ETV Bharat / international

ಚೀನಾ ಆರ್ಥಿಕತೆ ಹಿನ್ನಡೆಯು ಭಾರತಕ್ಕೆ ವರದಾನವಾಗಲಿದೆಯಾ? - ಚೀನಾ ಆರ್ಥಿಕತೆ ಕುಸಿತ

ಚೀನಾದ ಆರ್ಥಿಕತೆ ಹಿನ್ನೆಡೆಯು ಭಾರತಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ.

China's economic slowdown presents major opportunities for India
ಚೀನಾ ಆರ್ಥಿಕತೆ ಹಿನ್ನೆಡೆಯು ಭಾರತಕ್ಕೆ ವರದಾನ
author img

By

Published : Mar 22, 2022, 9:42 AM IST

ಹಾಂಕಾಂಗ್: ಚೀನಾದ ಆರ್ಥಿಕತೆ ಮಂದಗತಿಯಲ್ಲಿ ಮುಂದೆ ಸಾಗುತ್ತಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲ ಬದಲಾವಣೆ ತರುತ್ತಿದೆ. ಪರಿಣಾಮ, ಭಾರತಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಕಳೆದ ದಶಕದಲ್ಲಿ ಭಾರತ ತನ್ನ ಆರ್ಥಿಕ ಸುಧಾರಣೆಗಳನ್ನು ಯಾವುದೇ ಅಡೆತಡೆಯಿಲ್ಲದೇ ಮಾಡಿದೆ. ಮೂಲಸೌಕರ್ಯ, ಸಾರಿಗೆ, ಸಮೂಹ ಶಿಕ್ಷಣ, ಸಾಕ್ಷರತೆ, ಸಾರ್ವಜನಿಕ ಆರೋಗ್ಯ, ಇ - ಕಾಮರ್ಸ್, ಮಹಿಳೆಯರಿಗೆ ಕೆಲಸದ ಅವಕಾಶಗಳು ಸೇರಿದಂತೆ ಇತ್ಯಾದಿಗಳಲ್ಲಿ ಭಾರತ ಮುಂದಿದೆ ಎಂದು ದಿ ಹಾಂಕಾಂಗ್ ಪೋಸ್ಟ್ ವರದಿ ಮಾಡಿದೆ.

ದಿ ಹಾಂಕಾಂಗ್ ಪೋಸ್ಟ್ ವರದಿ ಪ್ರಕಾರ, 2022ರ ಮೊದಲ ತ್ರೈಮಾಸಿಕ ಅಂತ್ಯದ ವೇಳೆ (ಪ್ರಸ್ತುತ) ಚೀನಾ ತನ್ನ ಆರ್ಥಿಕತೆ ಸಾಮಾನ್ಯಗೊಳಿಸುವಲ್ಲಿ ವಿಫಲವಾಗಿದೆ. ಚೀನಾ ಆರ್ಥಿಕತೆ ಹಿನ್ನೆಡೆಯಾಗಿದೆ. ಅಮೆರಿಕದೊಂದಿಗೆ ಚೀನಾ ವ್ಯವಹಾರದ ವಿವಾದ, ಚೀನಾ ವ್ಯಾಪಾರ ವ್ಯವಹಾರದ ಮೇಲೆ ಇತರ ದೇಶಗಳ ನಂಬಿಕೆ ಕುಸಿಯುತ್ತಿರುವುದು ಚೀನಾ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಬಹುದು ಎಂದಿದೆ.

ಅದೇ ರೀತಿ ಶ್ರೀಲಂಕಾ, ಪಾಕಿಸ್ತಾನ, ಬಿಆರ್​ಐ (BRI) ಪಾಲುದಾರರು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವುದರಿಂದ ಚೀನಾದ ವಹಿವಾಟು ಕೂಡ ಕುಸಿಯುತ್ತಿದೆ. ಚೀನಾದಿಂದ ಹಣಕಾಸಿನ ಹರಿವು ಕಡಿಮೆಯಾಗಿದೆ. ಕೋವಿಡ್​ ಸಮಸ್ಯೆ ನಡುವೆ ಚೀನಾ ಆರ್ಥಿಕ ಅಡೆತಡೆಗಳನ್ನು ಎದುರಿಸುತ್ತಿದೆ. ಚೀನಾಕ್ಕೆ ಪರ್ಯಾಯ ಬಯಸುವ ಕಂಪನಿಗಳಿಗೆ ಭಾರತವು ಪ್ರಮುಖ ಜಾಗತಿಕ ಉತ್ಪಾದನಾ ಕೇಂದ್ರವಾಗುವ ಸಾಮರ್ಥ್ಯ ಹೊಂದಿದೆ ಎಂಬ ಅಂಶವನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ: 4 ತಿಂಗಳ ಬಳಿಕ ಗ್ರಾಹಕರ ಜೇಬಿಗೆ ಕತ್ತರಿ; ಪೆಟ್ರೋಲ್‌, ಡೀಸೆಲ್‌ ಲೀಟರ್‌ಗೆ ತಲಾ 80 ಪೈಸೆ, LPG ಸಿಲಿಂಡರ್‌ ಬೆಲೆ 50 ರೂ.ಏರಿಕೆ

ಅಮೆರಿಕದ ಹೆಚ್ಚಿನ ಪ್ರಮುಖ ಕಂಪನಿಗಳು ಭಾರತದಲ್ಲಿ ಈಗಾಗಲೇ ಕಾರ್ಯಾಚರಣೆ ಆರಂಭಿಸಿವೆ. ರಾಸಾಯನಿಕಗಳು, ಔಷಧಗಳು, ಪ್ಲಾಸ್ಟಿಕ್‌ಗಳು, ಜವಳಿ, ಉಡುಪು ಮತ್ತು ಉಕ್ಕು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದ ಉತ್ಪಾದನಾ ಕ್ಷೇತ್ರವು ಬಹಳ ಮುಂದೆ ಸಾಗಿದೆ. ಸದ್ಯ ಮೊಬೈಲ್ ಫೋನ್‌ಗಳು, ವೈದ್ಯಕೀಯ ಸಾಧನಗಳು, ಆಟೋಮೊಬೈಲ್ ಭಾಗಗಳು, ಟೆಲಿಕಾಂ ಉಪಕರಣಗಳು, ಆಹಾರ ಉತ್ಪನ್ನಗಳು, ಎಲೆಕ್ಟ್ರಾನಿಕ್ಸ್ ಸೇರಿದಂತೆ ಹೊಸ ಮತ್ತು ವೈವಿಧ್ಯಮಯ ಕ್ಷೇತ್ರಗಳಲ್ಲಿ ಮುಂದೆ ಸಾಗಲು ಪ್ರಯತ್ನಿಸುತ್ತಿದೆ. ಹಾಗಾಗಿ ಚೀನಾ ಆರ್ಥಿಕತೆ ಹಿನ್ನೆಡೆ ಭಾರತಕ್ಕೆ ವರದಾನವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.