ಇಸ್ಲಾಮಾಬಾದ್: ಅಕ್ರಮವಾಗಿ ಬಂದು ಸಿಕ್ಕಿಬಿದ್ದ 75 ಭಾರತೀಯರು ಸೇರಿದಂತೆ 221 ಜನರು ನವೆಂಬರ್ 23 ರಂದು ಭಾರತಕ್ಕೆ ಮರಳಲಿದ್ದಾರೆ ಎಂದು ಪಾಕಿಸ್ತಾನದಲ್ಲಿರುವ ಭಾರತೀಯ ರಾಯಬಾರ ಕಚೇರಿ ಮಂಗಳವಾರ ತಿಳಿಸಿದೆ.
ಪಾಕಿಸ್ತಾನದಲ್ಲಿರುವ ಭಾರತೀಯ ರಾಯಬಾರ ಕಚೇರಿ ಒಟ್ಟು 135 ಭಾರತಕ್ಕೆ ಮರಳಲು ಯಾವುದೇ ಆಕ್ಷೇಪಣೆ ಇಲ್ಲದ( ನೋರಿ ) ವೀಸಾ ಹೊಂದಿರುವವರು, 75 ಭಾರತೀಯ ಪ್ರಜೆಗಳು ಮತ್ತು ನೋರಿ ವೀಸಾ ಹೊಂದಿರುವ 11 ದಂಪತಿಗಳನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗುವುದು ಎಂದು ತಿಳಿಸಿದೆ.
ಭಾರತೀಯ ರಾಯಭಾರ ಕಚೇರಿ ಹೊರಡಿಸಿದ ಪತ್ರದಲ್ಲಿ, ಅಕ್ರಮವಾಗಿ ಪಾಕಿಸ್ತಾನಕ್ಕೆ ಬಂದು ಸಿಕ್ಕಿಬಿದ್ದ 60 ಭಾರತೀಯರು, 135 ನೋರಿ ವೀಸಾ ಹೊಂದಿರುವವರು, ನೋರಿ ವೀಸಾ ಹೊಂದಿರುವವರೊಂದಿಗೆ ಭಾರತಕ್ಕೆ ಹೋಗುವ 15 ಪ್ರಜೆಗಳು ಮತ್ತು ನೋರಿ ಹೊಂದಿರುವ 11 ದಂಪತಿಗಳು ಮತ್ತು ಸಾಮಾನ್ಯ ವೀಸಾ ಹೊಂದಿರುವವರ ಹೆಸರನ್ನು ಒಳಗೊಂಡಿದೆ.