ETV Bharat / international

ಫಿಲಿಪೈನ್ಸ್​ನಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ

ಫಿಲಿಪೈನ್ಸ್​ನಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ ಉಂಟಾಗಿದ್ದು, ಇದರಿಂದ ಹಾನಿಯುಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಫಿಲಿಪೈನ್ ಭೂಕಂಪಶಾಸ್ತ್ರ ಹಾಗೂ ಜ್ವಾಲಾಮುಖಿ ಸಂಸ್ಥೆ ಹೇಳಿದೆ.

6.3 magnitude earthquake rattles southern Philippines
ಫಿಲಿಪೈನ್ಸ್​ನಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ
author img

By

Published : Feb 7, 2021, 12:44 PM IST

ಮನಿಲಾ: ದಕ್ಷಿಣ ಫಿಲಿಪೈನ್ಸ್​ನ ದಾವಾವೊ ಡೆಲ್ ಸುರ್ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ 6.3ರಷ್ಟು ತೀವ್ರತೆ ದಾಖಲಾಗಿದೆ.

ಮ್ಯಾಗ್ಸೆಸೆ ಪಟ್ಟಣದ ಆಗ್ನೇಯಕ್ಕೆ 6 ಕಿ.ಮೀ ದೂರದಲ್ಲಿ ಹಾಗೂ 15 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ ಎಂದು ಫಿಲಿಪೈನ್ ಭೂಕಂಪಶಾಸ್ತ್ರ ಹಾಗೂ ಜ್ವಾಲಾಮುಖಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಜೋಶಿಮಠದಲ್ಲಿ ಒಡೆದ ಹಿಮನದಿ: ಭೀಕರ ಪ್ರವಾಹದಿಂದ ಹೈ ಅಲರ್ಟ್​ ಘೋಷಣೆ

ಇನ್ನೂ ಯಾವುದೇ ಸಾವು-ನೋವು ವರದಿಯಾಗಿಲ್ಲ. ಆದರೆ ಈ ಭೂಕಂಪವು ಹಾನಿಯುಂಟುಮಾಡುವ ಸಾಧ್ಯತೆ ಹೆಚ್ಚಿದೆ. 'ಪೆಸಿಫಿಕ್ ರಿಂಗ್ ಆಫ್ ಫೈರ್' ಎಂಬ ದುರ್ಬಲ ವಲಯದಲ್ಲಿ ಫಿಲಿಪೈನ್ಸ್ ಇರುವುದರಿಂದ ಆಗಾಗ್ಗೆ ಭೂಕಂಪಗಳಿಗೆ ಗುರಿಯಾಗುತ್ತಿರುತ್ತದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.