ನಾಯ್ಪಿಟಾವ್ (ಮ್ಯಾನ್ಮಾರ್): ದೇಶದಲ್ಲಿ ಸೇನೆಯಿಂದ ಬಂಧಿತರಾಗಿರುವ ಮಾಜಿ ಕೌನ್ಸಿಲರ್ ಆಂಗ್ ಸಾನ್ ಸೂ ಕಿ ಆರೋಗ್ಯ ಸ್ಥಿರವಾಗಿದೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾನೂನು ಮತ್ತು ಆಮದು-ರಫ್ತನ್ನು ಉಲ್ಲಂಘಿಸಿದ್ದಕ್ಕಾಗಿ ಸೂ ಕಿ ಮತ್ತು ಮಾಜಿ ಅಧ್ಯಕ್ಷ ಯು ವಿನ್ ಮೈಂಟ್ ಅವರನ್ನು ಬಂಧನದಲ್ಲಿಡಲಾಗಿದೆ ಎಂದು ಸೇನೆಯ ಅಧಿಕಾರಿ ತಿಳಿಸಿದ್ದಾರೆ.
ಎನ್‌ಎಲ್‌ಡಿ ಪಕ್ಷದ ನಾಯಕ ಯು ವಿನ್ ಹೆಟೈನ್ ಅವರನ್ನು ಯಾವ ಆರೋಪದಡಿ ಬಂಧಿಸಲಾಗಿದೆ ಅನ್ನೋದನ್ನು ಪರಿಶೀಲಿಸುತ್ತಿದ್ದೇವೆ ಎಂದು ಪಕ್ಷದ ಮಾಹಿತಿ ಸಮಿತಿ ಸದಸ್ಯ ಕೈ ಟೋ ಆನ್ಲೈನ್ ಪೋಸ್ಟ್ನಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಮುಖ ನಾಯಕರನ್ನು ವಶಪಡಿಸಿಕೊಂಡ ನಂತರ ದೇಶದಲ್ಲಿ ಒಂದು ವರ್ಷದ ಅವಧಿಗೆ ಸೇನೆ ತುರ್ತು ಪರಿಸ್ಥಿತಿ ಘೋಷಿಸಿದೆ. ಅಧಿಕಾರವನ್ನು ರಕ್ಷಣಾ ಸೇವೆಗಳ ಕಮಾಂಡರ್-ಇನ್-ಚೀಫ್ ಸೆನ್-ಜನರಲ್ ಮಿನ್ ಆಂಗ್ ಹ್ಲೇಂಗ್ಗೆ ಹಸ್ತಾಂತರಿಸಲಾಗಿದೆ.