ಸಿಂಧ್(ಪಾಕಿಸ್ತಾನ): ಸಿಂಧ್ ಪ್ರಾಂತ್ಯದ ರೋಹ್ರಿ ರೈಲ್ವೆ ನಿಲ್ದಾಣದ ಬಳಿ ಪ್ರಯಾಣಿಕರ ರೈಲು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 30 ಜನರು ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.
ಪಾಕಿಸ್ತಾನ ಎಕ್ಸ್‌ಪ್ರೆಸ್ ರೈಲು ಕರಾಚಿಯಿಂದ ರಾವಲ್ಪಿಂಡಿಗೆ ತೆರಳುತ್ತಿದ್ದಾಗ ಮಾನವರಹಿತ ರೈಲ್ವೆ ಕ್ರಾಸಿಂಗ್ ಬಳಿ ಪ್ರಯಾಣಿಕರ ಬಸ್‌ಗೆ ಡಿಕ್ಕಿ ಹೊಡೆದಿದ್ದು ಬಸ್ ಮೂರು ತುಂಡಾಗಿದೆ ಎಂದು ವರದಿಯಾಗಿದೆ.
-
30 people dead and several injured in a collision between a bus and Pakistan Express Train near Rohri in Sindh: Pakistan's Geo News
— ANI (@ANI) February 28, 2020 " class="align-text-top noRightClick twitterSection" data="
">30 people dead and several injured in a collision between a bus and Pakistan Express Train near Rohri in Sindh: Pakistan's Geo News
— ANI (@ANI) February 28, 202030 people dead and several injured in a collision between a bus and Pakistan Express Train near Rohri in Sindh: Pakistan's Geo News
— ANI (@ANI) February 28, 2020
ಹಲವಾರು ಗಾಯಾಳುಗಳು ಗಂಭೀರ ಸ್ಥಿತಿಯಲ್ಲಿರುವುದರಿಂದ ಸಾವು-ನೋವುಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬಸ್‌ಗೆ ಡಿಕ್ಕಿ ಹೊಡೆದ ರೈಲು ಸುಮಾರು 150-200 ಅಡಿಗಳಷ್ಟು ದೂರಕ್ಕೆ ಎಳೆದೊಯ್ದಿದೆ ಎಂದು ಸುಕ್ಕೂರ್ ಪೊಲೀಸ್ ಎಐಜಿ ಡಾ. ಜಮೀಲ್ ಅಹ್ಮದ್ ಹೇಳಿದ್ದಾರೆ.
ಘಟನೆಯಲ್ಲಿ ಗಾಯಗೊಂಡ 60ಕ್ಕೂ ಹೆಚ್ಚು ಜನರನ್ನು ಸುಕ್ಕೂರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.