ಕಾಬೂಲ್: ಮಂಗಳವಾರ ಅಫ್ಘಾನಿಸ್ತಾನದ ಬಾಮಿಯನ್ ನಗರದಲ್ಲಿ ಎರಡು ಬಾಂಬ್ ಸ್ಫೋಟ ಸಂಭವಿಸಿದ್ದು, 14 ಮಂದಿ ಸಾವನ್ನಪ್ಪಿದ್ದು, ಸುಮಾರು 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಆಫ್ಘಾನಿಸ್ತಾನ ಕೇಂದ್ರ ಭಾಗದಲ್ಲಿರುವ ಬಾಮಿಯಾನ್ ಪ್ರಾಂತ್ಯದಲ್ಲಿಂದು ಎರಡು ಭೀಕರ ಬಾಂಬ್ ಸ್ಫೋಟ ಸಂಭವಿಸಿದೆ. ಕನಿಷ್ಠ 14 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಮೃತಪಟ್ಟವರಲ್ಲಿ 15 ನಾಗರಿಕರಿದ್ದರೆ, ಇಬ್ಬರು ಪೊಲೀಸ್ ಅಧಿಕಾರಿಗಳೆಂದು ಆಂತರಿಕ ಸಚಿವಾಲಯದ ವಕ್ತಾರ ತಾರಿಕ್ ಏರಿಯನ್ ತಿಳಿಸಿದ್ದಾರೆ. ಬಾಮಿಯನ್ ಪ್ರಾಂತ್ಯದಲ್ಲಿ ನಡೆದ ಬ್ಲಾಸ್ಟ್ನಲ್ಲಿ ಸುಮಾರು 45ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಂಗಡಿಗಳು, ರಸ್ಟೋರೆಂಟ್ಗಳು ಹಾಗೂ ವಾಹನಗಳು ನಾಶವಾಗಿವೆ ಎಂದು ತಿಳಿದುಬಂದಿದೆ.
ಇನ್ನು ಬಾಂಬ್ ಬ್ಲಾಸ್ಟ್ನಲ್ಲಿ ಗಾಯಗೊಂಡವರಲ್ಲೂ ಹೆಚ್ಚಿನ ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿ ಫರೊಗುದ್ದೀನ್ ಅಮಿರಿ ಹೇಳಿದ್ದಾರೆ.