ETV Bharat / international

ಟಿಬೆಟ್​​ನ ಬ್ರಹ್ಮಪುತ್ರ ನದಿಗೆ ಅಣೆಕಟ್ಟು ನಿರ್ಮಾಣ ಮಾಡಲು ಮುಂದಾದ ಚೀನಾ

author img

By

Published : Nov 30, 2020, 5:44 PM IST

ಚೀನಾದ ಈ ನಿರ್ಧಾರದಿಂದ ಇದೀಗ ಭಾರತ ಮತ್ತು ಬಾಂಗ್ಲಾದೇಶಕ್ಕೆ ಕಳವಳ ಉಂಟಾಗಿದೆ. ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಟಿಬೆಟ್​​ನಲ್ಲಿ ಚೀನಾ ಬೃಹತ್ ಅಣೆಕಟ್ಟು ನಿರ್ಮಿಸಿದ್ದೇ ಆದ್ರೆ, ಬಾಂಗ್ಲಾದೇಶದ ಅನೇಕ ನದಿ ತೀರದ ರಾಜ್ಯಗಳಿಗೆ ಇದು ಅಪಾಯವುಂಟು ಮಾಡುವ ಸಾಧ್ಯತೆಗಳಿವೆ..

ಟಿಬೆಟ್​ನಲ್ಲಿ ಹಿರಿಯುವ ಬ್ರಹ್ಮಪುತ್ರ ನದಿ
ಟಿಬೆಟ್​ನಲ್ಲಿ ಹಿರಿಯುವ ಬ್ರಹ್ಮಪುತ್ರ ನದಿ

ಬೀಜಿಂಗ್ : ಟಿಬೆಟ್​ನಲ್ಲಿ ಹರಿಯುವ ಬ್ರಹ್ಮಪುತ್ರ ನದಿಯಲ್ಲಿ ಜಲವಿದ್ಯುತ್​ ಯೋಜನೆ ನಿರ್ಮಿಸಲು ಚೀನಾ ಮುಂದಾಗಿದೆ. ಮುಂದಿನ ವರ್ಷ ಜಾರಿಗೆ ಬರಲಿರುವ 14ನೇ ಪಂಚವಾರ್ಷಿಕ ಯೋಜನೆಯಲ್ಲಿ ಇದಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಚೀನಾದ ಮಾಧ್ಯಮವೊಂದು ವರದಿ ಮಾಡಿದೆ.

ಗುರುವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಯಾನ್ ಜಿಯಾಂಗ್, ದೇಶದ 14ನೇ ಪಂಚವಾರ್ಷಿಕ ಯೋಜನೆ (2021-25) ಮತ್ತು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯು 2035ರವರೆಗೆ ರೂಪಿಸಿರುವ ದೀರ್ಘಕಾಲೀನ ಗುರಿಗಳ ಅಡಿ ಈ ಪ್ರಸ್ತಾಪಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಹೇಳಿದ್ದಾರೆ. ಈ ಯೋಜನೆಯು ಜಲ ಸಂಪನ್ಮೂಲ ನಿರ್ವಹಣೆ ಮತ್ತು ಆಂತರಿಕ ಭದ್ರತೆಗೆ ನೆರವಾಗಲಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಅನ್ನದಾತರ ಬೃಹತ್​ ಪ್ರತಿಭಟನೆಯ ನಡುವೆಯೂ ಕೃಷಿ ಕಾಯ್ದೆಗಳ ಸಮರ್ಥಿಸಿಕೊಂಡ ಮೋದಿ..!

ಚೀನಾದ ಈ ನಿರ್ಧಾರದಿಂದ ಇದೀಗ ಭಾರತ ಮತ್ತು ಬಾಂಗ್ಲಾದೇಶಕ್ಕೆ ಕಳವಳ ಉಂಟಾಗಿದೆ. ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಟಿಬೆಟ್​​ನಲ್ಲಿ ಚೀನಾ ಬೃಹತ್ ಅಣೆಕಟ್ಟು ನಿರ್ಮಿಸಿದ್ದೇ ಆದ್ರೆ, ಬಾಂಗ್ಲಾದೇಶದ ಅನೇಕ ನದಿ ತೀರದ ರಾಜ್ಯಗಳಿಗೆ ಇದು ಅಪಾಯವುಂಟು ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಚೀನಾ ಈಗಾಗಲೇ 2015ರಲ್ಲಿ 1.5 ಬಿಲಿಯನ್ ಯುಎಸ್​​ ಡಾಲರ್ ವೆಚ್ಚದಲ್ಲಿ ಜಲವಿದ್ಯುತ್ ಸ್ಥಾವರ ಸ್ಥಾಪಿಸಿದೆ. ಯಾರ್ಲುಂಗ್ ಜಾಂಗ್ಬೊ ಗ್ರ್ಯಾಂಡ್ ಕ್ಯಾನ್ಯನ್ ಇರುವ ಮೆಡೋಗ್ ಕೌಂಟಿಯಲ್ಲಿ "ಸೂಪರ್ ಹೈಡ್ರೋಪವರ್ ಸ್ಟೇಷನ್" ನಿರ್ಮಿಸಲು ಚೀನಾ ಯೋಜಿಸುತ್ತಿದೆ ಎಂಬ ಉಹಾಪೋಹಗಳು ವರ್ಷಗಳಿಂದ ಬರುತ್ತಿವೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಟಿಬೆಟ್ ಸುಮಾರು 200 ಮಿಲಿಯನ್ ಕಿಲೋವ್ಯಾಟ್ ನೀರಿನ ಸಂಪನ್ಮೂಲವನ್ನು ಹೊಂದಿದೆ. ಇದು ಚೀನಾದಲ್ಲಿ ಒಟ್ಟು ಶೇ. 30ರಷ್ಟಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.