ETV Bharat / international

Kabul : ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಮಕ್ಕಳು ಸೇರಿ 10 ಜನರು ಸಾವು - ಐಸಿಸ್​ ಕೆ

ಡ್ರೋನ್ ದಾಳಿಯ ಪರಿಣಾಮವನ್ನು ಮೌಲ್ಯಮಾಪನ ಮಾಡಲಾಗುತ್ತಿದೆ. ಒಂದು ವೇಳೆ ಈ ದಾಳಿಯಲ್ಲಿ ಅಮಾಯಕ ಜೀವಗಳಿಗೆ ಹಾನಿಯಾಗಿದ್ದಲ್ಲಿ ಅಮೆರಿಕ ತೀವ್ರವಾಗಿ ದುಃಖಿಸುತ್ತದೆ ಎಂದು ಹೇಳಿದ್ದಾರೆ. ದಾಳಿಯ ನಂತರ ಏನಾಗಿದೆ ಎಂಬ ಬಗ್ಗೆ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ, ತನಿಖೆ ಪ್ರಗತಿಯಲ್ಲಿದೆ ಎಂದು ಅರ್ಬನ್ ಮಾಹಿತಿ ನೀಡಿದ್ದಾರೆ..

Kabul
Kabul
author img

By

Published : Aug 30, 2021, 5:43 PM IST

ಕಾಬೂಲ್(ಅಫ್ಘಾನಿಸ್ತಾನ) ​: ಶಂಕಿತ ಆತ್ಮಾಹುತಿ ಬಾಂಬರ್​ಗಳ ವಿರುದ್ಧ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಮಕ್ಕಳು ಸೇರಿ ಕನಿಷ್ಠ 10 ಜನ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಟೊಲೊ ನ್ಯೂಸ್ ವರದಿ ಮಾಡಿದೆ.

ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ISIS-K ಬೆದರಿಕೆಯಿದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಹೇಳಿಕೆ ನೀಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಅಮೆರಿಕದ ಕೇಂದ್ರ ಕಮಾಂಡ್​​ನ ವಕ್ತಾರ ಕ್ಯಾಪ್ಟನ್ ಬಿಲ್ ಅರ್ಬನ್, ನಾವು ಯಶಸ್ವಿಯಾಗಿ ನಮ್ಮ ಗುರಿ ತಲುಪಿದ್ದೇವೆ.

ವಿಮಾನ ನಿಲ್ದಾಣದತ್ತ ಸಾಗುತ್ತಿದ್ದ ವಾಹನದಲ್ಲಿ ಬೃಹತ್ ಪ್ರಮಾಣದ ಸ್ಫೋಟಕಗಳಿದ್ದವು. ಅದನ್ನು ಧ್ವಂಸ ಮಾಡುವ ಮೂಲಕ, ಐಸಿಸ್​-ಕೆನ ದೊಡ್ಡ ಸಂಚನ್ನು ವಿಫಲಗೊಳಿಸಿದ್ದೇವೆ ಎಂದಿದ್ದಾರೆ.

ಡ್ರೋನ್ ದಾಳಿಯ ಪರಿಣಾಮವನ್ನು ಮೌಲ್ಯಮಾಪನ ಮಾಡಲಾಗುತ್ತಿದೆ. ಒಂದು ವೇಳೆ ಈ ದಾಳಿಯಲ್ಲಿ ಅಮಾಯಕ ಜೀವಗಳಿಗೆ ಹಾನಿಯಾಗಿದ್ದಲ್ಲಿ ಅಮೆರಿಕ ತೀವ್ರವಾಗಿ ದುಃಖಿಸುತ್ತದೆ ಎಂದು ಹೇಳಿದ್ದಾರೆ. ದಾಳಿಯ ನಂತರ ಏನಾಗಿದೆ ಎಂಬ ಬಗ್ಗೆ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ, ತನಿಖೆ ಪ್ರಗತಿಯಲ್ಲಿದೆ ಎಂದು ಅರ್ಬನ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕಾಬೂಲ್ ಏರ್ಪೋರ್ಟ್‌ ಮೇಲೆ ರಾಕೆಟ್‌ಗಳ ಹಾರಾಟ: ತಮ್ಮದೇ ಕಾರ್ಯಾಚರಣೆ- ಅಮೆರಿಕ

ಗುರುವಾರ ಕಾಬೂಲ್​ ಏರ್​ಪೋರ್ಟ್ ಬಳಿ ನಡೆದಿದ್ದ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ ಅಮೆರಿಕದ 13 ಸೈನಿಕರು ಸೇರಿದಂತೆ ಸುಮಾರು 200 ಮಂದಿ ಮೃತಪಟ್ಟಿದ್ದರು. ದಾಳಿಯ ಹೊಣೆಯನ್ನು ಉಗ್ರ ಸಂಘಟನೆ ಐಸಿಸ್-ಕೆ ಒಪ್ಪಿಕೊಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.