ETV Bharat / international

ಕಾಬೂಲ್​ನ ನಾಲ್ಕು ಕಡೆ ಸ್ಫೋಟ: ಯಾವುದೇ ಪ್ರಾಣಹಾನಿ ಇಲ್ಲ - ಅಫ್ಘಾನ್ ರಾಜಧಾನಿ ಕಾಬೂಲ್

ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯ ಮತ್ತು ಸರ್ಕಾರಿ ವಾಹನಗಳನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

Kabul
ಕಾಬೂಲ್​
author img

By

Published : May 11, 2020, 2:43 PM IST

ಕಾಬೂಲ್: ಅಫ್ಘಾನ್ ರಾಜಧಾನಿ ಕಾಬೂಲ್‌ನಲ್ಲಿ ನಾಲ್ಕು ಕಡೆ ಸ್ಫೋಟಗಳು ಸಂಭವಿಸಿವೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ತಕ್ಷಣಕ್ಕೆ ಯಾವುದೇ ಸಾವು - ನೋವುಗಳ ಬಗ್ಗೆ ವರದಿಗಳು ಬಂದಿಲ್ಲ.

ನಗರದ ಪಿಡಿ 4ನ ತಾಹಿಯಾ ಮಸ್ಕನ್ ಪ್ರದೇಶದಲ್ಲಿ ಈ ಸ್ಫೋಟಗಳು ನಡೆದಿವೆ. 7.45 ರಿಂದ ಬೆಳಗ್ಗೆ 9 ಗಂಟೆಯವರೆಗಿನ 90 ನಿಮಿಷಗಳ ಅವಧಿಯಲ್ಲಿ ರಸ್ತೆಬದಿಯಲ್ಲಿ ಬಾಂಬ್ ಸ್ಫೋಟಗೊಂಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯ (ಎನ್‌ಡಿಎಸ್) ಮತ್ತು ಸರ್ಕಾರಿ ವಾಹನಗಳನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ರಾತ್ರಿ, ಕಾಬೂಲ್‌ನ ಕಹರ್ರಾಹಿ ಕಂಬಾರ್‌ನಲ್ಲಿ ಎರಡು ಮತ್ತು ಹೂತ್‌ಖಿಲ್ ಪ್ರದೇಶದಲ್ಲಿ ಒಂದು ಸ್ಫೋಟ ಸಂಭವಿಸಿದೆ. ಈ ಸ್ಫೋಟಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಯಾವುದೇ ಉಗ್ರ ಸಂಘಟನೆಗಳು ಈ ಸ್ಫೋಟದ ಹೊಣೆ ವಹಿಸಿಕೊಂಡಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.