ETV Bharat / international

ಥಾಯ್ಲೆಂಡ್‌ನಲ್ಲಿ ಬಸ್-ರೈಲು ಡಿಕ್ಕಿ: 17 ಮಂದಿ ದುರ್ಮರಣ

65 ಪ್ರಯಾಣಿಕರಿದ್ದ ಟೂರಿಸ್ಟ್ ಬಸ್​ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ 17 ಜನರು ಸಾವನ್ನಪ್ಪಿದ್ದು, 30 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಥಾಯ್ಲೆಂಡ್‌ನಲ್ಲಿ ನಡೆದಿದೆ.

Bus-train collision in central Thailand
ಥಾಯ್ಲೆಂಡ್‌ನಲ್ಲಿ ಬಸ್-ರೈಲು ಡಿಕ್ಕಿ
author img

By

Published : Oct 11, 2020, 10:55 AM IST

ಬ್ಯಾಂಕಾಕ್: ಇಂದು ಬೆಳ್ಳಂಬೆಳಗ್ಗೆ ರೈಲು ಹಾಗೂ ಟೂರಿಸ್ಟ್ ಬಸ್‌ ನಡುವೆ ಭೀಕರ ಅಪಘಾತ ಸಂಭವಿಸಿ 17 ಜನರು ಮೃತಪಟ್ಟಿರುವ ಘಟನೆ ಥಾಯ್ಲೆಂಡ್‌ನಲ್ಲಿ ನಡೆದಿದೆ.

65 ಪ್ರಯಾಣಿಕರಿದ್ದ ಟೂರಿಸ್ಟ್ ಬಸ್​ ಇದಾಗಿದ್ದು, ಸಮುತ್ ಪ್ರಕಾನ್ ಪ್ರಾಂತ್ಯದಿಂದ ಚಚೊಯೆಂಗ್‌ಸಾವೊದ ಬೌದ್ಧ ದೇವಾಲಯಕ್ಕೆ ಎಲ್ಲರೂ ತೆರಳುತ್ತಿದ್ದರು. ಬ್ಯಾಂಕಾಕ್‌ನಿಂದ 80 ಕಿ.ಮೀ ದೂರದಲ್ಲಿರುವ ಚಾಚಿಯೊಂಗ್‌ಸಾವೊ ಪ್ರದೇಶದಲ್ಲಿ ಘಟನೆ ನಡೆದಿದೆ. ರೈಲು ಬರುತ್ತಿರುವುದನ್ನು ಗಮನಿಸದೇ ರೈಲ್ವೆ ಹಳಿ ದಾಟುವ ವೇಳೆ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೀಕರ ಅಪಘಾತದಲ್ಲಿ 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಎರಡು ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಬೆಳಗ್ಗೆ ಜೋರಾಗಿ ಮಳೆ ಬರುತ್ತಿತ್ತು, ಹೀಗಾಗಿ ರೈಲು ಬಂದಿದ್ದನ್ನು ಬಸ್​ ಚಾಲಕ ಗಮನಿಸಿಲ್ಲ ಎಂದು ಜಿಲ್ಲಾ ಮುಖ್ಯಾಧಿಕಾರಿ ಪ್ರಥುಯೆಂಗ್ ಯೂಕಾಸ್ಸೆಮ್ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.