ETV Bharat / international

ಆಫ್ಘಾನ್‌ನಲ್ಲಿ ತೀವ್ರ ಹಸಿವು ; ಕುಟುಂಬ ಫೋಷಣೆಗಾಗಿ ಕಿಡ್ನಿಗಳ ಮಾರಾಟಕ್ಕೆ ಮುಂದಾದ ಜನ - ವರದಿ - Afghanistan Faced with starvation Afghans sell kidneys says Report

ನಮ್ಮ ಮಕ್ಕಳಿಗೆ ತಿನ್ನಲು ಆಹಾರ ಖರೀದಿಗೆ ಹಣ ನೀಡಿದರೆ ನಮ್ಮ ಕಿಡ್ನಿಗಳನ್ನು ಮಾರಾಟ ಮಾಡುತ್ತೇವೆ ಎಂದು ನಿವಾಸಿಯೊಬ್ಬರು ಬಡತನದ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ. ಕಿಡ್ನಿ ಮಾರಾಟ ಮಾಡುತ್ತಿರುವವರಲ್ಲಿ ಮಕ್ಕಳು, ಮಹಿಳೆಯರು ಇರುವುದು ದುರಂತವಾಗಿದೆ..

Afghanistan Faced with starvation, Afghans sell kidneys: Report
ಆಫ್ಘಾನ್‌ನಲ್ಲಿ ತೀವ್ರ ಹಸಿವು; ಕುಟುಂಬ ಫೋಷಣೆಗಾಗಿ ಕಿಡ್ನಿಗಳ ಮಾರಾಟಕ್ಕೆ ಮುಂದಾದ ಜನ - ವರದಿ
author img

By

Published : Jan 29, 2022, 1:42 PM IST

ಕಾಬೂಲ್ : ತಾಲಿಬಾನ್‌ಗಳು ನೆರೆಯ ಆಫ್ಘಾನಿಸ್ತಾನದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಅಲ್ಲಿನ ಬಹುತೇಕ ಜನ ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಜಗತ್ತಿನ ನೆರವಿಗಾಗಿ ಅಂಗಲಾಚುತ್ತಿದ್ದಾರೆ.

ಆರ್ಥಿಕ ಕುಸಿತದ ಪರಿಣಾಮವಾಗಿ ಅಲ್ಲಿನ ಜನರು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ. ಆಫ್ಘಾನ್‌ನ ಹೆರಾತ್‌ ಪ್ರಾಂತ್ಯದಲ್ಲಿ ಕೆಲವರು ತಮ್ಮ ಕುಟುಂಬವನ್ನು ಪೋಷಿಸಲು ಕಿಡ್ನಿಗಳನ್ನು ಮಾರಾಟ ಮಾಡಲು ಮುಂದಾಗಿರುವುದು ಹಸಿವಿಗೆ ಹಿಡಿದ ಕೈಗನ್ನಡಿಯಂತಿದೆ.

ಜನ ಕುಟುಂಬ ಸಲಹಲು ಮೂತ್ರಪಿಂಡಗಳ ಮಾರಾಟಕ್ಕೆ ಒತ್ತಾಯಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಟೊಲೊ ನ್ಯೂಸ್‌ ವರದಿ ಪ್ರಕಾರ, ಇಂಜಿಲ್ ಜಿಲ್ಲೆಯ ನಿವಾಸಿಗಳು ಕಡು ಬಡತನದ ನಡುವೆ ಬದುಕುಳಿಯುವ ಸಲುವಾಗಿ ತಮ್ಮ ಮೂತ್ರಪಿಂಡಗಳನ್ನು ಕಡಿಮೆ ಹಣಕ್ಕೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ ಎಂಬುದು ಮನಕಲಕುವಂತಿದೆ.

'ಮಕ್ಕಳ ಆಹಾರಕ್ಕೆ ಹಣ ಕೊಟ್ರೆ ಕಿಡ್ನಿ ಕೊಡ್ತೀವಿ'

ನಮ್ಮ ಮಕ್ಕಳಿಗೆ ತಿನ್ನಲು ಆಹಾರ ಖರೀದಿಗೆ ಹಣ ನೀಡಿದರೆ ನಮ್ಮ ಕಿಡ್ನಿಗಳನ್ನು ಮಾರಾಟ ಮಾಡುತ್ತೇವೆ ಎಂದು ನಿವಾಸಿಯೊಬ್ಬರು ಬಡತನದ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ. ಕಿಡ್ನಿ ಮಾರಾಟ ಮಾಡುತ್ತಿರುವವರಲ್ಲಿ ಮಕ್ಕಳು, ಮಹಿಳೆಯರು ಇರುವುದು ದುರಂತವಾಗಿದೆ.

ಆ ದೇಶದ ಕಾನೂನಿನ ಪ್ರಕಾರ ದೇಹದ ಅಂಗಗಳನ್ನು ಮಾರಾಟ ಮಾಡುವುದು ಕಾನೂನುಬಾಹಿರವಾಗಿದೆ. ಆದರೆ, ಬಡತನದ ಬೇಗೆಯಲ್ಲಿ ಬೇಯುತ್ತಿರುವ ಕುಟುಂಬಗಳು ಬದುಕಲು ಬೇರೆ ಆಯ್ಕೆಗಳಿಲ್ಲ ಎಂದು ಹೇಳುತ್ತಿವೆ. ನಾವು ಸಂತೋಷವಾಗಿದ್ದೇವೆ, ಭದ್ರತಾ ಪರಿಸ್ಥಿತಿ ಉತ್ತಮವಾಗಿದೆ. ಆದರೆ, ದೇಶದಲ್ಲಿ ಬೆಲೆಗಳು ಸ್ವಲ್ಪ ಹೆಚ್ಚಾಗಿದೆ ಎಂದು ಮತ್ತೊಬ್ಬ ನಿವಾಸಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಹೆರಾತ್‌ನ ಕೆಲವು ಭಾಗಗಳಲ್ಲಿ ಬಡತನದಿಂದಾಗಿ ಮೂತ್ರಪಿಂಡಗಳ ಮಾರಾಟವು ಕಳೆದ ವರ್ಷವೂ ಸುದ್ದಿಯಾಗಿತ್ತು. ಆದರೆ, ಈಗ ಆಫ್ಘಾನಿಸ್ತಾನದಲ್ಲಿ ಆರ್ಥಿಕ ಸಂಕಷ್ಟದ ಭೀಕರತೆಯ ವಿಚಾರವನ್ನು ವಿಶ್ವ ನಾಯಕರು ಮತ್ತು ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದಾರೆ.

'ಆಫ್ಘಾನ್‌ ಜನರನ್ನು ಹಸಿವಿನಿಂದ ಹೊರತರಲು ಪ್ರಯತ್ನ'

ನಾವು ಆಫ್ಘಾನಿಸ್ತಾನದಲ್ಲಿ ಸಂಕಷ್ಟದಲ್ಲಿರುವ ಜನರನ್ನು ಹೊರ ತರಲು ಮೊದಲನೆಯದಾಗಿ ಬಹಳ ಶ್ರಮಿಸುತ್ತಿದ್ದೇವೆ. ಇದಕ್ಕಾಗಿ ವಿವಿಧ ಮಾರ್ಗಗಳನ್ನು ಬಳಸುತ್ತಿದ್ದೇವೆ. ಆ ದೇಶಕ್ಕೆ ಹೆಚ್ಚುವರಿ ಮಾನವೀಯ ನೆರವು ನೀಡುತ್ತಿದ್ದೇವೆ ಎಂದು ಬ್ರಿಟನ್‌ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಹೇಳಿದ್ದಾರೆ. ಅಲ್ಲದೆ, ಕಿಡ್ನಿ ಮಾರಾಟದ ವರದಿಗಳನ್ನು ಕೇಳಿದಾಗ ತುಂಬಾ ಚಿಂತಿತವಾಗಿದ್ದೇವೆ ಎಂದು ಟ್ರಸ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ವಿಶ್ಲೇಷಕರು ಹೇಳುವ ಪ್ರಕಾರ ನಿರ್ಬಂಧಗಳನ್ನು ತೆಗೆದು ಹಾಕುವುದು ಮತ್ತು ವಿಶ್ವ ಬ್ಯಾಂಕ್‌ಗಳಿಂದ ಆ ದೇಶದ ಆಸ್ತಿಯ ಶತಕೋಟಿ ಘನೀಕೃತ ಡಾಲರ್‌ಗಳನ್ನು ಬಿಡುಗಡೆ ಮಾಡುವುದು ಆಫ್ಘಾನಿಸ್ತಾನದ ಜನರ ಜೀವನವನ್ನು ಸುಧಾರಿಸಲು ಪರಿಣಾಮಕಾರಿ ಮಾರ್ಗವಾಗಿದೆ.

ಸರಕುಗಳ ಬೆಲೆ ತೀವ್ರವಾಗಿ ಏರಿಕೆಯಿಂದಾಗಿ ಸಮಾಜದ ಅತ್ಯಂತ ದುರ್ಬಲ ವರ್ಗಗಳು ಹೆಚ್ಚು ಬಳಲುತ್ತಿದ್ದಾರೆ ಎಂದು ಅರ್ಥಶಾಸ್ತ್ರಜ್ಞ ಅಬ್ದುಲ್ ನಾಸಿರ್ ರೆಶ್ಟಿಯಲ್ ಹೇಳಿದ್ದಾರೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ತಾಲಿಬಾನ್ ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ ವಿಶ್ವ ಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ಯುಎಸ್ ಫೆಡರಲ್ ರಿಸರ್ವ್ ಆಫ್ಘಾನಿಸ್ತಾನಕ್ಕೆ ಆರ್ಥಿಕ ನೆರವನ್ನು ಕಡಿತಗೊಳಿಸಿದ್ದವು. ಇದರ ಪರಿಣಾಮವಾಗಿ ಆಫ್ಘಾನಿಸ್ತಾನದಲ್ಲಿ ನಿರುದ್ಯೋಗ, ಬಡತನ ಮತ್ತು ಹಸಿವು ಆತಂಕಕಾರಿ ಮಟ್ಟವನ್ನು ತಲುಪಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.