ETV Bharat / international

ನಿರಾಯುಧ ಪಶ್ತೂನ್​ಗಳ ಮೇಲೆ ಗುಂಡಿನ ದಾಳಿ.. ಓರ್ವ ಸಾವು, 6 ಜನರಿಗೆ ಗಾಯ - ನಿರಾಯುಧ ಪಶ್ತೂನ್​ಗಳ ಮೇಲೆ ಗುಂಡಿನ ದಾಳಿ

ಪ್ರತಿಭಟನಾ ನಿರತ ವ್ಯಾಪಾರಿ, ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ ತಕ್ಷಣ ಪರಿಸ್ಥಿತಿ ಹಿಂಸಾತ್ಮಕ ರೂಪ ಪಡೆದಿದೆ. ಈ ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಗಾಯಗೊಂಡಿದ್ದಾರೆ..

ನಿರಾಯುಧ ಪಶ್ತೂನ್​ಗಳ ಮೇಲೆ ಗುಂಡಿನ ದಾಳಿ
ನಿರಾಯುಧ ಪಶ್ತೂನ್​ಗಳ ಮೇಲೆ ಗುಂಡಿನ ದಾಳಿ
author img

By

Published : Nov 30, 2020, 6:47 PM IST

ಚಮನ್ : ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಭಾನುವಾರ ನಿರಾಯುಧ ಪಶ್ತೂನ್​ಗಳ ಮೇಲೆ (ಮಧ್ಯ ಮತ್ತು ದಕ್ಷಿಣ ಏಷ್ಯಾಕ್ಕೆ ಸೇರಿದ ಇರಾನಿನ ಜನಾಂಗೀಯ ಗುಂಪು) ಪಾಕಿಸ್ತಾನ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ಕಾಲ್ನಡಿಗೆಯ ಮೂಲಕ ಪಶ್ತೂನ್​ ವ್ಯಾಪಾರಿಗಳು ತಮ್ಮ ಸರಕುಗಳೊಂದಿಗೆ ಗಡಿ ದಾಟಿದ್ದಾರೆ. ಬಳಿಕ ಅಧಿಕಾರಿಗಳು ಅವರನ್ನು ತಡೆದು ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಆದ್ರೆ, ವ್ಯಾಪಾರಿಗಳು ಭದ್ರತಾ ಸಿಬ್ಬಂದಿಗೆ ಗೇಟ್​ ತೆರೆಯುವಂತೆ ಒತ್ತಾಯಿಸಿದ್ದಾರೆ. ಅಧಿಕಾರಿಗಳು ನಿರಾಕರಿಸಿದ ನಂತರ, ವ್ಯಾಪಾರಿಗಳು ಗೇಟ್​ ಬಳಿ ಇದ್ದ ಸಿಬ್ಬಂದಿಗೆ ಕಲ್ಲು ಮತ್ತು ಸುಟ್ಟ ಟೈರ್​ಗಳಿಂದ ಹೊಡೆಯಲು ಪ್ರಾರಂಭಿಸಿದ್ದಾರೆ.

  • Strongly condemn FC’s firing on unarmed civilians in Chaman. Security forces continue to attack our people mercilessly. What laws allow the FC to open fire on unarmed civilians? Will the FC personnel who attacked civilians be arrested and prosecuted? #StateTerrorismInChaman pic.twitter.com/tf8ggepkly

    — Mohsin Dawar (@mjdawar) November 29, 2020 " class="align-text-top noRightClick twitterSection" data=" ">

ಪ್ರತಿಭಟನಾ ನಿರತ ವ್ಯಾಪಾರಿ, ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ ತಕ್ಷಣ ಪರಿಸ್ಥಿತಿ ಹಿಂಸಾತ್ಮಕ ರೂಪ ಪಡೆದಿದೆ. ಈ ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಮನ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರಲ್ಲಿ ಒಬ್ಬರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೊರೊನಾ ತಡೆಗಟ್ಟಲು ಪ್ರತಿಪಕ್ಷಗಳೇ 'ಮುಖ್ಯ ಸಮಸ್ಯೆ'ಯಾಗಿವೆ: ಇಮ್ರಾನ್​ ಖಾನ್

ಘಟನೆಯನ್ನು ದೃಢೀಕರಿಸುವಾಗ, ಗಾಯಗೊಂಡ ನಾಲ್ವರನ್ನು ಕ್ವೆಟ್ಟಾದ ಸಿವಿಲ್ ಆಸ್ಪತ್ರೆಯ ತೀವ್ರನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ ಎಂದು ಚಮನ್ ಸಹಾಯಕ ಆಯುಕ್ತ ಜಕೌಲ್ಲಾ ದುರಾನಿ ಹೇಳಿದ್ದಾರೆ.

ನಾಗರಿಕರ ಮೇಲಿನ ದಾಳಿಯನ್ನು ಖಂಡಿಸುತ್ತಾ, ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆಯೇ ಇಲ್ಲವೇ ಎಂದು ಪಶ್ತುನ್ ತಹಾಫುಜ್ ಚಳವಳಿಯ (ಪೇಟಿಎಂ) ನಾಯಕ ಮೊಹ್ಸಿನ್ ದಾವರ್ ಪಾಕಿಸ್ತಾನ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.