ದುಶಾಂಬೆ(ತಜಿಕಿಸ್ತಾನ): ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದ 87 ಭಾರತೀಯರನ್ನು ಒಳಗೊಂಡ ಏರ್ ಇಂಡಿಯಾ(Air India) ವಿಮಾನ ತಜಿಕಿಸ್ತಾನದಿಂದ ಭಾರತಕ್ಕೆ ಪ್ರಯಾಣ ಬೆಳಸಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಗ್ಚಿ 'ಅಫ್ಘಾನಿಸ್ತಾನದಿಂದ ಭಾರತೀಯರನ್ನು ಮಾತೃಭೂಮಿಗೆ ಕರೆತರಲಾಗುತ್ತಿದೆ. 87 ಭಾರತೀಯರನ್ನು ಹೊತ್ತ ಎಐ 1956 ಹೆಸರಿನ ವಿಮಾನ ತಜಿಕಿಸ್ತಾನಿಂದ ದೇಶಕ್ಕೆ ಮರಳಿದೆ. ಇದರಲ್ಲಿ ಇಬ್ಬರು ನೇಪಾಳಿ ಪ್ರಜೆಗಳೂ ಇದ್ದಾರೆ. ದುಶಾಂಬೆಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಹಕಾರ ಮತ್ತು ಬೆಂಬಲ ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿಯನ್ನು ಕರೆತರಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈಗ ಭಾರತಕ್ಕೆ ಬರುತ್ತಿರುವ ವ್ಯಕ್ತಿಗಳನ್ನು ಮೊದಲು ಕಾಬೂಲ್ನಿಂದ ಭಾರತೀಯ ವಾಯುಪಡೆಯ ವಿಮಾನದ ಮೂಲಕ ತಜಿಕಿಸ್ತಾನಕ್ಕೆ ಸ್ಥಳಾಂತರ ಮಾಡಲಾಗಿತ್ತು ಎಂದು ಅರಿಂದಮ್ ಬಗ್ಚಿ ಮಾಹಿತಿ ನೀಡಿದ್ದಾರೆ.
-
Jubilant evacuees on their journey home ! pic.twitter.com/3sfvSaEVK7
— Arindam Bagchi (@MEAIndia) August 21, 2021 " class="align-text-top noRightClick twitterSection" data="
">Jubilant evacuees on their journey home ! pic.twitter.com/3sfvSaEVK7
— Arindam Bagchi (@MEAIndia) August 21, 2021Jubilant evacuees on their journey home ! pic.twitter.com/3sfvSaEVK7
— Arindam Bagchi (@MEAIndia) August 21, 2021
ಭಾರತಕ್ಕೆ ಮರಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಯಾಣಿಕರು ವಿಮಾನದಲ್ಲೇ ಭಾರತ್ ಮಾತಾ ಕಿ ಜೈ ಎಂಬ ಘೋಷಣೆಗಳನ್ನ ಕೂಗಿದ್ದಾರೆ. ಈ ವಿಡಿಯೋವನ್ನೂ ಕೂಡಾ ಅರಿಂದಮ್ ಬಗ್ಚಿ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಸರ್ಕಾರಿ ಮೂಲಗಳು ಎಎನ್ಐಗೆ ನೀಡಿದ ಮಾಹಿತಿ ಪ್ರಕಾರ ಭಾರತ ತನ್ನ ಪ್ರಜೆಗಳನ್ನು ಸ್ಥಳಾಂತರ ಮಾಡಲು ಒಂದು ದಿನಕ್ಕೆ ಎರಡು ವಿಮಾನಗಳನ್ನು ಕಾಬೂಲ್ ವಿಮಾನ ನಿಲ್ದಾಣಕ್ಕೆ ತರಲು ಅವಕಾಶ ನೀಡಲಾಗಿದೆ. ಈವರೆಗೆ ಭಾರತ 180 ಮಂದಿಯನ್ನು ಆಫ್ಘನ್ನಿಂದ ಸ್ಥಳಾಂತರ ಮಾಡಿದೆ.
ಇದನ್ನೂ ಓದಿ: ಮೊದಲ 'ಫತ್ವಾ'ದಲ್ಲೇ ಬುದ್ಧಿ ತೋರಿಸಿದ ತಾಲಿಬಾನ್.. ವಿಶ್ವವಿದ್ಯಾನಿಲಯಗಳಲ್ಲಿ 'ಸಹ-ಶಿಕ್ಷಣ' ನಿಷೇಧ..