ತೈಪೆ (ತೈವಾನ್): ಚೀನಾ ವಾಯುಪಡೆಯ ಏಳು ಯುದ್ಧ ವಿಮಾನಗಳು ತೈವಾನ್ ದ್ವೀಪದ ವಾಯು ರಕ್ಷಣಾ ವಲಯದಲ್ಲಿ ಹಾರಾಟ ನಡೆಸಿದ್ದು, ತೈವಾನ್ - ಚೀನಾದ ಸಂಘರ್ಷ ಮುಂದುವರಿದಿದೆ. ಚೀನಾ ಸೇನೆ ಪೀಪಲ್ ಲಿಬರೇಶನ್ ಆರ್ಮಿಯ 28 ವಿಮಾನಗಳನ್ನು ADIZ ಗೆ ಕಳುಸಿದ ಎರಡು ದಿನಗಳ ನಂತರ ಈ ಸುದ್ದಿ ಹೊರ ಬಿದ್ದಿದೆ. ಈ ದಾಳಿಯಲ್ಲಿ ಎರಡು ಜೆ-16 ಯುದ್ಧ ವಿಮಾನಗಳು, 4 ಹಳೆ ಮಾದರಿಯ ಜೆ-7 ಯುದ್ಧ ವಿಮಾನಗಳು ಮತ್ತು ಒಂದು ವೈ-8 ವಿದ್ಯುತ್ ಯುದ್ಧ ವಿಮಾನಗಳು ಸೇರಿವೆ.
ತೈವಾನ್ ರಕ್ಷಣಾ ಸಚಿವಾಲಯದ ಪ್ರಕಾರ, ವಿಮಾನ ಚಟುವಟಿಕೆಗಳ ಮೇಲ್ವಿಚಾರಣೆ ನಡೆಸಲು ವಾಯು ಕ್ಷಿಪಣಿ ವ್ಯವಸ್ಥೆ ನಿಯೋಜಿಸಲು ದ್ವೀಪದ ವಾಯುಸೇನೆ ಹೇಳಿದೆ. ಒಂದೇ ತಿಂಗಳಲ್ಲಿ ಪೀಪಲ್ ಲಿಬರೇಶನ್ ಆರ್ಮಿಯ ಯುದ್ಧ ವಿಮಾನಗಳು ADIZ ಗೆ ಪ್ರವೇಶಿಸಿರುವುದು ಆರನೇ ಬಾರಿ ಎಂದು ಸಚಿವಾಲಯ ತಿಳಿಸಿದೆ.
‘ಹೈ ಮಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಮ್ಸ್ ಮತ್ತು ಹಾರ್ಪೂನ್ ಕೋಸ್ಟಲ್ ಡಿಫೆನ್ಸ್ ಸಿಸ್ಟಮ್’ ಎಂಬ ಎರಡು ಶಸ್ತ್ರಾಸ್ತ್ರಗಳ ಖರೀದಿಗೆ ಅಮೆರಿಕದೊಂದಿಗೆ ತೈವಾನ್ ಒಪ್ಪಂದ ಮಾಡಿಕೊಂಡಿದೆ. ಅದಾದ ಬಳಿಕ ಚೀನಾ ಈ ರೀತಿಯ ದುಷ್ಕೃತ್ಯದ ಕೆಲಸ ಮಾಡುತ್ತಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಚೀನಾ ತೈವಾನ್ ಗೆದ್ದುಕೊಂಡರೆ ಎಲ್ಲವೂ ಮುಗಿಯುತ್ತದೆ: ನಿಕ್ಕಿ ಹ್ಯಾಲೆ
70 ವರ್ಷಗಳಿಗೂ ಹಿಂದಿನಿಂದ ಚೀನಾ ಹಾಗೂ ತೈವಾನ್ ಪ್ರತ್ಯೇಕವಾಗಿ ಆಡಳಿತ ನಡೆಸಿಕೊಂಡು ಬರುತ್ತಿವೆ. ಆದರೂ, ತೈವಾನ್ ಮೇಲೆ ಚೀನಾ ಹಿಡಿತ ಸಾಧಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಸುಖಾಸುಮ್ಮನೆ ದಾಳಿ ನಡೆಸುತ್ತಿದೆ ಎಂದು ತೈವಾನ್ ಸಚಿವಾಲಯ ತಿಳಿಸಿದೆ.