ಹನೋಯಿ: ಕಳೆದೆರಡು ವಾರಗಳಲ್ಲಿ ವಿಯೆಟ್ನಾಂ ದೇಶದ ಹಲವೆಡೆ ಸಂಭವಿಸುತ್ತಿರುವ ಪ್ರವಾಹ ಹಾಗೂ ಭೂಕುಸಿತದಲ್ಲಿ ಪ್ರಾಣಕಳೆದುಕೊಂಡವರ ಸಂಖ್ಯೆ 90ಕ್ಕೆ ಏರಿಕೆಯಾಗಿದ್ದು, 34 ಜನರು ನಾಪತ್ತೆಯಾಗಿದ್ದಾರೆ.
ವಿವಿಧ ಪ್ರದೇಶಗಳಲ್ಲಿನ 37,500 ಮನೆಗಳ 1,21,280 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಈಗಾಗಲೇ 1,21,700 ಮನೆಗಳು ಜಲಾವೃತವಾಗಿವೆ. ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ರಸ್ತೆಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿವೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ 6ರಿಂದ ಇಲ್ಲಿಯವರೆಗೆ 5,31,800 ಜಾನುವಾರುಗಳು ಮತ್ತು ಕೋಳಿಗಳು ಮೃತಪಟ್ಟಿವೆ. ಮುಂದಿನ ಕೆಲ ದಿನಗಳವರೆಗೆ ಕೆಲವು ಪ್ರದೇಶಗಳಲ್ಲಿ 600 ಮಿ.ಮೀ ಗಿಂತಲೂ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ವಿಯೆಟ್ನಾಂನ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.