ETV Bharat / international

ಇಂಡೋನೇಷ್ಯಾದಲ್ಲಿ 4.8 ತೀವ್ರತೆಯ ಭೂಕಂಪ.. ಮೂವರ ಸಾವು ಹಲವರಿಗೆ ಗಾಯ - 3 killed, 7 injured as quake hits Indonesia's Bali

ಇಂಡೋನೇಷ್ಯಾದ ರೆಸಾರ್ಟ್ ದ್ವೀಪದಲ್ಲಿ ಭೂಕಂಪ ಸಂಭವಿಸಿದ್ದು, ಮೂವರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಲುಕಿದ್ದವರ ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

3-killed-7-injured-as-quake-hits-indonesias-bali
ಇಂಡೋನೇಷ್ಯಾ ದ್ವೀಪದಲ್ಲಿ 4.8 ತೀವ್ರತೆಯ ಭೂಕಂಪ..ಮೂವರು ಸಾವು ಹಲವರಿಗೆ ಗಾಯ
author img

By

Published : Oct 16, 2021, 12:47 PM IST

ಜಕಾರ್ತ (ಇಂಡೋನೇಷ್ಯಾ): ಶನಿವಾರ ಮುಂಜಾನೆ ಇಂಡೋನೇಷ್ಯಾದ ರೆಸಾರ್ಟ್ ದ್ವೀಪದಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟು 7 ಮಂದಿ ಗಾಯಗೊಂಡಿದ್ದಾರೆ.

ಮುಂಜಾನೆ ಸುಮಾರು 3:18ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು, 10 ಕಿ.ಮೀ ಆಳದಲ್ಲಿ ಹಾಗೂ ಕರಂಗಾಸೆಮ್ ಜಿಲ್ಲೆಯಿಂದ ವಾಯುವ್ಯ ಭಾಗದ 8 ಕಿ.ಮೀ ದೂರದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಭೂಕಂಪನದಿಂದ ಸುನಾಮಿಯ ಯಾವುದೇ ಆತಂಕವಿಲ್ಲ ಎಂದು ಹವಾಮಾನ ಮತ್ತು ಭೂಶಾಸ್ತ್ರ ಏಜೆನ್ಸಿ ತಿಳಿಸಿದೆ.

ಘಟನಾ ಸ್ಥಳಕ್ಕೆ ವಿಪತ್ತು ನಿರ್ವಹಣ ಪಡೆ ಹಾಗೂ ರಕ್ಷಣ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಕಟ್ಟಡದ ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭೂಕಂಪನದ ತೀವ್ರತೆಗೆ ಹಲವಾರು ಮನೆಗಳು ನೆಲಕ್ಕುರುಳಿದ್ದು, ಬಾಂಗ್ಲಿ ಜಿಲ್ಲೆಯಲ್ಲಿ ಭೂಕಂಪನದಿಂದ ಹೆಚ್ಚಿನ ಹಾನಿಯಾಗಿದೆ ಎಂದು ಏಜೆನ್ಸಿ ತಿಳಿಸಿದೆ.

ಓದಿ: ಬಾಂಗ್ಲಾ ISKCON ದೇಗುಲ ಧ್ವಂಸ.. ಓರ್ವ ಸದಸ್ಯನ ಹತ್ಯೆಗೈದ ದುಷ್ಕರ್ಮಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.