ಚೀನಾ : ರೋಬೊಟ್‌ಗಳು ಮಾಡದ ಕೆಲಸಗಳೇ ಇಲ್ಲ. ಮನುಷ್ಯನ ಅತೀ ಮುಖ್ಯ ಅಂಗ ಮೆದುಳಿನ ಶಸ್ತ್ರ ಚಿಕಿತ್ಸೆಯನ್ನೂ ಈಗ ರೋಬೊಟ್ ಮಾಡಬಹುದು. ಮೆದುಳೇ ನರಗಳ ಮೂಲಕ ದೇಹದ ಪ್ರತಿಯೊಂದು ಅಂಗವನ್ನೂ ನಿಯಂತ್ರಿಸುತ್ತೆ. ಒಂಚೂರು ಹೆಚ್ಚುಕಮ್ಮಿಯಾದ್ರೂ ಅಂಗವೈಕಲ್ಯವೇ ಆಗಿಬಿಡುತ್ತೆ. ಆದ್ರೇ, ನರವಿಜ್ಞಾನ ಕ್ಷೇತ್ರದಲ್ಲಿ ಚೀನಾ ಮಹತ್ತರ ಹೆಜ್ಜೆ ಇರಿಸಿದೆ. ತುಂಬಾ ಕಠಿಣ ಶ್ರಮದ ಬಳಿಕ ನರಶಾಸ್ತ್ರ ಶಸ್ತ್ರ ಚಿಕಿತ್ಸೆ ಮಾಡುವ ರೋಬೊಟಿಕ್ ನ್ಯೋರೊ ಸರ್ಜನ್‌ನ ಕಂಡು ಹಿಡಿದಿದೆ ಚೀನಾ. ಆರಂಭಿಕವಾಗಿ ಮನುಷ್ಯನ ಮೇಲೆ ಪ್ರಯೋಗಿಸಿ ಈಗ ಯಶಸ್ಸು ಕಂಡಿದೆ.
ಇದಕ್ಕೆ (Remebot) ರೆಮೆಬೊಟ್ ಅಂತ ಹೆಸರಿಡಲಾಗಿದೆ. ಮೆದುಳಿನ ಶಸ್ತ್ರ ಚಿಕಿತ್ಸೆಗೆ ರೆಮೆಬೊಟ್‌ನ ಮತ್ತಷ್ಟು ನಿಖರ, ನಿರ್ಧಿಷ್ಟ, ಸಮರ್ಥವಾಗಿ ಬಳಸಿಕೊಳ್ಳಲು ವೈದ್ಯರು ಮುಂದಾಗಿದ್ದಾರೆ. ಸೆಲೆಬ್ರೆಲ್ ಹೆಮಾಟೊಮಾ ರೋಗದಿಂದ ಬಳಲುತ್ತಿದ್ದ ರೋಗಿಯ ಶಸ್ತ್ರ ಚಿಕಿತ್ಸೆ ನಡೆಸುವಾಗ ಸರ್ಜನ್‌ಗಳಿಗೆ ರೆಮೆಬೊಟ್ ನೆರವಾಗಿರೋದು ಸಾಬೀತಾಗಿದೆ. CNET ವೀಡಿಯೋದಲ್ಲಿ ವಿವರಿಸಿದಂತೆ, ಈ ರೆಮೆಬೊಟ್ ಕರಾರುವಕ್ಕಾಗಿ ರಕ್ತ ಸಾಗಿಸುವ ನಾಳ ಗುರಿಯಾಗಿಸಿ ಶಸ್ತ್ರ ಚಿಕಿತ್ಸೆ ನಡೆದಿತ್ತು. ೩೦ ನಿಮಿಷದ ಈ ಪ್ರಕ್ರಿಯೆಯಲ್ಲಿ ರೆಮೆಬೊಟ್ ತುಂಬಾ ಕರಾರುವಕ್ಕಾಗಿ ಸರ್ಜನ್‌ಗಳಿಗೆ ಸಹಾಯಕವಾಗಿದೆ.
ಚೀನಾದ ಸಾಧನೆ ಬರೀ ರೆಮೆಬೋಟ್‌ಗಷ್ಟೇ ಸೀಮಿತವಾಗಿಲ್ಲ. ಇತ್ತೀಚೆಗೆ ಮೊದಲ ರಿಮೋಟ್ ರೋಬೊಟ್‌ನಿಂದ ೫ಜಿ ನೆಟ್ ವರ್ಕ್ ಬಳಸಿ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಆಪರೇಷನ್ ಥಿಯೇಟರ್‌ನಿಂದ ೩೦ ಮೈಲಿ ದೂರದಲ್ಲಿದ್ದ ಸರ್ಜನ್, ಪ್ರಾಣಿಯಲ್ಲಿದ್ದ ಲೀವರ್‌ನ ತೆಗೆಯಲು ರಿಮೋಟ್ ರೋಬೊಟ್‌ನ ಕೈ ಬಳಸಗಾಗಿತ್ತು. ಅಂದುಕೊಂಡಂತೆಯೇ ಸರ್ಜನ್‌ವೊಬ್ಬರು ರಿಮೋಟ್ ರೋಬೊಟ್ ಬಳಸಿ ಪ್ರಾಣಿಯೊಳಗಿನ ಲೀವರ್‌ನ ಹೊರ ತೆಗೆಯುವಲ್ಲಿ ಸಕ್ಸಸ್ ಕಂಡಿದ್ದರು. ಇದರಲ್ಲಿ ಬಳಸಲಾದ 5ಜಿ ತಂತ್ರಜ್ಞಾನ ಇಂಟರ್‌ನೆಟ್‌ಗೆ ಹೋಲಿಸಿದ್ರೇ, 20ರಷ್ಟು ಹೆಚ್ಚು ಸ್ಪೀಡಾಗಿದೆ.
ವೈದ್ಯರಿಗೆ ಹೋಲಿಸಿದ್ರೇ ರೋಬೊಟ್ ಕೈಗಳಿಗೆ ಬರೀ 1 ಸೆಕೆಂಡ್ ಸಾಕು. ಇದಕ್ಕೆ ಸರ್ಜಿಕಲ್ ಟೆೆಕ್ನಾಲಜಿ ಅಂತ ಹೆಸರಿಸಲಾಗಿದೆ. ವೈದ್ಯರಿಗೆ ಹೋಲಿಸಿದ್ರೇ ಇದು ತುಂಬಾ ಸೇಫ್ ಅಂತೆ. ಇಂಥ ತಂತ್ರಜ್ಞಾನ ಕಮರ್ಷಿಯಲಾಗಿ ಬಳಕೆಗೆ ಸಾಧ್ಯವಾದ್ರೇ, ಸರ್ಜನ್‌ಗಳಿಗಷ್ಟೇ ಅಲ್ಲ ರೋಗಿಗಳ ಪಾಲಿಗೂ ವರದಾನವಾಗಲಿದೆ. ಒಂದುವೇಳೆ ರೋಗಿ ಇರುವ ಸ್ಥಳದಿಂದ ಬಿಟ್ಟು ಎಷ್ಟೇ ದೂರದಲ್ಲಿದ್ದರೂ ವೈದ್ಯರು ರೋಗಿಯನ್ನ ರಿಮೋಟ್ ರೋಬೊಟ್ ಬಳಸಿ ಸರಳವಾಗಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ, ಆತನನ್ನ ಗುಣಪಡಿಸಲು ಸಾಧ್ಯವಾಗಲಿದೆ.