ETV Bharat / international

ಬಲೂಚಿಸ್ತಾನದಲ್ಲಿ ಉರುಳಿ ಬಿದ್ದ ಬಸ್​​: 15 ಸಾವು, 9 ಜನರ ಸ್ಥಿತಿ ಗಂಭೀರ - ಬಲೂಚಿಸ್ತಾನ ಕ್ರೈಂ ನ್ಯೂಸ್​

ಪ್ರಯಾಣಿಕರ ಹೊತ್ತೊಯ್ಯುತ್ತಿದ್ದ ಬಸ್​ವೊಂದು ಉರುಳಿ ಬಿದ್ದ ಪರಿಣಾಮ 15 ಜನರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.

Balochistan accident
Balochistan accident
author img

By

Published : Feb 2, 2021, 5:09 PM IST

ಉತಾಲ್(ಬಲೂಚಿಸ್ತಾನ): ಪ್ರಯಾಣಿಕರ ಹೊತ್ತೊಯ್ಯುತ್ತಿದ್ದ ಬಸ್​ವೊಂದು ಉರುಳಿ ಬಿದ್ದಿರುವ ಪರಿಣಾಮ 15 ಮಂದಿ ಸಾವನ್ನಪ್ಪಿ, 9 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಲೂಚಿಸ್ತಾನದಲ್ಲಿ ನಡೆದಿದೆ.

ಇಂದು ಬೆಳಗ್ಗೆ ಈ ಭೀಕರ ಘಟನೆ ನಡೆದಿದ್ದು, ಕುವೈತ್​ - ಕರಾಚಿ ಹೈವೆಯಲ್ಲಿ ಬಸ್​​ ಉರುಳಿ ಬಿದ್ದಿದೆ. ಸಾವನ್ನಪ್ಪಿದವರಲ್ಲಿ ಐವರು ಮಹಿಳೆಯರು, ಮೂವರು ಮಕ್ಕಳು ಹಾಗೂ ಏಳು ಮಂದಿ ಪುರುಷರು ಸೇರಿದ್ದಾರೆ. ಬಲೂಚಿಸ್ತಾನದಿಂದ ಕರಾಚಿಗೆ ಈ ಬಸ್ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.

ಓದಿ: ನೆರೆ ರಾಷ್ಟ್ರಗಳ ಮೇಲೆ ಚೀನಾ ಬೆದರಿಕೆ ಬಗ್ಗೆ ಕಳವಳವಿದೆ: ಶ್ವೇತಭವನ

ಘಟನೆಯಲ್ಲಿ ಗಾಯಗೊಂಡಿರುವವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.