ETV Bharat / international

ಚೀನಾ ಗಾಯಗೊಂಡಿರುವ ಪ್ರಾಣಿಯಂತೆ ವರ್ತಿಸುತ್ತಿದೆ: ಜಿತೇಂದ್ರ ತ್ರಿಪಾಠಿ

ಇನ್ನೂ ಅನೇಕ ದೇಶಗಳು ಕ್ವಾಡ್ಗೆ ಸೇರಬಹುದು ಎಂದು ಚೀನಾಗೆ ಭಯ ಶುರುವಾಗಿದೆ. ಹಾಗಾಗಿ ಬಾಂಗ್ಲಾದಂತಹ ಸಣ್ಣ ದೇಶಗಳಿಗೆ ಬೆದರಿಕೆಯೊಡ್ಡುತ್ತಿದೆ ಎಂದು ಮಾಜಿ ರಾಯಭಾರಿ ಜಿತೇಂದ್ರ ತ್ರಿಪಾಠಿ ಎಂದು ವ್ಯಂಗ್ಯವಾಡಿದ್ದಾರೆ.

ಜಿತೇಂದ್ರ ತ್ರಿಪಾಠಿ
ಜಿತೇಂದ್ರ ತ್ರಿಪಾಠಿ
author img

By

Published : May 13, 2021, 3:45 PM IST

ನವದೆಹಲಿ: ಜಪಾನ್, ಅಮೆರಿಕ, ಆಸ್ಟ್ರೇಲಿಯಾ ಮತ್ತು ಭಾರತದ ನಾಲ್ಕು ದೇಶಗಳ ಭದ್ರತಾ ಸಂವಾದ (ಕ್ವಾಡ್) ಕ್ಕೆ ಸೇರದಂತೆ ಬಾಂಗ್ಲಾದೇಶಕ್ಕೆ ಚೀನಾ ಎಚ್ಚರಿಕೆ ನೀಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ರಾಯಭಾರಿ ಜಿತೇಂದ್ರ ತ್ರಿಪಾಠಿ, ಇನ್ನೂ ಅನೇಕ ದೇಶಗಳು ಈ ಗುಂಪಿಗೆ ಸೇರಬಹುದು ಎಂದು ಚೀನಾಗೆ ಭಯ ಶುರುವಾಗಿದೆ. ಹಾಗಾಗಿ ಬಾಂಗ್ಲಾದಂತಹ ಸಣ್ಣ ದೇಶಗಳಿಗೆ ಬೆದರಿಕೆಯೊಡ್ಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಬಾಂಗ್ಲಾದಂತೆಯೇ ಇತರ ರಾಷ್ಟ್ರಗಳು ಕ್ವಾಡ್​ಗೆ ಸೇರಿದರೆ, ಚೀನಾ ಏಕಾಂಗಿಯಾಗುತ್ತದೆ ಎಂಬ ಭೀತಿ ಶುರುವಾಗಿದೆ ಎಂದಿದ್ದಾರೆ.

ಯುಎಸ್ ನೇತೃತ್ವದ ಕ್ವಾಡ್ ಮೈತ್ರಿಕೂಟಕ್ಕೆ ಬಾಂಗ್ಲಾ ಸೇರ್ಪಡೆಗೊಳ್ಳುವುದರಿಂದ ನಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಹಾನಿಯಾಗುತ್ತದೆ ಎಂದು ಚೀನಾದ ರಾಯಭಾರಿ ಢಾಕಾ ಲಿ ಜಿಮಿಂಗ್ ಎಚ್ಚರಿಕೆ ನೀಡಿದ್ದರು.

ಈ ಹೇಳಿಕೆಗೆ ಬಾಂಗ್ಲಾದ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್ ಮೊಮೆನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ರಾಯಭಾರಿಯಿಂದ ಇಂತಹ ಹೇಳಿಕೆ ಬಂದಿರುವುದು ಬಹಳ ದುರದೃಷ್ಟಕರ ಮತ್ತು ಆಕ್ರಮಣಕಾರಿಯಾಗಿದೆ. ನಮ್ಮದು ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರವಾಗಿದ್ದು, ವಿದೇಶಾಂಗ ನೀತಿಯನ್ನು ನಿರ್ಧರಿಸಬಹುದು ಎಂದು ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ತ್ರಿಪಾಠಿ, ಚೀನಾ ಗಾಯಗೊಂಡಿರುವ ಪ್ರಾಣಿಯಂತೆ ವರ್ತಿಸುತ್ತಿದೆ. ಚೀನಾವನ್ನು ಹಿಮ್ಮೆಟ್ಟಿಸಲು ವಿಶ್ವದ ಪ್ರತಿಯೊಂದು ದೇಶವೂ ಭಾರತದ ನೆರವಿಗೆ ಬರುತ್ತಿರುವುದನ್ನು ನೋಡಿ ಅದು ಬೆಚ್ಚಿಬೆದ್ದಿದೆ ಎಂದಿದ್ದಾರೆ.

ಕೋವಿಡ್​ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ತನ್ನ ಸಹಾಯ ಕೇಳುತ್ತೆ ಎಂದು ಕೊಂಡಿದ್ದ ಚೀನಾ ಮತ್ತೆ ತಪ್ಪು ಲೆಕ್ಕಾಚಾರ ಹಾಕಿದೆ. ಭಾರತ ಸಂದಿಗ್ಧ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸುವುದರ ಜತೆಗೆ, ಲಸಿಕೆ ಉತ್ಪಾದನೆಯನ್ನೂ ಹೆಚ್ಚಿಸಿರೋದು ಡ್ರ್ಯಾಗನ್ ರಾಷ್ಟ್ರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ತ್ರಿಪಾಠಿ ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ:ಕೊಲಂಬಿಯಾದಲ್ಲಿ ಸರ್ಕಾರದ ವಿರುದ್ಧ ಭುಗಿಲೆದ್ದ ಜನರು; ಪ್ರತಿಭಟನೆಯಲ್ಲಿ 42 ಮಂದಿ ಸಾವು

ಹಿಂದೂ ಮಹಾಸಾಗರವನ್ನು ಅಪ್ಪಳಿಸುವ ಚೀನಾದ ರಾಕೆಟ್, ಆ ರಾಷ್ಟ್ರದ ಫ್ಲಾಪ್​ಶೋಗಳಲ್ಲಿ ಒಂದು ಎಂದು ವ್ಯಂಗ್ಯವಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.