ಹಾಂಗ್ ಕಾಂಗ್: ಸಾಗರದ ಆಳದಲ್ಲಿ ಕಂಡುಬರುವ ಹವಳಗಳು ಮನುಷ್ಯರಂತೆ ಸಂಘ ಜೀವಿಗಳಾಗಿದ್ದು, ಹವಳಗಳ ಮೂಲರೂಪ ಹುಳಗಳು ಕಟ್ಟಿದ ಗೂಡುಗಳು. ಹವಳಗಳನ್ನು ಉತ್ಪಾದಿಸುವ ಜೀವಿಗಳನ್ನು ‘ಕೋರಲ್’ಗಳು ಎನ್ನುತ್ತಾರೆ. ಸಮುದ್ರದಾಳದಲ್ಲಿನ ಬಂಡೆ, ಕಲ್ಲುಗಳಿಗೆ ಅಥವಾ ಗಟ್ಟಿ ನೆಲಕ್ಕೆ ಅಂಟಿಕೊಂಡಂತೆ ಈ ಜೀವಿಗಳು ಕೋಶಗಳನ್ನು ಕಟ್ಟುತ್ತವೆ.
ಲೋಳೆಯಂತಹ ಸೂಕ್ಷ್ಮಜೀವಿಗಳಿಂದ ಹವಳಗಳು ತಯಾರಾಗುವುದರಿಂದ ಇವನ್ನು ‘ಸಮುದ್ರ ಪಾಚಿಗಳು’ ಎಂದೂ ಕರೆಯಬಹುದು. ಸಮುದ್ರದಲ್ಲಿ ಹವಳ ದಂಡೆ ನಿರ್ವಣವಾಗುತ್ತೆ. ಹವಳದ ಸಾಮಾನ್ಯ ದಂಡೆ ನಿರ್ವಣವಾಗಲು ಸಾವಿರಾರು ವರ್ಷ ಬೇಕಾಗುತ್ತದೆ. ಆದ್ದರಿಂದ ಅನೇಕ ರೀತಿಯ ಹವಳ ಕಣ್ಮರೆಯಾಗುತ್ತಿವೆ. ಆದ್ದರಿಂದ ಕಣ್ಮರೆಯಾಗುತ್ತಿರುವ ಹವಳಗಳನ್ನು ನಿರ್ಮಾಣ ಮಾಡಲು ಹೊಸ ಆವಿಷ್ಕಾರವೊಂದನ್ನು ಮಾಡಲಾಗಿದೆ.
ವಿಜ್ಞಾನಿಗಳು ವಾಸ್ತುಶಿಲ್ಪಿಗಳ ಸಹಯೋಗದೊಂದಿಗೆ 3ಡಿ ತಂತ್ರಜ್ಞಾನದ ಟೈಲ್ಸ್ಗಳನ್ನು ಸಿದ್ಧಪಡಿಸಿ, ‘ಕೋರಲ್’ಗಳು ಗೂಡು ಕಟ್ಟಲು ಸಹಕಾರಿಯಾಗುವಂತೆ ಮಾಡಲಾಗಿದೆ. ಇದು ರೊಬೋಟಿಕ್ ಫ್ಯಾಬ್ರಿಕೇಶನ್ ಲ್ಯಾಬ್ ಮತ್ತು ಹಾಂಗ್ ಕಾಂಗ್ ವಿಶ್ವವಿದ್ಯಾಲಯದ ಮೆರೈನ್ ಸೈನ್ಸ್ ಜಂಟಿ ಪ್ರಯತ್ನವಾಗಿದೆ.
ಹವಳ ಬೆಳೆಯಲು ಮಣ್ಣಿನ ಅಂಚು (ಟೈಲ್ಸ್)ಗಳನ್ನು ರಚಿಸಲು 3D ಮುದ್ರಣ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಅವುಗಳನ್ನು ಜೇಡಿಮಣ್ಣಿನಿಂದ ಮಾಡಲಾಗಿದ್ದು, ಈ ಯೋಜನೆಯನ್ನು 2016ರಲ್ಲಿ ಪ್ರಾರಂಭಿಸಲಾಗಿದೆ.