ರೋವಿಂಜ್ : ಒಂದು ವರ್ಷದ ಕೊರೊನಾ ಲಾಕ್‌ಡೌನ್‌ಗಳು ಮತ್ತು ಕಠಿಣ ನಿರ್ಬಂಧಗಳ ನಂತರ ಕ್ರೊಯೇಷಿಯಾ ತನ್ನ ಪ್ರವಾಸೋದ್ಯಮವನ್ನು ಪುನಃ ಆರಂಭಿಸುತ್ತಿದೆ.
ಕರಾವಳಿಯನ್ನು ವಿದೇಶಿ ಪ್ರವಾಸಿಗರಿಗೆ ತೆರೆದಿದೆ. ಆ ಮೂಲಕ ದೇಶಕ್ಕೆ ಪ್ರವೇಶಿಸುವ ಪ್ರಯಾಣಿಕರ ಮೇಲಿನ ಕೊರೊನಾ ನಿರ್ಬಂಧಗಳನ್ನು ಕೈಬಿಟ್ಟ ಮೊದಲ ಯುರೋಪಿಯನ್ ರಾಷ್ಟ್ರವಾಗಿ ಕ್ರೊಯೇಷಿಯಾ ಹೊರ ಹೊಮ್ಮಲಿದೆ.
ಬಿಸಿಲ ಧಗೆಗೆ ಬೇಸತ್ತು ಪ್ರತಿ ವರ್ಷ ಕ್ರೊಯೇಷಿಯಾದ ಕರಾವಳಿಯುದ್ದಕ್ಕೂ, ಕಡಲತೀರಗಳು ಮತ್ತು ದ್ವೀಪಗಳಲ್ಲಿ ಜನರು ಕಿಕ್ಕಿರಿದು ತುಂಬಿರುತ್ತಾರೆ. ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಕ್ರೊಯೇಷಿಯಾ ದೇಶಕ್ಕೆ ಪ್ರವಾಸೋದ್ಯಮ ಪ್ರಮುಖ ಆದಾಯದ ಮೂಲವಾಗಿದೆ.
ಒಂದು ವರ್ಷದ ಕೊರೊನಾ ಲಾಕ್‌ಡೌನ್‌ಗಳು ಮತ್ತು ಕಠಿಣ ನಿರ್ಬಂಧಗಳ ನಂತರ ಕ್ರೊಯೇಷಿಯಾ ತನ್ನ ಪ್ರವಾಸೋದ್ಯಮವನ್ನು ಪುನಃ ಆರಂಭಿಸುತ್ತಿದ್ದು, ಕರಾವಳಿಯನ್ನು ವಿದೇಶಿ ಪ್ರವಾಸಿಗರಿಗೆ ತೆರೆದಿದೆ. ಆ ಮೂಲಕ ದೇಶಕ್ಕೆ ಪ್ರವೇಶಿಸುವ ಪ್ರಯಾಣಿಕರ ಮೇಲಿನ ಕೊರೊನಾ ನಿರ್ಬಂಧಗಳನ್ನು ಕೈಬಿಟ್ಟ ಮೊದಲ ಯುರೋಪಿಯನ್ ರಾಷ್ಟ್ರಗಳಲ್ಲಿ ಕ್ರೊಯೇಷಿಯಾ ಸಹ ಒಂದಾಗಿದೆ.
ಕಡಲತೀರಗಳು, ಪೈನ್ ಕಾಡುಗಳು, ವೈನ್ ಮತ್ತು ಟ್ರಫಲ್ಸ್, ಆಲಿವ್ ಎಣ್ಣೆ, ಮೇಕೆ ಚೀಸ್ ಮತ್ತು ಪ್ರೊಸಿಯುಟ್ಟೊಗಳಂತಹ ಖಾದ್ಯಗಳಿಗೆ ಹೆಸರುವಾಸಿಯಾದ ಕ್ರೊಯೇಷಿಯಾದ ಕರಾವಳಿಯ ಉತ್ತರದ ಭಾಗವಾದ ಇಸ್ಟ್ರಿಯಾ ಪ್ರದೇಶದಲ್ಲಿ ಪರಿಸ್ಥಿತಿ ಸದ್ಯ ಸಡಿಲಗೊಂಡಿದೆ.
ರೋವಿಂಜ್ ಎಂಬ ಸುಂದರವಾದ ಪಟ್ಟಣದ ಬೀದಿಗಳಲ್ಲಿ ಅಥವಾ ರೆಸ್ಟೋರೆಂಟ್‌ಗಳಲ್ಲಿ ಯಾರೂ ಮಾಸ್ಕ್ ಧರಿಸುವುದಿಲ್ಲ. ಕೆಲವೆಡೆ ರೆಸ್ಟೋರೆಂಟ್‌ಗಳಲ್ಲಿ ಮಾತ್ರ ಟೇಬಲ್ಗಳ ನಡುವೆ ಅಂತರ ಕಾಯ್ದುಕೊಳ್ಳುವಂತೆ ಕಾಣಿಸುತ್ತದೆ.
ಜನ ಲಾಕ್ಡೌನ್ನಿಂದ ಬೇಸರಗೊಂಡಿದ್ದಾರೆ... ಗ್ಲಾಸ್ ವೈನ್ ಸಿಕ್ಕರೆ ಸಾಕು!
ಜನರು ಲಾಕ್‌ಡೌನ್‌ಗಳಿಂದ ಬೇಸರಗೊಂಡಿದ್ದಾರೆ ”ಎಂದು ಸಣ್ಣ ದೋಣಿ ಬಂದರಿನಲ್ಲಿರುವ ಸಮುದ್ರಾಹಾರ ರೆಸ್ಟೋರೆಂಟ್‌ನ ವೇಯ್ಟರ್ ನಿಕೋಲಾ ಸ್ಯಾಂಡಿಕ್ ಹೇಳಿದರು. "ಅವರು ಈಗ ಜನರಿಗೆ ಬೇಕಿರುವುದು ಒಂದು ಲೋಟ ವೈನ್ ಅಷ್ಟೇ ಅದನ್ನು ಕುಡಿಯುತ್ತಾ ಸಮುದ್ರವನ್ನು ವೀಕ್ಷಿಸುತ್ತಾರೆ ಎಂದರು. ಒಪತಿಜಾದ ಹೋಟೆಲ್ ಸವೊಯ್ನ ಸ್ವಾಗತಕಾರ ಮಜಾ ಸೆಗಾನ್ ನಾವು ಮಾಸ್ಕ್ ಇಲ್ಲದ ಅತಿಥಿಗಳ ಸ್ಮೈಲ್ ನೋಡಲು ಬಯಸುತ್ತೇವೆ ಅಂತಾರೆ ಇವರು.
ಕ್ರೊಯೇಷಿಯಾದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿವೆ ಮತ್ತು ದೇಶದಲ್ಲಿ ಲಸಿಕೆ ನೀಡುವಿಕೆ ಪ್ರಾರಂಭಿಸಿದ ನಂತರ ಜನ ವ್ಯಾಕ್ಸಿನ್ ತೆಗೆದುಕೊಳ್ಳುತ್ತಿದ್ದಾರೆ. 4 ದಶಲಕ್ಷ ಜನಸಂಖ್ಯೆಯಲ್ಲಿ ಶೇ 50 ರಷ್ಟು ಜನರು ಬೇಸಿಗೆಯ ಮಧ್ಯಭಾಗದಲ್ಲಿ ಸಂಪೂರ್ಣವಾಗಿ ಲಸಿಕೆ ಪಡೆಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೆಗೆಟಿವ್ ರಿಪೋರ್ಟ್ ಇದ್ದರೆ ಇಲ್ಲಿ ಪ್ರವೇಶ ಸರಾಗ
ಸದ್ಯ ಕ್ರೊಯೇಷಿಯಾ ಯುಎಸ್ ನಿಂದ ಬರುವ ಪ್ರವಾಸಿಗರಿಗೆ ಕೊರೊನಾ ಸಂಪೂರ್ಣ ವ್ಯಾಕ್ಸಿನ್ ನೇಷನ್ ಪಡೆದ ಪ್ರಮಾಣಪತ್ರ, ಕೋವಿಡ್ ನೆಗೆಟಿವ್ ರಿಪೋರ್ಟ್ ಅನ್ನು ಮಾನದಂಡವಾಗಿ ಮಾಡಿಕೊಂಡಿದೆ. ಸದ್ಯದಲ್ಲೇ ಸಂಪೂರ್ಣವಾಗಿ ವ್ಯಾಕ್ಸಿನೇಷನ್ ಮಾಡಿರುವ 27 ರಾಷ್ಟ್ರಗಳ ಪ್ರವಾಸಿಗರು ದೇಶಕ್ಕೆ ಬರಲು ಯಾವುದೇ ನಿರ್ಬಂಧಗಳಿಲ್ಲದೇ ಅನುಮತಿ ನೀಡಲಿದೆ.
ಕ್ರೊಯೇಷಿಯಾಗೆ ಅಮೆರಿಕಾದ ಪ್ರವಾಸಿಗರೇ ಹೆಚ್ಚಾಗಿ ಬರಬಹುದೆಂದು ನಿರೀಕ್ಷಿಸಲಾಗಿದೆ. ಪ್ರವಾಸೋದ್ಯಮ ಸಚಿವ ನಿಕೋಲಿನಾ ಬ್ರಂಜಾಕ್ ಅವರು ಕಳೆದ ವರ್ಷ ಕಡಲತೀರಗಳಲ್ಲಿ ಮತ್ತು ಬಾರ್‌ಗಳಲ್ಲಿ ಸಾಮಾಜಿಕ ದೂರವನ್ನು ಪ್ರವಾಸಿಗರು ನಿರ್ಲಕ್ಷಿಸಿದಾಗ ಏನಾಯಿತು ಎಂಬುದನ್ನು ಮನದಟ್ಟು ಮಾಡಲು ತಮ್ಮ ದೇಶವು ಕಠಿಣ ಆರೋಗ್ಯ ಕ್ರಮಗಳನ್ನು ಅನುಸರಿಸುತ್ತಿದೆ ಎಂದು ತಿಳಿಸಿದೆ.
ಪ್ರಸ್ತುತ ಕ್ರೋಯೇಷಿಯಾದಲ್ಲಿ ಕೊರೊನಾ ಪ್ರಕರಣಗಳು ಅಷ್ಟಿಲ್ಲ. ದೇಶದ ಸುಮಾರು 80 ಸಾವಿರ ಪ್ರವಾಸೋದ್ಯಮ ಕಾರ್ಮಿಕರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. "ಸುರಕ್ಷಿತ ಮತ್ತು ಆರಾಮದಾಯಕ ಪ್ರವಾಸಕ್ಕಾಗಿ ನಾವು ಎಲ್ಲಾ ಸಿದ್ಧತೆ ಮಾಡಿಕೊಂಡಿರುವುದಾಗಿ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
ಪ್ರವಾಸೋದ್ಯಮಕ್ಕೆ ಈ ದೇಶಕ್ಕೆ ಆಧಾರ!
ಕ್ರೊಯೇಷಿಯಾ ಪ್ರವಾಸೋದ್ಯಮವನ್ನು ಹೆಚ್ಚು ಅವಲಂಬಿಸಿದೆ. ಅದರ ಆದಾಯದ 20% ಬೇಸಿಗೆಯಲ್ಲಿ ವಿದೇಶಿ ಪ್ರವಾಸಿಗರಿಂದ ಬರುತ್ತದೆ. ಡುಬ್ರೊವ್ನಿಕ್ ಮತ್ತು ರೋವಿಂಜ್‌ನಂತಹ ಆಡ್ರಿಯಾಟಿಕ್ ರೆಸಾರ್ಟ್‌ಗಳು, ಬೇಸಿಗೆಯಲ್ಲಿ, ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತವೆ.
ಆದರೆ, ಬೇರೆ ದೇಶಗಳು ಅನುಮತಿ ನೀಡಿದರೆ ಮಾತ್ರ ಆ ದೇಶದ ಜನ ಕ್ರೊಯೇಷಿಯಾಗೆ ಪ್ರವಾಸ ಬರಬೇಕಿರುವುದರಿಂದ ಈ ದೇಶದ ಆದಾಯ ಇತರೆ ದೇಶಗಳ ಕೊರೊನಾ ನಿರ್ಬಂಧಗಳ ಮೇಲೆ ಅವಲಂಬಿತವಾಗಿದೆ.
ಈ ವರ್ಷ ಸಾಂಕ್ರಾಮಿಕ ವರ್ಷವಾಗಿರುವುದರಿಂದ ಇದು ಅಷ್ಟು ಸುಲಭವಲ್ಲ. ಆದರೂ ನಾವು ಹೆಚ್ಚಿನ ಪ್ರವಾಸಿಗರ ನಿರೀಕ್ಷೆಯಲ್ಲಿದ್ದೇವೆ ಎಂದು ಬ್ರಂಜಾಕ್ ತಿಳಿಸಿದ್ದಾರೆ.