ಕಾಬುಲ್(ಅಫ್ಘಾನಿಸ್ತಾನ): ಮಿಲಿಟರಿ ಬೇಸ್ ಕ್ಯಾಂಪ್ ಬಳಿ ಕಾರ್ ಬಾಂಬ್ ಸ್ಫೋಟ ಸಂಭವಿಸಿದ ಪರಿಣಾಮ 8 ಮಂದಿ ಅಫ್ಘನ್ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಲ್ಲಿನ ಶಿರ್ಜಾದ್ ಜಿಲ್ಲೆಯ ಗಂಡುಮಾಕ್ ಪ್ರದೇಶದಲ್ಲಿ ನಸುಕಿನ ಜಾವ ಭಯೋತ್ಪಾದಕರು ಸ್ಫೋಟಕ ತುಂಬಿದ್ದ ಕಾರನ್ನು ಸ್ಫೋಟಿಸಿದ್ದು, ಘಟನೆಯಲ್ಲಿ 8 ಸೈನಿಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ಹಲವರು ಗಾಯಗೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದಲ್ಲದೆ ಇದೇ ಜಿಲ್ಲೆಯಲ್ಲಿ ಸ್ಫೋಟಿಸಲು ತಂದಿದ್ದ ಇನ್ನೊಂದು ಸ್ಫೋಟಕ ತುಂಬಿದ್ದ ಕಾರನ್ನು ಸೇನಾಪಡೆಗಳು ಪತ್ತೆ ಮಾಡಿವೆ ಎಂದು ವರದಿಯಾಗಿದೆ.
ಈ ದಾಳಿಯ ಹೊಣೆಯನ್ನು ತಾಲಿಬಾನ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.
ಇದನ್ನೂ ಓದಿ: ಬಾಂಬ್ ಸ್ಫೋಟ: ಪಾಕಿಸ್ತಾನ ಲಷ್ಕರ್ - ಇ - ಇಸ್ಲಾಂ ಸಂಘಟನೆ ಮುಖ್ಯಸ್ಥ ಮಂಗಲ್ ಬಾಗ್ ಸಾವು