ETV Bharat / international

ನಡುರಾತ್ರಿಯಲ್ಲಿ ನಡುಗಿದ ನೆಲ: ನೇಪಾಳದಲ್ಲಿ ಬೆಚ್ಚಿಬಿದ್ದ ಜನತೆ - ಕಠ್ಮಂಡು

ಮಂಗಳವಾರ ರಾತ್ರಿ 11.53 ರ ಸುಮಾರಿಗೆ ಈ ಭೂಕಂಪನ ಸಂಭವಿಸಿದೆ. ಕಠ್ಮಂಡುವಿನಿಂದ 180 ಕಿ.ಮೀ ಪೂರ್ವದಲ್ಲಿರುವ ದೋಲಖಾ ಜಿಲ್ಲೆಯಲ್ಲಿ ಕಂಪನದ ಕೇಂದ್ರಬಿಂದುವನ್ನು ಗುರುತಿಸಲಾಗಿದೆ.

earthquake
ಭೂಕಂಪ
author img

By

Published : May 13, 2020, 1:23 PM IST

ಕಠ್ಮಂಡು: ಕಳೆದ ಮಧ್ಯ ರಾತ್ರಿ ನೇಪಾಳದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಭೀತಿಗೊಳಗಾದ ಜನರು ತಮ್ಮ ಮನೆಗಳಿಂದ ಹೊರಕ್ಕೆ ಓಡಿ ಬಂದಿದ್ದಾರೆ.

ಮಂಗಳವಾರ ರಾತ್ರಿ 11.53 ರ ಸುಮಾರಿಗೆ ಈ ಭೂಕಂಪನ ಸಂಭವಿಸಿದೆ. ಕಠ್ಮಂಡುವಿನಿಂದ 180 ಕಿ.ಮೀ ಪೂರ್ವದಲ್ಲಿರುವ ದೋಲಖಾ ಜಿಲ್ಲೆಯಲ್ಲಿ ಕಂಪನದ ಕೇಂದ್ರಬಿಂದುವನ್ನು ಗುರುತಿಸಲಾಗಿದೆ.

ಕಂಪನಕ್ಕೆ ಭಯಭೀತರಾದ ನಿವಾಸಿಗಳು ರಾತ್ರಿಯಲ್ಲಿ ಬೀದಿಗೆ ಬಂದಿದ್ದರು. ಯಾವುದೇ ಆಸ್ತಿ-ಪಾಸ್ತಿ, ಪ್ರಾಣಹಾನಿಯ ಕುರಿತು ವರದಿಯಾಗಿಲ್ಲ.

ಏಪ್ರಿಲ್ 25, 2015 ರಂದು 7.8 ರಷ್ಟು ತೀವ್ರತೆಯ ಭೂಕಂಪನ ನೇಪಾಳದ ಗೂರ್ಖಾ ಜಿಲ್ಲೆಯಲ್ಲಿ ಸಂಭವಿಸಿತ್ತು. 9,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ಸುಮಾರು 5,00,000 ಕಟ್ಟಡಗಳಿಗೆ ಹಾನಿಯಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.