ETV Bharat / international

ಕಾಬೂಲ್​ ವಿವಿ ಮೇಲೆ ಉಗ್ರರ ದಾಳಿ: 20 ಮಂದಿ ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ - 20 ಮಂದಿ ಸಾವು..40ಕ್ಕೂ ಹೆಚ್ಚು ಮಂದಿಗೆ ಗಾಯ

ಕಾಬೂಲ್ ವಿಶ್ವವಿದ್ಯಾಲಯದ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 40 ಮಂದಿ ಗಾಯಗೊಂಡಿದ್ದಾರೆ. ಅಫ್ಗಾನ್ ಹಾಗೂ ಇರಾನಿನ ಅಧಿಕಾರಿಗಳು ಇಲ್ಲಿನ ಪುಸ್ತಕ ಪ್ರದರ್ಶನ ಮೇಳವನ್ನು ಉದ್ಘಾಟಿಸುತ್ತಿರುವಾಗ ಈ ದಾಳಿ ನಡೆದಿದೆ.

20 killed, 40 injured during attack at Kabul University
ಕಾಬೂಲ್​ ವಿವಿ ಮೇಲೆ ಭಯೋತ್ಪಾದಕರ ದಾಳಿ: 20 ಮಂದಿ ಸಾವು..40ಕ್ಕೂ ಹೆಚ್ಚು ಮಂದಿಗೆ ಗಾಯ
author img

By

Published : Nov 2, 2020, 7:23 PM IST

ಕಾಬೂಲ್​​ (ಅಫ್ಗಾನಿಸ್ತಾನ್): ಇಲ್ಲಿನ ಕಾಬೂಲ್ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ದಾಳಿಯಲ್ಲಿ 20 ಜನರು ಸಾವನ್ನಪ್ಪಿ, 40 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಟೋಲೋ ಸುದ್ದಿ ಮಾಧ್ಯಮದ ವರದಿಯಂತೆ ಕಾಬೂಲ್​ ವಿಶ್ವವಿದ್ಯಾಲಯದ ಮೇಲೆ ನಡೆದ ದಾಳಿಯಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ.

ಈ ದುರ್ಘಟನೆ ಬಳಿಕ ಟ್ವೀಟ್ ಮಾಡಿರುವ ರಾಷ್ಟ್ರೀಯ ಸಾಮರಸ್ಯ ಮಂಡಳಿ ಮುಖ್ಯಸ್ಥ ಅಬ್ದುಲ್ಲಾ ಅಬ್ದುಲ್ಲಾ, ಕಾಬೂಲ್ ಯುನಿವರ್ಸಿಟಿ ಮೇಲೆ ನಡೆದ ಭಯೋತ್ಪಾದಕರ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುವುದು ಘೋರ ಅಪರಾಧ. ವಿದ್ಯಾರ್ಥಿಗಳಿಗೆ ಶಾಂತಿ ಹಾಗೂ ಸುರಕ್ಷಿತವಾಗಿ ಶಿಕ್ಷಣ ಪಡೆಯಲು ಹಕ್ಕಿದೆ. ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸುತ್ತೇನೆ. ನಾವು ಈ ಕ್ರೂರ ಜಗತ್ತಿನ ವಿರುದ್ಧ ಮೇಲುಗೈ ಸಾಧಿಸಲಿದ್ದೇವೆ ಎಂದಿದ್ದಾರೆ.

ವಿವಿ ಮೇಲೆ ದಾಳಿ ನಡೆಯುವಾಗ ಅಫ್ಗಾನ್ ಹಾಗೂ ಇರಾನಿನ ಅಧಿಕಾರಿಗಳು ಇಲ್ಲಿನ ಪುಸ್ತಕ ಪ್ರದರ್ಶನ ಮೇಳವನ್ನು ಉದ್ಘಾಟಿಸುತ್ತಿದ್ದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಇನ್ನು ಈ ದಾಳಿ ಹೊಣೆಯನ್ನು ಯಾವ ಸಂಘಟನೆಗಳೂ ಹೊತ್ತುಕೊಂಡಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.