ETV Bharat / international

ಚೀನಾದಲ್ಲಿ ತೈಲ ಟ್ಯಾಂಕರ್​​​​ ಸ್ಫೋಟ: 10 ಜನ ಸಾವು, 117 ಮಂದಿಗೆ ಗಾಯ

ತೈಲ ಟ್ಯಾಂಕರ್ ಲಾರಿ ಸ್ಫೋಟಗೊಂಡು ಹತ್ತು ಜನರು ಸಾವಿಗೀಡಾಗಿದ್ದು, 117 ಮಂದಿ ಗಾಯಗೊಂಡಿರುವ ಘಟನೆ ಪೂರ್ವ ಚೀನಾದ ಜೆಜಿಯಾಂಗ್ ಪ್ರಾಂತ್ಯದಲ್ಲಿ ನಡೆದಿದೆ.

oil tank truck explosion in China
ತೈಲ ಟ್ಯಾಂಕರ್​ ಸ್ಫೋಟ
author img

By

Published : Jun 13, 2020, 10:55 PM IST

ಬೀಜಿಂಗ್: ಪೂರ್ವ ಚೀನಾದ ಜೆಜಿಯಾಂಗ್ ಪ್ರಾಂತ್ಯದಲ್ಲಿ ತೈಲ ಟ್ಯಾಂಕರ್ ಲಾರಿ ಸ್ಫೋಟಗೊಂಡು ಹತ್ತು ಜನರು ಸಾವಿಗೀಡಾಗಿದ್ದು, 117 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವೆನ್ಲಿಂಗ್ ನಗರದ ಲಿಯಾಂಗ್‌ಶಾನ್ ಗ್ರಾಮದ ಬಳಿ ಸಂಜೆ 4:40ರ ಸುಮಾರಿಗೆ ಸಂಭವಿಸಿದ ಸ್ಫೋಟದಿಂದಾಗಿ ಶೆನ್ಯಾಂಗ್-ಹೈಕೌ ಎಕ್ಸ್‌ಪ್ರೆಸ್‌ ವೇ ಹತ್ತಿರದ ಕೆಲವು ಮನೆಗಳು ಮತ್ತು ಕಾರ್ಖಾನೆಗಳು ಕುಸಿದಿವೆ ಎಂದು ವರದಿಯಾಗಿದೆ.

ಅಗ್ನಿಶಾಮಕ ದಳ ಮತ್ತು ಆರಕ್ಷಕರು ಅವಶೇಷಗಳಲ್ಲಿ ಕಾಣೆಯಾದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಸ್ಫೋಟದ ನಂತರ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಹಲವಾರು ಕಾರು ಮತ್ತು ವಾಹನಗಳು ಬೆಂಕಿಗೆ ಆಹುತಿಯಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.