ETV Bharat / international

ಕೋವಿಡ್​ ಪತ್ತೆಯಾಗುವ ಮೊದಲೇ ವುಹಾನ್ ಸಂಶೋಧಕರು ಚಿಕಿತ್ಸೆ ಕೋರಿದ್ದರು : ವರದಿ ತಳ್ಳಿ ಹಾಕಿದ ಚೀನಾ

ಹಲವು ಆರೋಪ, ನಿರಾಕರಣೆಗಳು ಮತ್ತು ಅಧ್ಯಯನಗಳ ಬಳಿಕವೂ ಕೋವಿಡ್​ ವೈರಸ್ ಎಲ್ಲಿಂದ ಹುಟ್ಟಿಕೊಂಡಿತು ಎಂಬುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಆದರೆ, ಜಗತ್ತಿನ ಹೆಚ್ಚಿನ ರಾಷ್ಟ್ರಗಳ ಚೀನಾದತ್ತ ಬೊಟ್ಟು ಮಾಡುತ್ತಿವೆ..

China Denies Claim Of Illness At Wuhan Lab Before Covid
ವಾಲ್ ಸ್ಟ್ರೀಟ್​ ಜರ್ನಲ್ ವರದಿ ತಳ್ಳಿ ಹಾಕಿದ ಚೀನಾ
author img

By

Published : May 25, 2021, 12:19 PM IST

ಬೀಜಿಂಗ್(ಚೀನಾ ): ಮೊದಲ ಕೋವಿಡ್ ಪ್ರಕರಣ ಪತ್ತೆಯಾಗುವ ಒಂದು ತಿಂಗಳ ಮೊದಲೇ ವುಹಾನ್ ಇನ್ಸ್​ಟಿಟ್ಯೂಟ್​ ಆಫ್​ ವೈರಾಲಜಿಯ (ಡಬ್ಲ್ಯುಐವಿ) ಮೂವರು ಸಂಶೋಧಕರು ಕೋವಿಡ್​ಗೆ ಚಿಕಿತ್ಸೆ ಕೋರಿದ್ದರು ಎಂಬ ಮಾಧ್ಯಮ ವರದಿಯನ್ನು ಚೀನಾ ತಳ್ಳಿ ಹಾಕಿದೆ.

ಡಬ್ಲ್ಯುಐವಿಯ ಮೂವರು ಸಂಶೋಧಕರು 2019ರಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆಯಾಗುವ ಒಂದು ತಿಂಗಳ ಮೊದಲೇ ಕೋವಿಡ್​ ಸೋಂಕಿಗೆ ಚಿಕಿತ್ಸೆ ಕೋರಿದ್ದರು ಎಂದು ಅಮೆರಿಕದ ದಿ ವಾಲ್ ಸ್ಟ್ರೀಟ್​ ಜರ್ನಲ್ ವರದಿ ಮಾಡಿತ್ತು ಮತ್ತು ಇದಕ್ಕೆ ಪೂರಕವಾದ ದಾಖಲೆ ಒದಗಿಸುವುದಾಗಿ ಹೇಳಿತ್ತು.

ವಾಲ್ ಸ್ಟ್ರೀಟ್​ ಜರ್ನಲ್​​ನ ಈ ವರದಿಯು, ಕೋವಿಡ್ ಸೋಂಕು ಚೀನಾ ಹುಟ್ಟು ಹಾಕಿದ್ದು ಎಂಬ ಜಾಗತಿಕ ರಾಷ್ಟ್ರಗಳ ವಾದವನ್ನು ಬಲಪಡಿಸಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಝಾಹೋ ಲಿಜಿಯಾನ್, ಇದು 'ಶುದ್ಧ ಸುಳ್ಳು', 2019 ಡಿಸೆಂಬರ್​ 30ರವರೆಗೆ ಡಬ್ಲ್ಯುಐವಿಯ ಸಿಬ್ಬಂದಿ ಮತ್ತು ಪದವೀಧರ ವಿದ್ಯಾರ್ಥಿಗಳು ಯಾರಲ್ಲೂ ಕೋವಿಡ್ ಸೋಂಕು ಕಂಡು ಬಂದಿಲ್ಲ ಎಂದಿದ್ದಾರೆ. ಚೀನಾ ಉನ್ನತ ಇಲಾಖೆಗಳ ಪ್ರಕಾರ, ಡಬ್ಲ್ಯುಐವಿಯಲ್ಲಿ ಕೋವಿಡ್​ ವೈರಸ್​ ಬಗ್ಗೆ ಅಧ್ಯಯನ ಮಾಡಲಾಗಿದೆ ಅಷ್ಟೇ..

ಚೀನಾದ ಲ್ಯಾಬ್​ನಿಂದ ಕೋವಿಡ್ ವೈರಸ್​ ಹರಡಿದೆ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಗಂಭೀರ ಆರೋಪ ಮಾಡಿದ್ದರು. ಟ್ರಂಪ್ ಆರೋಪಕ್ಕೆ ಹಲವು ರಾಷ್ಟ್ರಗಳು ಧ್ವನಿಗೂಡಿಸಿದ್ದವು. ಆದರೆ, ಈ ಆರೋಪವನ್ನು ಪ್ರತಿ ಬಾರಿಯೂ ಚೀನಾ ತಳ್ಳಿ ಹಾಕಿತ್ತು.

ಓದಿ : ಕೋವಿಡ್ ಪತ್ತೆಯಾಗುವ ಮೊದಲೇ ಚಿಕಿತ್ಸೆ ಕೋರಿದ್ದರಂತೆ ಚೀನಾದ ಸಂಶೋಧಕರು!

ಕೋವಿಡ ವೈರಸ್​ನ ಮೂಲ ಕಂಡು ಹಿಡಿಯುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಮತ್ತು ಚೀನಾದ ಆರೋಗ್ಯ ತಜ್ಞರು ವುಹಾನ್​ನಲ್ಲಿ ಉಳಿದುಕೊಂಡು ನಾಲ್ಕು ವಾರಗಳ ಕಾಲ ಅಧ್ಯಯನ ನಡೆಸಿದ್ದರು.

ಬಳಿಕ, ಕೋವಿಡ್ ವೈರಸ್​ ಚೀನಾದ ಲ್ಯಾಬ್​ನಿಂದ ಹರಡಿದೆ ಎಂಬುವುದಕ್ಕೆ ಪುರಾವೆಗಳಿಲ್ಲ ಎಂದು ವರದಿ ಕೊಟ್ಟಿದ್ದರು. ಕೆಲ ಮೂಲಗಳ ಪ್ರಕಾರ, ಡಬ್ಲ್ಯುಹೆಚ್​ಒ ತಜ್ಞರಿಗೆ ವುಹಾನ್​ನಲ್ಲಿ ಸ್ವತಂತ್ರವಾಗಿ ಅಧ್ಯಯನ ಮಾಡಲು ಬಿಟ್ಟಿಲ್ಲ ಎನ್ನಲಾಗುತ್ತಿದೆ.

ಹಲವು ಆರೋಪ, ನಿರಾಕರಣೆಗಳು ಮತ್ತು ಅಧ್ಯಯನಗಳ ಬಳಿಕವೂ ಕೋವಿಡ್​ ವೈರಸ್ ಎಲ್ಲಿಂದ ಹುಟ್ಟಿಕೊಂಡಿತು ಎಂಬುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಆದರೆ, ಜಗತ್ತಿನ ಹೆಚ್ಚಿನ ರಾಷ್ಟ್ರಗಳ ಚೀನಾದತ್ತ ಬೊಟ್ಟು ಮಾಡುತ್ತಿವೆ.

ಏನೇ ಆದರೂ, ಕೋವಿಡ್ ವೈರಸ್​ ಜಾಗತಿಕ ಬಲಿಷ್ಠ ರಾಷ್ಟ್ರಗಳ ಆರ್ಥಿಕತೆಯ ಮೇಲೆ ಹೊಡೆತ ನೀಡಿ ಸಂಕಷ್ಟಕ್ಕೆ ದೂಡಿದ್ದು ಸುಳ್ಳಲ್ಲ. ಇದರೊಂದಿಗೆ ತೀವ್ರ ಆರೋಗ್ಯ ಬಿಕ್ಕಟ್ಟು ಸೃಷ್ಠಿಸಿರುವ ಈ ಸಣ್ಣ ವೈರಸ್, ಭಾರತದಂತಹ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳು ನಲುಗುವಂತೆ ಮಾಡಿದೆ. ಭಾರತ ಕೋವಿಡ್​ಗೆ ತುತ್ತಾದ ರಾಷ್ಟ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.