ETV Bharat / international

ಅಫ್ಘಾನಿಸ್ಥಾನ ಭದ್ರತಾ ಸಿಬ್ಬಂದಿ ಮಿಂಚಿನ ಕಾರ್ಯಾಚರಣೆ: 32 ತಾಲಿಬಾನ್​ ಉಗ್ರರ ಖೇಲ್​ ಖತಂ

ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದ ಅಫ್ಘಾನಿಸ್ಥಾನದ ಭದ್ರತಾ ಪಡೆ ಸಿಬ್ಬಂದಿಯು 32 ಮಂದಿ ತಾಲಿಬಾನ್​ ಉಗ್ರರನ್ನು ಹೊಡೆದುರುಳಿಸಿದ್ದಾರೆ. ಅಷ್ಟೇ ಅಲ್ಲದೆ, ಗುಂಡಿನ ಚಕಮಕಿಯಲ್ಲಿ 20 ಮಂದಿ ಉಗ್ರರು ಗಾಯಗೊಂಡಿದ್ದಾರೆ.

ಅಫ್ಘಾನಿಸ್ಥಾನ ಭಧ್ರತಾ ಸಿಬ್ಬಂದಿ ಕಾರ್ಯಾಚರಣೆ
ಅಫ್ಘಾನಿಸ್ಥಾನ ಭಧ್ರತಾ ಸಿಬ್ಬಂದಿ ಕಾರ್ಯಾಚರಣೆ
author img

By

Published : Aug 17, 2020, 5:33 PM IST

ಕಾಬೂಲ್(ಅಫ್ಘಾನಿಸ್ಥಾನ): ಇಲ್ಲಿನ ಬ್ಯಾಡ್ಗಿಸ್ ಪ್ರಾಂತ್ಯದಲ್ಲಿ ಉಗ್ರರ ಅಡಗುತಾಣಗಳಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಫ್ಘಾನಿಸ್ಥಾನದ ಭದ್ರತಾ ಪಡೆ 32 ತಾಲಿಬಾನ್​ ಉಗ್ರರನ್ನು ಹೊಡೆದುರುಳಿಸಿದೆ. ಅಷ್ಟೇ ಅಲ್ಲದೆ, ಗುಂಡಿನ ಚಕಮಕಿಯಲ್ಲಿ 20 ಮಂದಿ ಉಗ್ರರು ಗಾಯಗೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಘಟನೆ ಕುರಿತು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪ್ರಾಂತೀಯ ಕೌನ್ಸಿಲ್ ಸದಸ್ಯ ಮೊಹಮ್ಮದ್ ನಾಸಿರ್ ನಜಾರಿ ಹೇಳಿಕೆ ನೀಡಿದ್ದು, ಮುಕಾರ್ ಜಿಲ್ಲೆಯ ಸಂಜಡಕ್ ಪ್ರದೇಶದಲ್ಲಿ ಭಾನುವಾರ ದಾಳಿ ನಡೆಸಲಾಗಿದೆ. ಈ ಸಂಘರ್ಷದಲ್ಲಿ ಓರ್ವ ಭದ್ರತಾ ಸಿಬ್ಬಂದಿ ಹುತಾತ್ಮನಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಾಂತೀಯ ಪೊಲೀಸ್ ಉಪಮುಖ್ಯಸ್ಥ ಶಿರ್ ಆಕಾ ಅಲ್ಕೋಜೆ ಹೇಳಿಕೆ ನೀಡಿದ್ದು, ತಾಲಿಬಾನ್ ಉಗ್ರರು ಭಾರೀ ಪ್ರಮಾಣದಲ್ಲಿ ಸಾವುನೋವುಗಳನ್ನು ಅನುಭವಿಸಿದ್ದಾರೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.