ETV Bharat / international

ಮೂವರು ಗಗನಯಾತ್ರಿಗಳನ್ನು ಹೊತ್ತು ಆಕಾಶಕ್ಕೆ ಜಿಗಿದ ಮೊದಲ ಮಾನವ ಸಹಿತ ಬಾಹ್ಯಾಕಾಶ ನೌಕೆ..! - ಚೀನಾದ ಜಿಯುಕ್ವಾನ್ ಉಡಾವಣಾ ಕೇಂದ್ರ

ಚೀನಾದ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಶೆನ್‌ಶಾವ್-12 ನೌಕೆ ಉಡಾವಣೆಯಾಗಿದ್ದು, ಮೂವರು ಗಗನಯಾತ್ರಿಗಳನ್ನು ಹೊತ್ತ ರಾಕೆಟ್ ನೂತನ ಬಾಹ್ಯಾಕಾಶ ನಿಲ್ದಾಣದತ್ತ ಸಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸುವ ಆಶಯದೊಂದಿಗೆ ಮೂವರು ಗಗನಯಾತ್ರಿಗಳನ್ನು ಹೊಸ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲು ಸಜ್ಜಾಗಿರುವುದಾಗಿ ಚೀನಾ ಮ್ಯಾನ್ಡ್ ಸ್ಪೇಸ್ ಏಜೆನ್ಸಿ (ಸಿಎಂಎಸ್‌ಎ) ಬುಧವಾರ ತಿಳಿಸಿತ್ತು.

Chinese crewed
ಬಾಹ್ಯಾಕಾಶ ನೌಕೆ
author img

By

Published : Jun 17, 2021, 9:03 PM IST

ಜಿಯುಕ್ವಾನ್ (ಚೀನಾ): ಹೊಸದಾಗಿ ನಿರ್ಮಿಸುತ್ತಿರುವ ಬಾಹ್ಯಾಕಾಶ ನಿಲ್ದಾಣಕ್ಕೆ ಮೂವರು ಗಗನಯಾತ್ರಿಗಳನ್ನು ಹೊತ್ತ ಚೀನಾದ ರಾಕೆಟ್ ಇಂದು ಬೆಳಗ್ಗೆ ಯಶಸ್ವಿಯಾಗಿ ಉಡಾವಣೆಯಾಗಿದೆ. ಚೀನಾದ ಮೊದಲ ಮಾನವ ಸಹಿತ ಬಾಹ್ಯಾಕಾಶಕ್ಕೆ ಇಬ್ಬರು ಅನುಭವಿ ಹಾಗೂ ಮತ್ತೋರ್ವ ಹೊಸ ಗಗನಯಾತ್ರಿ ತಲುಪಿದ್ದಾರೆ. ನಿಯೆ ಹೈಶೆಂಗ್​, ಲಿಯು ಬೋಮಿಂಗ್​ ಮತ್ತು ಟ್ಯಾಂಗ್​ ಹಾಂಗ್ಬೊ ಎಂಬ ಮೂವರು ಗಗನಯಾತ್ರಿಗಳನ್ನು ಹೊತ್ತ ಶೆನ್​ಶಾವ್​-12 ಆಕಾಶನೌಕೆ​ ಬೆಳಗ್ಗೆ ಸರಿ ಸುಮಾರು 9:22ರಕ್ಕೆ ಉಡಾವಣೆಗೊಂಡಿದೆ.

ಚೀನಾದ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಶೆನ್‌ಶಾವ್-12 ನೌಕೆ ಉಡಾವಣೆಯಾಗಿದ್ದು, ಮೂವರು ಗಗನಯಾತ್ರಿಗಳನ್ನು ಹೊತ್ತ ರಾಕೆಟ್ ನೂತನ ಬಾಹ್ಯಾಕಾಶ ನಿಲ್ದಾಣದತ್ತ ಸಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸುವ ಆಶಯದೊಂದಿಗೆ ಮೂವರು ಗಗನಯಾತ್ರಿಗಳನ್ನು ಹೊಸ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲು ಸಜ್ಜಾಗಿರುವುದಾಗಿ ಚೀನಾ ಮ್ಯಾನ್ಡ್ ಸ್ಪೇಸ್ ಏಜೆನ್ಸಿ (ಸಿಎಂಎಸ್‌ಎ) ಬುಧವಾರ ತಿಳಿಸಿತ್ತು.

ಟಿಯಾಂಗಾಂಗ್‌ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುವ ನಿಯೆ ಹೈಶೆಂಗ್, ಲಿಯು ಬೊಮಿಂಗ್ ಮತ್ತು ಟ್ಯಾಂಗ್ ಹಾಂಗ್ಬೊ ಎಂಬ ಮೂವರು ಮೂವರು ಗಗನ ಯಾತ್ರಿಗಳು ಮೂರು ತಿಂಗಳ ಕಾಲ ಹೊಸ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿಯಲಿದ್ದಾರೆ‘ ಎಂದು ಸಿಎಮ್ಎಸ್ಎ ನಿರ್ದೇಶಕ ಸಹಾಯಕ ಜಿ ಕಿಮಿಂಗ್ ತಿಳಿಸಿದ್ದಾರೆ. ಬಾಹ್ಯಾಕಾಶ ಕೇಂದ್ರ ನಿರ್ಮಾಣದ ಸಮಯದಲ್ಲಿ ಇದು ಮೊದಲ ಮಾನವಸಹಿತ ಕಾರ್ಯಾಚರಣೆಯಾಗಿದೆ ಎಂದು ಅವರು ಹೇಳಿದ್ದಾರೆ.

2003 ರಲ್ಲಿ ಚೀನಾ ತನ್ನ ಮೊದಲ ಮಾನವ ಸಹಿತ ಬಾಹ್ಯಾಕಾಶ ಉಡಾವಣೆ ಮಾಡಿತ್ತು. ಆ ಮೂಲಕ ಬಾಹ್ಯಾಕಾಶಕ್ಕೆ ಮಾನವ ಸಹಿತ ಬಾಹ್ಯಾಕಾಶ ಉಡಾವಣೆ ಮಾಡಿದ ಜಗತ್ತಿನ ಮೂರನೇ ರಾಷ್ಟ್ರ ಎಂಬ ಕೀರ್ತಿಗೆ ಚೀನಾ ಭಾಜನವಾಗಿತ್ತು. ಇದಕ್ಕೂ ಮೊದಲು ಅಮೆರಿಕ ಮತ್ತು ಸೋವಿಯತ್ ರಷ್ಯಾ ಈ ಸಾಧನೆ ಮಾಡಿತ್ತು.

ಈ ಯೋಜನೆಯಲ್ಲಿ ಚೀನಾ ಒಟ್ಟು 14 ಮಂದಿ ಗಗನ ಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆ ಹೊಂದಿದೆ. ನೂತನ ಬಾಹ್ಯಾಕಾಶ ನಿಲ್ದಾಣಕ್ಕೆ ಹೆಚ್ಚುವರಿ ವಿಭಾಗಗಳನ್ನು ಸೇರಿಸಲು ಮತ್ತು ಸಿಬ್ಬಂದಿ ಮತ್ತು ಸರಬರಾಜುಗಳನ್ನು ಕಳುಹಿಸಲು ಮುಂದಿನ ವರ್ಷದಲ್ಲಿ ಯೋಜಿಸಲಾದ 11 ಮಾನವ ಸಹಿತ ಉಡಾವಣೆಗಳಲ್ಲಿ ಹಾಲಿ ಉಡಾವಣೆ ಮೂರನೆಯದು.

ಮೂರು ತಿಂಗಳಲ್ಲಿ ಮೂರು ಸಿಬ್ಬಂದಿ ಮತ್ತು ಸರಕು ಸಾಗಣೆ ನೌಕೆಯನ್ನು ಮತ್ತೆ ಉಡಾವಣೆ ಮಾಡಲಾಗುತ್ತದೆ. ಅಂತೆಯೇ ಮುಂದಿನ ಉಡಾವಣೆಗಳಲ್ಲಿ ಮಹಿಳೆಯರನ್ನು ನಿಲ್ದಾಣಕ್ಕೆ ಕಳುಹಿಸಲು ಚೀನಾ ಯೋಜನೆ ಹೊಂದಿದೆ ಎಂದು ಹೇಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.