ಬೀಜಿಂಗ್(ಚೀನಾ): ಮಹಾಮಾರಿ ಕರೊನಾ ವೈರಸ್ಗೆ ತುತ್ತಾಗಿ ಚೀನಾದಲ್ಲಿ ಸಾವಿರಾರು ಜನರು ತೊಂದರೆ ಅನುಭವಿಸುತ್ತಿದ್ದು, ಇದೀಗ ಅವರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡುವ ಉದ್ದೇಶದಿಂದ ಕೇವಲ 10 ದಿನದಲ್ಲಿ ಪ್ರತ್ಯೇಕ ಆಸ್ಪತ್ರೆ ನಿರ್ಮಾಣಗೊಂಡಿದೆ.
-
LOOK: China has started construction on a special hospital in Wuhan to be used to treat coronavirus-infected patients.
— QuickTake by Bloomberg (@QuickTake) January 24, 2020 " class="align-text-top noRightClick twitterSection" data="
The hospital is designed to have 1,000 beds and they say it will be open by Feb. 3. pic.twitter.com/mBgIJyzpgd
">LOOK: China has started construction on a special hospital in Wuhan to be used to treat coronavirus-infected patients.
— QuickTake by Bloomberg (@QuickTake) January 24, 2020
The hospital is designed to have 1,000 beds and they say it will be open by Feb. 3. pic.twitter.com/mBgIJyzpgdLOOK: China has started construction on a special hospital in Wuhan to be used to treat coronavirus-infected patients.
— QuickTake by Bloomberg (@QuickTake) January 24, 2020
The hospital is designed to have 1,000 beds and they say it will be open by Feb. 3. pic.twitter.com/mBgIJyzpgd
ಸುಮಾರು 1,500 ಬೆಡ್ಗಳನ್ನೊಳಗೊಂಡಿರುವ ಅತ್ಯಾಧುನಿಕ ಆಸ್ಪತ್ರೆ ಇದಾಗಿದ್ದು, ಉದ್ಘಾಟನೆ ಸಹ ನಡೆದಿದೆ. ಆಸ್ಪತ್ರೆ ನಿರ್ಮಾಣಕ್ಕಾಗಿ ರಾತ್ರಿ - ಹಗಲು ಕೆಲಸ ಮಾಡಲಾಗಿದ್ದು, ಪೂರ್ವ ನಿರ್ಮಿತ ಗೋಡೆಗಳ ಸಹಾಯದಿಂದ 25 ಸಾವಿರ ಚದರ ಅಡಿಯಲ್ಲಿ ಈ ಆಸ್ಪತ್ರೆ ನಿರ್ಮಾಣಗೊಂಡಿದೆ. ಸರಿಸುಮಾರು 7 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಇದಕ್ಕಾಗಿ ಕೆಲಸ ಮಾಡಿದ್ದಾರೆ. ವ್ಯುಹಾನ್ ಮತ್ತು ಹುಬೇ ಪ್ರಾಂತ್ಯದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗಿದ್ದು,ಇಂದಿನಿಂದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮಹಾಮಾರಿ ಕರೊನಾಗೆ ಈಗಾಗಲೇ ಚೀನಾದಲ್ಲಿ 360 ಜನರು ಸಾವಿಗೀಡಾಗಿದ್ದು, 17,000 ಮಂದಿ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಈ ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್ ಹಾಗೂ ಇತರ ಸಿಬ್ಬಂದಿ ಸೇರಿದಂತೆ 1,700 ಜನರು ಕಾರ್ಯ ನಿರ್ವಹಿಸಲಿದ್ದಾರೆ.