ETV Bharat / international

ಭಾರತ-ಬಾಂಗ್ಲಾದ 19 ಮಿಲಿಯನ್‌ ಮಕ್ಕಳಿಗೆ ಅಪಾಯ ಸಾಧ್ಯತೆ: ಯುನಿಸೆಫ್ ಎಚ್ಚರಿಕೆ - ಕೋವಿಡ್‌-19

ಅಂಫಾನ್‌ ಚಂಡಮಾರುತ ಹಾಗೂ ಕೋವಿಡ್‌-19 ನಿಂದ ಭಾರತ , ಬಾಂಗ್ಲಾ ದೇಶದ 1 ಕೋಟಿ 90 ಲಕ್ಷ ಮಕ್ಕಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಯುನಿಸೆಫ್ ಎಚ್ಚರಿಕೆ ನೀಡಿದೆ.

cyclone-and-covid-19-present-dual-threats-to-children-and-families-warns-unicef
ಸೈಕ್ಲೋನ್‌, ಕೋವಿಡ್‌-19ನಿಂದ ಭಾರತ-ಬಾಂಗ್ಲಾದ 19 ಮಿಲಿಯನ್‌ ಮಕ್ಕಳಿಗೆ ಅಪಾಯ ಸಾಧ್ಯತೆ; ಯುನೆಸೆಫ್ ಎಚ್ಚರಿಕೆ
author img

By

Published : May 23, 2020, 11:58 PM IST

ಹೈದರಾಬಾದ್‌: ಅಂಫಾನ್‌ ಚಂಡಮಾರುತದಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿ, ಮಳೆಯಿಂದ ಭಾರತ ಹಾಗೂ ಬಾಂಗ್ಲಾದ ಸುಮಾರು 1 ಕೋಟಿ 90 ಲಕ್ಷ ಮಕ್ಕಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಯುನಿಸೆಫ್‌ ಎಚ್ಚರಿಕೆ ನೀಡಿದೆ.

ಪಶ್ಚಿಮ ಬಂಗಾಳದಲ್ಲಿ 1 ಕೋಟಿ 60 ಲಕ್ಷ ಮಕ್ಕಳು ಸೇರಿದಂತೆ 5 ಕೋಟಿ ಜನರು ಮೇಲೆ ಪ್ರಬಲ ಚಂಡಮಾರುತದ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದೆ.

ಕೋವಿಡ್‌-19 ಹಾಗೂ ಅಂಫಾನ್‌ ಚಂಡಮಾರುತ ಎರಡೂ ದೇಶಗಳ ಮಾನವ ಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿವೆ. ಪ್ರವಾಹ ಸಂಕಷ್ಟಕ್ಕೆ ಸಿಲುಕಿರುವವರನ್ನು ತಾತ್ಕಾಲಿಕ ಶಿಬಿರಗಳಿಗೆ ಸ್ಥಳಾಂತರಿಸಲು ಹೋಗಿರುವ ರಕ್ಷಣಾ ಸಿಬ್ಬಂದಿಗೂ ಕೋವಿಡ್-19 ಹಾಗೂ ಇತರ ರೋಗಗಳು ಹರಡುವ ಸಾಧ್ಯತೆ ಇದೆ ಎಂದು ಯುನಿಸೆಫ್‌ ಎಚ್ಚರಿಸಿದೆ.

ಸದ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಕರಾವಳಿ ಪ್ರದೇಶಗಳಲ್ಲಿರುವ ಮಕ್ಕಳ ಮತ್ತವರ ಕುಟುಂಬಗಳನ್ನು ಮುಂಜಾಗ್ರತವಾಗಿ ಸುರಕ್ಷಿತ ಸ್ಥಳಗಳಿಗೆ ರವಾನಿಸಿ ಮತ್ತು ಕೋವಿಡ್‌-19 ಹರಡುವಿಕೆ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳ ತುರ್ತು ಸ್ಪಂದನೆ ಉತ್ತಮವಾಗಿದೆ ಎಂದು ಯುನಿಸೆಫ್‌ನ ದಕ್ಷಿಣ ಏಷ್ಯಾದ ಪ್ರಾದೇಶಿಕ ನಿರ್ದೇಶಕ ಜೀನ್‌ ಗ್ಹೋ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.