ಬೀಜಿಂಗ್(ಚೀನಾ): ಅಫ್ಘಾನಿಸ್ತಾನದಲ್ಲಿ ತಾಲಿಬಾನ್ನ ಮಧ್ಯಂತರ ಸರ್ಕಾರ ರೂಪುಗೊಂಡಿದೆ. ಅಲ್ಲಿ ಅಮೆರಿಕ ಬಿಟ್ಟು ಹೋದ ಶಸ್ತ್ರಾಸ್ತ್ರಗಳು ಮತ್ತು ಯುದ್ಧ ವಿಮಾನಗಳು ತಾಲಿಬಾನಿಗಳ ಪಾಲಾಗಿವೆ. ಈ ವಿಮಾನಗಳನ್ನು ತಾಲಿಬಾನಿಗಳು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ವಿಚಾರಕ್ಕೆ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲಿಜಿಯಾನ್ ಝಾವೋ ವಿಡಿಯೋವೊಂದನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿ, ಅಮೆರಿಕದ ಕಾಲೆಳೆದಿದ್ದಾರೆ.
ಹೌದು.. ಅಮೆರಿಕ ಬರೋಬ್ಬರಿ 20 ವರ್ಷಗಳ ಬಳಿಕ ಅಫ್ಘಾನಿಸ್ತಾನ ತೊರೆದ ನಂತರ ಅವರು ಬಿಟ್ಟೋಗಿರುವ, ಯುದ್ಧ ವಿಮಾನವೊಂದರ ರೆಕ್ಕೆಗೆ ಜೋಕಾಲಿ ಕಟ್ಟಿ ತಾಲಿಬಾನಿಗಳು ಆಟವಾಡುತ್ತಿರುವ ವಿಡಿಯೋವನ್ನು ಲಿಜಿಯಾನ್ ಝಾವೋ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
-
The graveyard of EMPIRES and their WAR MACHINES. Talibans have turned their planes into swings and toys..... pic.twitter.com/GMwlZKeJT2
— Lijian Zhao 赵立坚 (@zlj517) September 9, 2021 " class="align-text-top noRightClick twitterSection" data="
">The graveyard of EMPIRES and their WAR MACHINES. Talibans have turned their planes into swings and toys..... pic.twitter.com/GMwlZKeJT2
— Lijian Zhao 赵立坚 (@zlj517) September 9, 2021The graveyard of EMPIRES and their WAR MACHINES. Talibans have turned their planes into swings and toys..... pic.twitter.com/GMwlZKeJT2
— Lijian Zhao 赵立坚 (@zlj517) September 9, 2021
ಸಾಮ್ರಾಜ್ಯಗಳು ಮತ್ತು ಯುದ್ಧ ಯಂತ್ರಗಳ ಸ್ಮಶಾನ. ತಾಲಿಬಾನಿಗಳು ಅಮೆರಿಕದ ವಿಮಾನವನ್ನು ಆಟದ ವಸ್ತುವಾಗಿ ಪರಿವರ್ತಿಸಿದ್ದಾರೆ ಎಂದು ವಿಡಿಯೋದ ಜೊತೆಗೆ ವ್ಯಂಗ್ಯವಾಡಿದ್ದಾರೆ.
ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೇನೆಯನ್ನು ಹಿಂತೆಗೆದುಕೊಂಡ ನಂತರ ತಾಲಿಬಾನಿಗಳಿಗೆ ಚೀನಾ ಬೆಂಬಲ ನೀಡುತ್ತಿದೆ ಎಂಬುದು ಬಹಿರಂಗವಾಗಿದೆ. ಆದರೂ ಅಮೆರಿಕ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ದಿಢೀರ್ ಹಿಂತೆಗೆದುಕೊಂಡ ನೀತಿಯನ್ನು ಟೀಕಿಸಿದೆ.
ಇದನ್ನೂ ಓದಿ: 'ಪಂಜ್ಶೀರ್ನ ನಾಯಕ ಅಹ್ಮದ್ ಮಸೂದ್ ಅಫ್ಘಾನಿಸ್ತಾನ ತೊರೆದಿಲ್ಲ'