ETV Bharat / international

ಕಾಬೂಲ್‌ ಸೇನಾಸ್ಪತ್ರೆ ಬಳಿ ಭೀಕರ ಬಾಂಬ್‌ ಸ್ಫೋಟ: 19 ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ - ಕಾಬೂಲ್‌ ಸೇನಾಸ್ಪತ್ರೆ ಬಳಿ ಗುಂಡಿನ ದಾಳಿ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಸೇನಾಸ್ಪತ್ರೆ ಬಳಿ ನಡೆದ ಎರಡು ಬಾಂಬ್‌ ಸ್ಫೋಟಗಳು ಹಾಗೂ ಗುಂಡಿನ ದಾಳಿಯಲ್ಲಿ ಕನಿಷ್ಠ 19 ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Afghanistan: 19 dead, 50 wounded in Kabul hospital attack
ಕಾಬೂಲ್‌ ಸೇನಾಸ್ಪತ್ರೆ ಬಳಿ ಬಾಂಬ್‌ ಸ್ಫೋಟ, ಗುಂಡಿನ ದಾಳಿ; 19 ಜನರ ಸಾವು, 50 ಮಂದಿಗೆ ಗಾಯ
author img

By

Published : Nov 2, 2021, 4:52 PM IST

Updated : Nov 2, 2021, 6:27 PM IST

ಕಾಬೂಲ್‌: ಅಫ್ಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ಕಾಬೂಲ್‌ನ ಸೇನಾಸ್ಪತ್ರೆ ಬಳಿ ನಡೆದ ಎರಡು ಬಾಂಬ್‌ ಸ್ಫೋಟಗಳು ಹಾಗೂ ಗುಂಡಿನ ದಾಳಿಯಲ್ಲಿ ಕನಿಷ್ಠ 19 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ.

ಸರ್ದಾರ್ ಮೊಹಮ್ಮದ್ ದೌದ್ ಖಾನ್ ಮಿಲಿಟರಿ ಆಸ್ಪತ್ರೆ ಬಳಿ ಗುಂಡಿನ ಸದ್ದು ಕೇಳಿಬಂತು ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಸರ್ಕಾರಿ ವಕ್ತಾರರು ತಿಳಿಸಿದ್ದಾರೆ. ಈ ಕುರಿತಾಗಿ ಇಸ್ಲಾಮಿಕ್ ಎಮಿರೇಟ್‌ನ ಉಪ ವಕ್ತಾರ ಬಿಲಾಲ್ ಕರಿಮಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಬೂಲ್‌ನ 10ನೇ ಜಿಲ್ಲೆಯ 400 ಹಾಸಿಗೆಗಳ ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ಕನಿಷ್ಠ ಎರಡು ಸ್ಫೋಟ ಸಂಭವಿಸಿವೆ. ಇದು ಕಾರ್ ಬಾಂಬ್ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಎಂದರು.

ಆತ್ಮಾಹುತಿ ಬಾಂಬರ್‌, ಗನ್‌ಮ್ಯಾನ್‌ ಕೃತ್ಯ

ಸ್ಫೋಟದ ಬಗ್ಗೆ ಆಡಳಿತ ಸರ್ಕಾರ ತಾಲಿಬಾನ್‌ ಪ್ರತಿಕ್ರಿಯಿಸಿದ್ದು, ಆತ್ಮಾಹುತಿ ಬಾಂಬರ್‌ ಹಾಗೂ ಗನ್‌ಮ್ಯಾನ್‌ನಿಂದ ಈ ಕೃತ್ಯ ನಡೆದಿದೆ ಎಂದು ಹೇಳಿದೆ.

Last Updated : Nov 2, 2021, 6:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.