ಟೋಕಿಯೊ (ಜಪಾನ್): ಇತ್ತೀಚಿನ ಪ್ರವಾಹದಿಂದ ಜಪಾನ್ನಲ್ಲಿ ಮೃತಪಟ್ಟವರ ಸಂಖ್ಯೆ 50ಕ್ಕೆ ಏರಿದ್ದು, 12 ಜನ ಕಾಣೆಯಾಗಿದ್ದಾರೆ ಎಂದು ಜಪಾನ್‌ನ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.
ಜಪಾನ್‌ನ ದಕ್ಷಿಣ ಪ್ರದೇಶವಾದ ಕ್ಯುಶುನಲ್ಲಿ ಶುಕ್ರವಾರ ತಡವಾಗಿ ಸುರಿದ ಮಳೆ ವ್ಯಾಪಕ ಪ್ರವಾಹಕ್ಕೆ ಕಾರಣವಾಗಿದೆ. ಮೃತಪಟ್ಟವರಲ್ಲಿ 49 ಮಂದಿ ಕುಮಾಮೊಟೊ ಪ್ರಾಂತ್ಯದ ನದಿಯ ಪಕ್ಕದ ಪಟ್ಟಣಗಳಿಗೆ ಸೇರಿದವರಾಗಿದ್ದಾರೆ. ಫುಕುಯೊಕಾ ಪ್ರಾಂತ್ಯದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.
ಕುಮಾ ನದಿಯುದ್ದಕ್ಕೂ ಹೆಚ್ಚು ಹಾನಿಗೊಳಗಾದ ನದಿ ತೀರದ ಪಟ್ಟಣಗಳಲ್ಲಿ ಸೇನಾ ಪಡೆಗಳು, ಪೊಲೀಸರು ಮತ್ತು ಇತರ ರಕ್ಷಣಾ ಕಾರ್ಯಕರ್ತರು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಕುಯೋಕಾದ ಓಮುಟಾ ಜಿಲ್ಲೆಯಲ್ಲಿ, ನಿವಾಸಿಗಳನ್ನು ದೋಣಿಗಳಲ್ಲಿ ರಕ್ಷಣಾ ಪಡೆಗಳು ರಕ್ಷಿಸುತ್ತಿವೆ. ಕ್ಯುಶು ಪ್ರದೇಶದಾದ್ಯಂತ ಸುಮಾರು 3 ಮಿಲಿಯನ್ ನಿವಾಸಿಗಳನ್ನು ಸ್ಥಳಾಂತರಿಸಲು ಸೂಚಿಸಲಾಗಿದೆ.