ETV Bharat / international

ಬ್ರಹ್ಮಪುತ್ರನಿಗೆ ಚೀನಾ ಅಣೆಕಟ್ಟು ನಿರ್ಮಿಸೋದು ಸುಲಭವಾ..?: ಇಲ್ಲಿದೆ ಪೂರ್ಣ ಮಾಹಿತಿ - ಡೋಕ್ಲಾಂ ವಿವಾದದ ನಂತರ ಚೀನಾ

ಟಿಬೆಟ್ ಪೂರ್ವಭಾಗದಲ್ಲಿ ಅಣೆಕಟ್ಟು ನಿರ್ಮಾಣ ಮಾಡುವ ಮೂಲಕ ಭಾರತ ಹಾಗೂ ಬಾಂಗ್ಲಾದೇಶಗಳನ್ನು ಚೀನಾ ಎದುರು ಹಾಕಿಕೊಳ್ಳಲಿದೆ

Damming Tsangpo
ಬ್ರಹ್ಮಪುತ್ರ ನದಿಗೆ ಅಣೆಕಟ್ಟು
author img

By

Published : Dec 14, 2020, 4:16 PM IST

ನವದೆಹಲಿ: ಚೀನಾ ತನ್ನ ದೇಶದಲ್ಲಿ ಯರ್ಲುಂಗ್ ಸ್ಯಾಂಗ್​ಪೋ ಎಂದು ಕರೆಯಲ್ಪಡುವ ಬ್ರಹ್ಮಪುತ್ರ ನದಿಗೆ ಪೂರ್ವ ಲಡಾಖ್​ನಲ್ಲಿ ಜಲವಿದ್ಯುತ್ ಯೋಜನೆ ನಿರ್ಮಿಸಲು ಚೀನಾ ಮುಂದಾಗಿದ್ದು, ಆ ಯೋಜನೆ ಅಷ್ಟೇನೂ ಸುಲಭವಲ್ಲ ಎಂದು ಉನ್ನತ ಮೂಲಗಳು ಅಭಿಪ್ರಾಯಪಟ್ಟಿವೆ.

ಕೆಲವು ವರ್ಷಗಳ ಹಿಂದಿನ ಡೋಕ್ಲಾಂ ವಿವಾದ ಹಾಗೂ ಇದೇ ವರ್ಷದ ಗಾಲ್ವಾನ್ ಸಂಘರ್ಷದ ನಂತರ ಚೀನಾ ಭಾರತವನ್ನು ಗುರಿಯಾಗಿಸಿ, ಹಲವಾರು ಯೋಜನಗೆಳನ್ನು ಕೈಗೊಳ್ಳುತ್ತಿದೆ. ಈ ಯೋಜನೆಗಳಲ್ಲಿ ಬ್ರಹ್ಮಪುತ್ರ ನದಿಗೆ ಅಣೆಕಟ್ಟು ನಿರ್ಮಾಣವೂ ಕೂಡಾ ಒಂದು. ಈ ಅಣೆಕಟ್ಟಿನಲ್ಲಿ ಜಲವಿದ್ಯುತ್ ಯೋಜನೆ ನಿರ್ಮಿಸಲು ಚೀನಾ ಚಿಂತನೆ ನಡೆಸಿದೆ.

ಮೊದಲಿಗೆ ಅಣೆಕಟ್ಟು ಅಥವಾ ಜಲವಿದ್ಯುತ್ ಸ್ಥಾವರವನ್ನು ನಿರ್ಮಿಸುವ ಮೂಲಕ ಚೀನಾ ಕೆಲವೊಂದು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಈ ಮೂಲಕ ವಿದ್ಯುತ್ ಉತ್ಪಾದನೆ ಮಾಡಿ ಮೂಲಭೂತ ಅವಶ್ಯಕತೆಗಳಿಗೆ ಬಳಸಿಕೊಳ್ಳಬಹುದು ಅಥವಾ ನೀರನ್ನು ಕೃಷಿ ಚಟುವಟಿಕೆಗಳಿಗೆ ಸಿಗುವಂತೆ ನೋಡಿಕೊಳ್ಳಬಹುದು. ಆದರೆ ಚೀನಾ ಎರಡು ರಾಷ್ಟ್ರಗಳ ವಿರೋಧವನ್ನು ಕಟ್ಟಿಕೊಳ್ಳಲೇಬೇಕಾಗುತ್ತದೆ.

ಇದನ್ನೂ ಓದಿ: 'ಲಡಾಖ್​ನಲ್ಲಿ ಯೋಧರದ್ದು ಅಪ್ರತಿಮ ಶೌರ್ಯ' ಎಂದ ರಾಜನಾಥ್​ ಸಿಂಗ್

ಬ್ರಹ್ಮಪುತ್ರ ನದಿಗೆ ಜಲವಿದ್ಯುತ್ ನಿರ್ಮಾಣ ಮುಂದಾದರೆ ಅದಕ್ಕೆ ಮೊದಲು ವಿರೋಧ ವ್ಯಕ್ತಪಡಿಸುವುದು ಭಾರತ, ನಂತರ ಬಾಂಗ್ಲಾದೇಶದ ವಿರೋಧವನ್ನೂ ಚೀನಾ ಕಟ್ಟಿಕೊಳ್ಳಬೇಕಾಗುತ್ತದೆ. ಜಲವಿದ್ಯುತ್ ಸ್ಥಾವರ ನಿರ್ಮಾಣ ಸಾಧ್ಯವಿಲ್ಲ. ಅದು ಸಾಧ್ಯವಾಗಬೇಕಾದರೆ ಚೀನಾ ಪವಾಡವನ್ನೇ ಮಾಡಬೇಕು ಎನ್ನುತ್ತಾರೆ ಅಂತಾರಾಷ್ಟ್ರೀಯ ರಾಜಕೀಯ ವಿಶ್ಲೇಷಕರು.

​ಅಣೆಕಟ್ಟಿನ ನಿರ್ಮಾಣದಿಂದ ಅಲ್ಲಿ ಪ್ರಾಚೀನ ಕಾಲದಿಂದಲೂ ವಾಸವಿರುವ ಐತಿಹಾತಿಕ ಹಿನ್ನೆಲೆಯಿರುವ ಜನರ ಸ್ಥಳಾಂತರ ಮಾಡಬೇಕಾಗುತ್ತದೆ. ಇದರಿಂದ ಭಾರತ, ಬಾಂಗ್ಲಾದೇಶಗಳ ಗಡಿಗಳ ಮೇಲೆಯೂ ಕೂಡಾ ಪರಿಣಾಮ ಬೀರಲಿದೆ. ಚೀನಾ ಈಗ ನಿರ್ಮಾಣ ಮಾಡಲಿರುವ ಅಣೆಕಟ್ಟು ಭೂಕಂಪನ ಪ್ರದೇಶವಾಗಿರುವ ಕಾರಣದಿಂದ ಬೇರೆ ದೇಶಗಳ ಮೇಲೂ ದುಷ್ಪರಿಣಾಮವಾಗುವುದನ್ನು ನಿರಾಕರಿಸುವಂತಿಲ್ಲ.

ಈಗಾಗಲೇ ಬ್ರಹ್ಮಪುತ್ರ ನದಿಗೆ ಹಲವಾರು ಕಡೆಗಳಲ್ಲಿ ಚೀನಾ ಅಣೆಕಟ್ಟು ನಿರ್ಮಾಣ ಮಾಡಿದೆ. ಝಾಂಗ್​ಮೋ ಎಂಬಲ್ಲಿ ಈಗಾಗಲೇ 510 ಮೆಗಾವ್ಯಾಟ್​ನ ಜಲವಿದ್ಯುತ್ ಸ್ಥಾವರನ್ನು ಚೀನಾ ನಿರ್ಮಾಣ ಮಾಡಿದೆ. ಅವುಗಳಿಂದ ಬೇರೆ ದೇಶಗಳ ಮೇಲೆ ಆಗುವ ಪರಿಣಾಮ ನಗಣ್ಯ. ಆದರೆ ಈಗ ನಿರ್ಮಾಣ ಮಾಡಲು ಮುಂದಾಗಿರುವ ಅಣೆಕಟ್ಟು ವಿವಾದಕ್ಕೆ ಗುರಿಯಾಗುತ್ತಿದ್ದು, ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿರುವ ಆರೋಪ ಕೇಳಿ ಬರುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.