ಢಾಕಾ: ಎರಡು ದಿನಗಳ ಬಾಂಗ್ಲಾ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಕೆಲವೊಂದು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದು, ಇದರ ಬೆನ್ನಲ್ಲೇ 1.2 ಮಿಲಿಯನ್ ಕೋವಿಡ್ ವ್ಯಾಕ್ಸಿನ್ ಗಿಫ್ಟ್ ನೀಡಿದ್ದಾರೆ.
-
“#VaccineMaitri” to overcome Covid!
— Arindam Bagchi (@MEAIndia) March 27, 2021 " class="align-text-top noRightClick twitterSection" data="
1.2 million doses of Made in India Covid vaccines as grant from India to Bangladesh were handed over by Prime Minister @narendramodi to Prime Minister Sheikh Hasina. pic.twitter.com/4iGL523pQw
">“#VaccineMaitri” to overcome Covid!
— Arindam Bagchi (@MEAIndia) March 27, 2021
1.2 million doses of Made in India Covid vaccines as grant from India to Bangladesh were handed over by Prime Minister @narendramodi to Prime Minister Sheikh Hasina. pic.twitter.com/4iGL523pQw“#VaccineMaitri” to overcome Covid!
— Arindam Bagchi (@MEAIndia) March 27, 2021
1.2 million doses of Made in India Covid vaccines as grant from India to Bangladesh were handed over by Prime Minister @narendramodi to Prime Minister Sheikh Hasina. pic.twitter.com/4iGL523pQw
ಢಾಕಾದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರಧಾನಿ ಶೇಖ್ ಹಸೀನಾ ಅವರಿಗೆ ಪ್ರಾತಿನಿಧಿಕ ಪೆಟ್ಟಿಗೆ ಹಸ್ತಾಂತರ ಮಾಡಿದ್ದಾರೆ. ಭಾರತದಿಂದ 30 ಮಿಲಿಯನ್ ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳಲು ಬಾಂಗ್ಲಾದೇಶ ಕಳೆದ ನವೆಂಬರ್ ತಿಂಗಳಲ್ಲಿ ಒಪ್ಪಂದ ಮಾಡಿಕೊಂಡಿದ್ದು, ಈಗಾಗಲೇ 9 ಮಿಲಿಯನ್ ವ್ಯಾಕ್ಸಿನ್ ರವಾನೆ ಮಾಡಲಾಗಿದೆ. ಇದೀಗ 1.2 ಮಿಲಿಯನ್ ವ್ಯಾಕ್ಸಿನ್ ಗಿಫ್ಟ್ ಆಗಿ ನೀಡುವುದಾಗಿ ಭಾರತ ಘೋಷಣೆ ಮಾಡಿದೆ. ಜತೆಗೆ 109 ಆ್ಯಂಬುಲೆನ್ಸ್ಗಳನ್ನ ಭಾರತ ಬಾಂಗ್ಲಾದೇಶಕ್ಕೆ ಉಚಿತವಾಗಿ ನೀಡಿದೆ.
-
सर्वे सन्तु निरामयाः।
— Arindam Bagchi (@MEAIndia) March 27, 2021 " class="align-text-top noRightClick twitterSection" data="
Gifting of 109 ambulances from India to bolster health capacity of Bangladesh was announced in the presence of Prime Minister @narendramodi and Prime Minister Sheikh Hasina. pic.twitter.com/i2GCwNieuV
">सर्वे सन्तु निरामयाः।
— Arindam Bagchi (@MEAIndia) March 27, 2021
Gifting of 109 ambulances from India to bolster health capacity of Bangladesh was announced in the presence of Prime Minister @narendramodi and Prime Minister Sheikh Hasina. pic.twitter.com/i2GCwNieuVसर्वे सन्तु निरामयाः।
— Arindam Bagchi (@MEAIndia) March 27, 2021
Gifting of 109 ambulances from India to bolster health capacity of Bangladesh was announced in the presence of Prime Minister @narendramodi and Prime Minister Sheikh Hasina. pic.twitter.com/i2GCwNieuV
ಇದನ್ನೂ ಓದಿ: ಶೇಖ್ ಮುಜೀಬುರ್ ರೆಹಮಾನ್ಗೆ ಗಾಂಧಿ ಶಾಂತಿ ಪ್ರಶಸ್ತಿ ಹಸ್ತಾಂತರಿಸಿದ ಪ್ರಧಾನಿ ಮೋದಿ
ಎರಡು ದಿನಗಳ ಬಾಂಗ್ಲಾದೇಶದ ಪ್ರವಾಸದ ವೇಳೆ ನಮೋ ಪ್ರಮುಖವಾಗಿ ಇಂಧನ, ವ್ಯಾಪಾರ, ಆರೋಗ್ಯ ಮತ್ತು ಸಹಕಾರ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಿದ್ದು, ಐದು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಬಾಂಗ್ಲಾ ವಿಮೋಚನಾ 50ನೇ ಸಂಭ್ರಮಾಚರಣೆಯಲ್ಲಿ ಭಾಗಿಯಾಗುವ ಉದ್ದೇಶದಿಂದ ನಮೋ ನೆರೆಯ ರಾಷ್ಟ್ರಕ್ಕೆ ಪ್ರವಾಸ ಕೈಗೊಂಡಿದ್ದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ನಮೋ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ನರೇಂದ್ರ ಮೋದಿಯವರ ವೀಸಾ ರದ್ಧುಗೊಳಿಸುವಂತೆ ಆಗ್ರಹಿಸಿದ್ದಾರೆ.