ಜಕಾರ್ತಾ: ಸಾಲು ಸಾಲು ಭೂಕಂಪನಗಳಿಗೆ ಇಂಡೋನೇಷ್ಯಾ ತತ್ತರಿಸಿದೆ. ಇದೀಗ ಮತ್ತೆ ಪೂರ್ವ ಪ್ರಾಂತ್ಯದ ಮಾಲುಕು ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 5.9ರಷ್ಟು ತೀವ್ರತೆ ದಾಖಲಾಗಿದೆ ಎಂದು ಹವಾಮಾನ ಮತ್ತು ಭೂ ಭೌತಶಾಸ್ತ್ರ ಸಂಸ್ಥೆ ತಿಳಿಸಿದೆ.
ಜಕಾರ್ತಾ ಟೈಮ್ (18.42 ಜಿಎಂಟಿ ಶನಿವಾರ) ಪ್ರಕಾರ, ಭಾನುವಾರ ನಸುಕಿನ ಜಾವ 1:42 ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ಅಂಬೊನ್‌ನಿಂದ ದಕ್ಷಿಣಕ್ಕೆ 163 ಕಿ.ಮೀ ದೂರದಲ್ಲಿ ಭೂಮಿ ಕಂಪಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಇದನ್ನೂ ಓದಿ: ಜಾಗತಿಕ ತಾಪಮಾನ ಎಫೆಕ್ಟ್ : ಕರಗುತ್ತಿದೆ ಅಂಟಾರ್ಟಿಕಾದ ಹಿಮನದಿಗಳು