಟ್ನ ಭಾಗಗಳು ಭೂಮಿಗೆ ಅಪ್ಪಳಿಸುವ ಮುನ್ನವೇ ನಾಶವಾಗುತ್ತದೆ. ಆದರೂ ಸಮುದ್ರದ ಬದಲಾಗಿ ಭೂಪ್ರದೇಶದ ಮೇಲೆ ರಾಕೆಟ್ನ ಅವಶೇಷಗಳು ಅಪ್ಪಳಿಸಿದ್ದರೆ ಸಾವು-ನೋವು ಉಂಟಾಗುವ ಸಾಧ್ಯತೆಯಿತ್ತು.
ಟ್ವಿಟರ್‌ನಲ್ಲಿ ಸಖತ್ ಟ್ರೋಲ್
ಹೀಗೆ ರಾಕೆಟ್ನ ದೊಡ್ಡ ಭಾಗವೊಂದು ಕಳಚಿ ಯಾವುದೇ ಕ್ಷಣದಲ್ಲಿಯೂ ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸುತ್ತದೆ ಎಂದು ಸುದ್ದಿ ಹರಿದಾಡುತ್ತಿದ್ದಂತೆಯೇ ಈ ವಿಚಾರವನ್ನ ನೆಟ್ಟಿಗರು ಟ್ವಿಟರ್‌ನಲ್ಲಿ ಸಖತ್ ಟ್ರೋಲ್ ಮಾಡಿದ್ದರು.
-
people’s waiting for China rocket. #ChineseRocket pic.twitter.com/s0tguDS2LZ
— Rego fernando (@icareall_rf) May 8, 2021 " class="align-text-top noRightClick twitterSection" data="
">people’s waiting for China rocket. #ChineseRocket pic.twitter.com/s0tguDS2LZ
— Rego fernando (@icareall_rf) May 8, 2021people’s waiting for China rocket. #ChineseRocket pic.twitter.com/s0tguDS2LZ
— Rego fernando (@icareall_rf) May 8, 2021
ಜನರು ಮನೆಯೊಳಗೆ ಹೊದಿಕೆ ಹಿಡಿದು ಚೀನಾದ ರಾಕೆಟ್ ಬಿದ್ದರೆ ಹಿಡಿಯಲು ಕಾಯುತ್ತಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಒಬ್ಬರು ಶೇರ್ ಮಾಡಿದ್ದಾರೆ.
-
#CoheteChino China's rocket can hit anywhere except China. Hahahahaha that little mother 🤣👊🏻 pic.twitter.com/eA2OFkMjTo
— Andre Baisel. 🚬🍸 (@baiselandre) May 9, 2021 " class="align-text-top noRightClick twitterSection" data="
">#CoheteChino China's rocket can hit anywhere except China. Hahahahaha that little mother 🤣👊🏻 pic.twitter.com/eA2OFkMjTo
— Andre Baisel. 🚬🍸 (@baiselandre) May 9, 2021#CoheteChino China's rocket can hit anywhere except China. Hahahahaha that little mother 🤣👊🏻 pic.twitter.com/eA2OFkMjTo
— Andre Baisel. 🚬🍸 (@baiselandre) May 9, 2021
ಮತ್ತೊಬ್ಬರು, ಚೀನಾದ ರಾಕೆಟ್ ಚೀನಾವನ್ನ ಬಿಟ್ಟು ಬೇರೆಲ್ಲಿಯಾದರೂ ಅಪ್ಪಳಿಸಬಹುದು ಎಂದು ದುರ್ಬೀನು ಹಿಡಿದು ಆಕಾಶದೆಡೆ ನೋಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.
-
Last year #COVID19
— Mr. BhiiLoo🇵🇰 (@me_nabeel10) May 8, 2021 " class="align-text-top noRightClick twitterSection" data="
This year #chinarocket
Rest of the World looking at China right now pic.twitter.com/zKdQk8AysT
">Last year #COVID19
— Mr. BhiiLoo🇵🇰 (@me_nabeel10) May 8, 2021
This year #chinarocket
Rest of the World looking at China right now pic.twitter.com/zKdQk8AysTLast year #COVID19
— Mr. BhiiLoo🇵🇰 (@me_nabeel10) May 8, 2021
This year #chinarocket
Rest of the World looking at China right now pic.twitter.com/zKdQk8AysT
ಕಳೆದ ವರ್ಷ ಕೋವಿಡ್ -19, ಈ ವರ್ಷ ರಾಕೆಟ್.. ಪ್ರಪಂಚದ ಎಲ್ಲಾ ರಾಷ್ಟ್ರಗಳ ದೃಷ್ಟಿಯೂ ಮತ್ತೆ ಚೀನಾ ಮೇಲೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
-
China: we have under control the rocket. Meanwhile #ChineseRocket pic.twitter.com/ifVLU5H1hx
— Ahmet Kamil Yuksel (@kamilyu) May 9, 2021 " class="align-text-top noRightClick twitterSection" data="
">China: we have under control the rocket. Meanwhile #ChineseRocket pic.twitter.com/ifVLU5H1hx
— Ahmet Kamil Yuksel (@kamilyu) May 9, 2021China: we have under control the rocket. Meanwhile #ChineseRocket pic.twitter.com/ifVLU5H1hx
— Ahmet Kamil Yuksel (@kamilyu) May 9, 2021