ಬೀಜಿಂಗ್: ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿರುವ ಮಾರಕ ವೈರಾಣು ಕೊವಿಡ್-19 ನಿಂದಾಗಿ ಚೀನಾದ ನಾನಾ ಪ್ರಾಂತ್ಯಗಳಲ್ಲಿ ಸಾವಿನ ಸರಣಿ ಮುಂದುವರೆದಿದ್ದು ಮತ್ತೆ 52 ಮಂದಿ ಬಲಿಯಾಗಿದ್ದಾರೆ.
ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಚೀನಾದಲ್ಲಿ ಮತ್ತೆ 52 ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ 2,715ಕ್ಕೆ ಏರಿಕೆಯಾಗಿದೆ. ಹುಬೈ ಪ್ರಾಂತ್ಯದಲ್ಲಿ 42 ಮಂದಿ ಬಲಿಯಾದ್ರೆ, 10 ಮಂದಿ ವುಹಾನ್ನ ಇತರೆ ಪ್ರದೇಶಗಳಲ್ಲಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಕೆಲ ದಿನಗಳಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಇಲ್ಲಿಯವರೆಗೆ ಚೀನಾದಲ್ಲಿ 78,064 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇಟಲಿ, ಇರಾನ್, ಫ್ರಾನ್ಸ್, ಅಲ್ಜೀರಿಯಾ ಮತ್ತು ಸ್ಪೇನ್‌ನ ಕ್ಯಾನರಿ ದ್ವೀಪಗಳಂತಹ ದೂರದ ಪ್ರದೇಶಗಳಲ್ಲಿ ಈ ಹೊಸ ವೈರಾಣು ಪತ್ತೆಯಾಗಿದೆ.