ನವದೆಹಲಿ: ಚೀನಾದ ಹೊಸ ಗಡಿ ಕಾನೂನು ಜಾರಿಗೆ ಬರುವ ಎರಡು ತಿಂಗಳ ಮುನ್ನವೇ ರಾಷ್ಟ್ರೀಯ ಗಡಿಗಳನ್ನು ಬಲಪಡಿಸಿಕೊಳ್ಳಲು ಟಿಬೆಟ್ ಬೌದ್ಧ ನಾಯಕ 11ನೇ ಪಂಚೆನ್ ಲಾಮಾ ಗೈನ್‌ಕೇನ್ ನಾರ್ಬು ಅವರ ಬೆಂಬಲವನ್ನು ಪಡೆದಿದೆ. ಆ ಮೂಲಕ ಭಾರತ-ಚೀನಾ ಗಡಿ ಮೇಲೆ ಪೂರ್ವಭಾವಿ ಕ್ರಮವನ್ನು ಕೈಗೊಂಡಿದೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.
ಟಿಬೆಟ್ ರಾಜಧಾನಿ ಲಾಸಾದಲ್ಲಿ ನಡೆದ ಸಮಾರಂಭದಲ್ಲಿ 31 ವರ್ಷದ ಪಂಚೆನ್ ಲಾಮಾ, ಕಳೆದ ಶುಕ್ರವಾರ 1 ಮಿಲಿಯನ್ ಯುವಾನ್ (ಸುಮಾರು 156,000 ಯುಎಸ್ ಡಾಲರ್) ಕೊಡುಗೆ ನೀಡಿದ್ದಾರೆ. ಟಿಬೆಟಿಯನ್ನರಿಗೆ 'ರಾಷ್ಟ್ರೀಯ ಗಡಿಗಳನ್ನು ಬಲಪಡಿಸಲು' ಹಾಗೂ ಟಿಬೆಟ್‌ನಲ್ಲಿ ಬೌದ್ಧ ನಾಯಕರ ನೆಲೆಯನ್ನು ಬಲಪಡಿಸಲು ಈ ದೇಣಿಗೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ದೇಣಿಗೆಯ ಮೂಲಕ ಟಿಬೆಟಿಯನ್ ಬೌದ್ಧಧರ್ಮದ ಹೆಚ್ಚಿನ ಯುವ ಪ್ರತಿನಿಧಿಗಳು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ರಾಷ್ಟ್ರೀಯ ಏಕತೆ, ಜನಾಂಗೀಯ ಏಕತೆ, ಸ್ಥಿರ ಮತ್ತು ಕ್ರಮಬದ್ಧ ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಾರೆಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಗಡಿಗಳನ್ನು ಬಲಪಡಿಸಲು ಮತ್ತು ಇತರ ಅಭಿವೃದ್ಧಿ ಚಟುವಟಿಕೆಗಳನ್ನು ಕ್ರೋಢೀಕರಿಸಲು ಈ ಹಣವನ್ನು ಬಳಸಲಾಗುತ್ತದೆ ಎಂದು ಮಾಧ್ಯಮ ವರದಿ ಹೇಳಿದೆ. 2021ರ ಅ.23 ರಂದು ಘೋಷಿಸಲಾದ ಗಡಿ ಕಾನೂನಿನ ಆರ್ಟಿಕಲ್ 11 ಅನ್ನು ರಾಜ್ಯವು ಭೂ ಗಡಿಗಳಲ್ಲಿ ಪ್ರಚಾರ ಮತ್ತು ಶಿಕ್ಷಣವನ್ನು ಬಲಪಡಿಸುತ್ತದೆ. ಚೀನಾ ರಾಷ್ಟ್ರ ಸಮುದಾಯದ ಬಲವಾದ ಪ್ರಜ್ಞೆಯನ್ನು ನಿರ್ಮಿಸುತ್ತದೆ. ದೇಶದ ಚೈತನ್ಯವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಮಾತೃಭೂಮಿಯ ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುವುದು ಹಾಗೂ ನಾಗರಿಕರ ರಾಷ್ಟ್ರೀಯ ಪರಿಕಲ್ಪನೆ, ತಾಯ್ನಾಡಿನ ಭದ್ರತೆಯ ಜಾಗೃತಿಯನ್ನು ಹೆಚ್ಚಿಸುವುದು ಜೊತೆ ಜೊತೆಗೆ ಸಾಮಾನ್ಯ ಆಧ್ಯಾತ್ಮಿಕ ನೆಲೆಯನ್ನು ನಿರ್ಮಿಸುವ ಉದ್ದೇಶವಾಗಿದೆ.
ಟಿಬೆಟ್ ಧರ್ಮಗುರುಗಳ ಮೂಲಕ ಚೀನಾ ಕುತಂತ್ರ?
ಮಂಗಳವಾರ (ಅಕ್ಟೋಬರ್ 26, 2021) ಕ್ಸಿಗೇಜ್‌ನಲ್ಲಿರುವ ತಾಶಿಲ್‌ಹುಂಪೋ ಮಠದಲ್ಲಿ ಪಂಚೆನ್ ಲಾಮಾ ಅವರಿಗೆ ಆಧುನಿಕ ಶಿಕ್ಷಣದಲ್ಲಿ ಡಾಕ್ಟರೇಟ್ ಪದವಿಗೆ ಸಮಾನವಾದ 'ಕಚೆನ್ ಪದವಿ'ಯನ್ನು ನೀಡಲಾಗಿದೆ. ನಂತರ ಪಂಚೆನ್ ಲಾಮಾ ಅವರು ದಾನವಾಗಿ 1 ಮಿಲಿಯನ್ ಯುವಾನ್ ಉಡುಗೊರೆ ನೀಡಿದ್ದಾರೆ. ಚೀನಾ ನೇಮಿಸಿದ ಪಂಚೆನ್ ಲಾಮಾ ಬೀಜಿಂಗ್‌ಗೆ ತಮ್ಮ ಬೆಂಬಲದಲ್ಲಿ ಸ್ಥಿರವಾಗಿದ್ದಾರೆ. 2021ರ ಮಾರ್ಚ್‌ನಲ್ಲಿ ಅವರು ಟಿಬೆಟಿಯನ್ ಬೌದ್ಧಧರ್ಮವು ಚೀನಾದ ಗುಣಲಕ್ಷಣಗಳೊಂದಿಗೆ ಸಮಾಜವಾದಿ ಸಮಾಜದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುತ್ತದೆ. 'ಸಿನಿಕೀಕರಣ' ಕಡೆಗೆ ಚಲಿಸುತ್ತದೆ ಎಂಬುದನ್ನ ನಂಬುವುದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದರು.
ಧಾರ್ಮಿಕ ನಾಯಕ 25 ವರ್ಷಗಳಿಗೂ ಹೆಚ್ಚು ಕಾಲ ಬೌದ್ಧ ಸೂತ್ರಗಳನ್ನು ಅಧ್ಯಯನ ಮಾಡುತ್ತಿದ್ದ. ಈತ ಈಗಾಗಲೇ ಚೀನಾದ ಉನ್ನತ ರಾಜಕೀಯ ಸಲಹಾ ಸಂಸ್ಥೆಯಾದ ಚೀನೀ ಪೀಪಲ್ಸ್ ಪೊಲಿಟಿಕಲ್ ಕನ್ಸಲ್ಟೇಟಿವ್ ಕಾನ್ಫರೆನ್ಸ್‌ನ ರಾಷ್ಟ್ರೀಯ ಸಮಿತಿಯ ಸ್ಥಾಯಿ ಸಮಿತಿಯ ಭಾಗವಾಗಿದ್ದಾರೆ. ಪಂಚನ್ ಲಾಮಾ ಅವರ ಉಪದೇಶವು ಹಲವಾರು ಕಾರಣಗಳಿಗಾಗಿ ಗಮನಾರ್ಹವಾಗಿದೆ. ಟಿಬೆಟಿಯನ್ ಬೌದ್ಧರಲ್ಲಿ ಅವರ ಬೆಂಬಲದ ನೆಲೆಯನ್ನು ಕ್ರೋಢೀಕರಿಸುವ ಪ್ರಯತ್ನವಾಗಿ ನೋಡುವುದರ ಜೊತೆಗೆ, ಮುಂದಿನ ದಲೈ ಲಾಮಾರನ್ನು ಸ್ಥಾಪಿಸುವ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ.
ಟಿಬೆಟಿಯನ್ ಬೌದ್ಧಧರ್ಮದ ಗೆಲುಗ್ ಸಂಪ್ರದಾಯದಲ್ಲಿ, ಮುಂದಿನ ದಲೈ ಲಾಮಾರನ್ನು ಹುಡುಕುವ ಪ್ರಕ್ರಿಯೆಯನ್ನು ಮುನ್ನಡೆಸುವ ಅಧಿಕಾರ ಮತ್ತು ಸ್ಥಾನಮಾನದ ವಿಷಯದಲ್ಲಿ ಪಂಚನ್ ಲಾಮಾ ದಲೈ ಲಾಮಾ ನಂತರ ಎರಡನೇ ಸ್ಥಾನದಲ್ಲಿ ಇದ್ದಾರೆ ಎನ್ನಲಾಗಿದೆ. ಟಿಬೆಟ್ ಪ್ರದೇಶದಿಂದ (ಕ್ಸಿಜಾಂಗ್) ಸ್ಥಳೀಯ ಟಿಬೆಟಿಯನ್ನರನ್ನು ಏಕೀಕರಿಸುವ ಚೀನಾದ ಪ್ರಯತ್ನವು ಹಲವಾರು ರಸ್ತೆ ತಡೆಗಳನ್ನು ಎದುರಿಸಿದೆ. ಟಿಬೆಟಿಯನ್ನರನ್ನು ಪೀಪಲ್ಸ್ ಲಿಬರೇಶನ್ ಆರ್ಮಿಗೆ (ಪಿಎಲ್‌ಎ) ಸೇರಿಸಿಕೊಳ್ಳುವ ಕ್ರಮವು ಸೀಮಿತ ಯಶಸ್ಸನ್ನು ಕಂಡಿದೆ. ಹೆಚ್ಚಿನ ಟಿಬೆಟಿಯನ್ನರು ಪೊಲೀಸರಿಗೆ ಸೇರಲು ಬಯಸುತ್ತಿದ್ದಾರೆ ಎಂದು ವರದಿಯಾಗಿದೆ.