ETV Bharat / international

ಶತ್ರುಗಳ ಶತ್ರು ಮಿತ್ರ.. ತಾಲಿಬಾನ್​ಗೆ 228 ಕೋಟಿ ರೂ. ನೆರವು ಘೋಷಿಸಿದ ಚೀನಾ

ಆಫ್ಘನ್​ನಲ್ಲಿ ರಚಿಸಲಾಗಿರುವ ತಾಲಿಬಾನ್ ಸರ್ಕಾರಕ್ಕೆ ಚೀನಾ ಆರ್ಥಿಕ ನೆರವು ಘೋಷಿಸಿದೆ. ಅಲ್ಲದೇ, ಔಷಧ ಸೇರಿ ಇನ್ನಿತರ ಸೌಲಭ್ಯಗಳನ್ನೂ ಒದಗಿಸುವುದಾಗಿ ಹೇಳಿದೆ.

ಚೀನಾ-ತಾಲಿಬಾನ್
ಚೀನಾ-ತಾಲಿಬಾನ್
author img

By

Published : Sep 9, 2021, 11:06 AM IST

ಬೀಜಿಂಗ್​(ಚೀನಾ): ಇಡೀ ವಿಶ್ವಕ್ಕೆ ಮಾರಕವಾಗಿರುವ ತಾಲಿಬಾನ್​​ಗೆ ಚೀನಾ ಹಾಗೂ ಪಾಕಿಸ್ತಾನ ಬೇಷರತ್ ಬೆಂಬಲ ಸೂಚಿಸುತ್ತಲೇ ಇವೆ. ಆಫ್ಫನ್​ನಲ್ಲಿ ತಾಲಿಬಾನ್​ ಸರ್ಕಾರದ ಗುಣಗಾನ ಮಾಡುತ್ತಿರುವ ಡ್ರ್ಯಾಗನ್ ಸರ್ಕಾರ 31 ಮಿಲಿಯನ್​ ಡಾಲರ್​ ನೆರವು ಘೋಷಿಸಿದೆ.

ಇತ್ತೀಚೆಗಷ್ಟೇ ತಾಲಿಬಾನ್​ ನೂತನ ಮಧ್ಯಂತರ ಸರ್ಕಾರ ಘೋಷಿಸಿದ್ದು, ಆಫ್ಘನ್​ನಲ್ಲಿ ಸೃಷ್ಟಿಯಾಗಿದ್ದ ಅರಾಜಕತೆ ಕೊನೆಗೊಳಿಸಿದೆ. ಆಡಳಿತ ಮರುಸ್ಥಾಪಿಸಲು ಇದೊಂದು ಅಗತ್ಯಕ್ರಮ. ಅಲ್ಲದೇ, ವಿಶಾಲವಾದ ರಾಜಕೀಯ ರಚನೆ ಮತ್ತು ವಿವೇಕಯುತ ದೇಶೀಯ - ವಿದೇಶಿ ನೀತಿಯನ್ನು ಅನುಸರಿಸುವುದಾಗಿ ತಾಲಿಬಾನ್ ಭರವಸೆ ನೀಡಿದೆ.

ಹೀಗಾಗಿ ತಾಲಿಬಾನ್ ಸರ್ಕಾರಕ್ಕೆ ನಾವು ಬೆಂಬಲ ನೀಡುವುದರ ಜತೆಗೆ ಹಣಕಾಸಿನ ನೆರವು ನೀಡುತ್ತಿದ್ದೇವೆ ಎಂದು ಚೀನಾ ವಿದೇ​ಶಾಂಗ ಸಚಿವ ವಾಂಗ್‌ ಯಿ ಹಾಗೂ ವಿದೇ​ಶಾಂಗ ವಕ್ತಾರ ವಾಂಗ್‌ ವೆನ್ಬಿ​ನ್‌ ಹೇಳಿ​ದ್ದಾ​ರೆ.

ಚಳಿಗಾಲದ ಆಹಾರ, ಲಸಿಕೆ ಮತ್ತು ಔಷಧ ಸಹಾಯಕ್ಕಾಗಿ 31 ಮಿಲಿಯನ್ ಡಾಲರ್ (2,28,73,50,500 ಕೋಟಿ ರೂ) ನೆರವು ನೀಡುತ್ತೇವೆ ಎಂದಿದ್ದಾರೆ. ಅಲ್ಲದೇ, ಮೊದಲ ಕಂತಿನಲ್ಲಿ 30 ಲಕ್ಷ ಡೋಸ್‌ ಲಸಿಕೆಯನ್ನು ಕಳುಹಿಸಲಾಗುವುದು ಎಂದು ಅವ​ರು ತಿಳಿ​ಸಿ​ದ್ದಾ​ರೆ.

ಇದನ್ನೂ ಓದಿ: 'ನಾನು ಕಾಬೂಲ್​ ತೊರೆದರೆ ಬಂದೂಕುಗಳು ಮೌನವಾಗುತ್ತವೆ ಎಂದು ತಿಳಿದಿತ್ತು.. ಕ್ಷಮೆ ಇರಲಿ..': ಅಶ್ರಫ್ ಘನಿ

ಜತೆಗೆ ಆಫ್ಘನ್​ನಲ್ಲಿ ಆರ್ಥಿಕತೆ ಮತ್ತು ಸಮಾಜವನ್ನು ಪುನರ್ ​ನಿರ್ಮಾಣ ಮಾಡಲು ಸಹಾಯ ಮಾಡುತ್ತೇವೆ. ಭಯೋತ್ಪಾದಕ ಗುಂಪುಗಳು ಮತ್ತು ಕಾನೂನು ಬಾಹಿರ ಔಷಧ ವ್ಯಾಪಾರದ ವಿರುದ್ಧ ಹೋರಾಡಲು ಡ್ರ್ಯಾಗನ್ ರಾಷ್ಟ್ರವು ಪಾಕ್ ಹಾಗೂ ಆಫ್ಘನ್ ಜತೆಗೆ ಕೆಲಸ ಮಾಡುವುದಾಗಿ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.