ETV Bharat / international

ಕಾರ್ಮಿಕ ದಿನದಂದು ಹಾಂಕಾಂಗ್​ನಲ್ಲಿ ಭುಗಿಲೆದ್ದ ಪ್ರತಿಭಟನೆ!

ಚೀನಾದ ವಿಶೇಷಾಡಳಿತ ಪ್ರದೇಶ ಹಾಂಕಾಂಗ್​​​​​​ನಲ್ಲಿ ಇಂದು ನಡೆದ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಪೆಪ್ಪರ್​ ಸ್ಪ್ರೇ ಪ್ರಯೋಗಿಸಬೇಕಾಯಿತು. ಮೇ 1 ರಂದು ಸಾಂಪ್ರದಾಯಿಕವಾಗಿ ಹಮ್ಮಿಕೊಳ್ಳಲಾಗುತ್ತಿದ್ದ ರ್ಯಾಲಿಗಳಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ, ಫ್ಲ್ಯಾಶ್ ಮಾಬ್ ಮಾದರಿಯಲ್ಲಿ ಪ್ರತಿಭಟನೆಗಳನ್ನು ನಡೆಸಲಾಯಿತು.

Anti-govt protests return to HK on Labour Day

author img

By

Published : May 2, 2020, 10:16 PM IST

ಹಾಂಕಾಂಗ್​​​​​​: ಕೊರೊನಾ ವೈರಸ್​ ಭೀತಿ ಕಡಿಮೆಯಾಗುತ್ತಿದ್ದಂತೆಯೇ ಹಾಂಕಾಂಗ್​​​​​ನಲ್ಲಿ ಕಾರ್ಮಿಕ ದಿನದಂದು ಸರ್ಕಾರ ವಿರೋಧಿ ಪ್ರತಿಭಟನೆಗಳು ಮತ್ತೆ ಭುಗಿಲೆದ್ದಿವೆ. ಚೀನಾದ ವಿಶೇಷಾಡಳಿತ ಪ್ರದೇಶ ಹಾಂಕಾಂಗ್​​​​​​ನಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಪೆಪ್ಪರ್​ ಸ್ಪ್ರೇ ಪ್ರಯೋಗಿಸಬೇಕಾಯಿತು.

ಪ್ರತಿಭಟನಾಕಾರರು ಶುಕ್ರವಾರ ಉಗ್ರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಯತ್ನಿಸಿದರಾದರೂ ಅದು ಸಾಧ್ಯವಾಗಿರಲಿಲ್ಲ. ಚಿಕ್ಕ ಚಿಕ್ಕ ಗುಂಪುಗಳಲ್ಲಿ ಮಾತ್ರ ಅಲ್ಲಲ್ಲಿ ಪ್ರತಿಭಟನೆಗಳು ನಡೆದಿದ್ದವು. ಶುಕ್ರವಾರ ಸಂಜೆ 7 ರ ಹೊತ್ತಿಗೆ ನ್ಯೂ ಟೌನ್​ ಪ್ಲಾಜಾ ಬಳಿ ಜಮಾಯಿಸಿದ ಜನತೆ "ಗ್ಲೋರಿ ಟು ಹಾಂಕಾಂಗ್​​​​" ಪ್ರಭುತ್ವ ವಿರೋಧಿ ರಾಷ್ಟ್ರಗೀತೆಯನ್ನು ಹಾಡಲಾರಂಭಿಸಿದ್ದರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು ಪೆಪ್ಪರ್ ಸ್ಪ್ರೇ ಪ್ರಯೋಗಿಸಿ ಜನರನ್ನು ಚದುರಿಸಿದ್ದರು.

ಮೇ 1 ರಂದು ಕಾರ್ಮಿಕ ದಿನಾಚರಣೆ ನಿಮಿತ್ತ ಸಾಂಪ್ರದಾಯಿಕವಾಗಿ ಹಮ್ಮಿಕೊಳ್ಳಲಾಗುತ್ತಿದ್ದ ರ್ಯಾಲಿಗಳಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ, ಫ್ಲ್ಯಾಶ್ ಮಾಬ್ ಮಾದರಿಯಲ್ಲಿ ಪ್ರತಿಭಟನೆಗಳನ್ನು ನಡೆಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.