ವಾಷಿಂಗ್ಟನ್: ಅಮೆರಿಕದಲ್ಲಿ ಲಕ್ಷಾಂತರ ಮಂದಿ ಉದ್ಯೋಗ ವಂಚಿತರಾಗಿದ್ದು, ನಿರೋದ್ಯೋಗ ಪ್ರಮಾಣ ಏರಿಕೆಯಾಗಿದೆ. ಆದರೆ, ಅಧ್ಯಕ್ಷ ಜೋ ಬೈಡನ್ ಸರ್ಕಾರ ಇದೆಲ್ಲಕ್ಕೂ ಪರಿಹಾರ ನೀಡಲಿದೆ ಎಂದು ಹಣಕಾಸು ಸಚಿವಾಲಯ ಕಾರ್ಯದರ್ಶಿ ಜಾನೆಟ್ ಯೆಲೆನ್ ಹೇಳಿದ್ದಾರೆ.
ಮುಂದಿನ ವರ್ಷದೊಳಗೆ ಬೈಡನ್ ಸರ್ಕಾರವು 1.9( ಸುಮಾರು ಒಂದೂವರೆಕೋಟಿ ಲಕ್ಷ ಕೋಟಿ) ಟ್ರಿಲಿಯನ್ ಡಾಲರ್ ಹಣವನ್ನು ಯುವಕರ ಉದ್ಯೋಗಕ್ಕಾಗಿ ಮೀಸಲಿಡಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಈ ಹಣ ಕೊರೊನಾ ಪ್ಯಾಕೇಜ್ ಒಳಗೊಂಡಿರಲಿದೆ ಎಂದಿದ್ದಾರೆ. ಆದರೆ ಬೈಡನ್ ಸರ್ಕಾರದ ಯೋಜನೆ ಕುರಿತು ರಿಪಬ್ಲಿಕನ್ ಸೆನೆಟರ್ಗಳು ಟೀಕೆ ಆರಂಭಿದ್ದು, ಇದು ಖಜಾನೆ ಮಾಡಿ ದೇಶವನ್ನು ಹಣದುಬ್ಬರದ ಸಂಕಷ್ಟಕ್ಕೆ ತಳ್ಳಲಿದೆ. ಈ ಯೋಜನೆಯು ಮೂಲಸೌಕರ್ಯ ಒದಗಿಸುವಂತಹ ಕ್ರಮಗಳಿಗೆ ಕಡಿಮೆ ಅನುದಾನ ಬಿಡುಗಡೆಗೆ ಕಾರಣವಾಗುತ್ತದೆ ಎಂದು ವಾದಿಸಿದ್ದಾರೆ.
ನಾವೀಗಾಗಲೇ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಅದು ನಮಗೆ ಬಹುದೊಡ್ಡ ತೊಡಕಾಗಿದೆ ಎಂದು ಜಾನೆಟ್ ಹೇಳಿದ್ದಾರೆ. ಈ ಕುರಿತು ಕಳೆದ ವಾರ ಬೈಡನ್ ಪ್ಯಾಕೇಜ್ ಅನುಮೋದನೆ ವೇಳೆ 50:50ರಷ್ಟು ಮತ ಚಲಾವಣೆಯಾಗಿತ್ತು. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತವು ಟೈ ಬ್ರೇಕಿಂಗ್ ಎನಿಸಿಕೊಂಡಿತ್ತು.
ಬೈಡನ್ ಸರ್ಕಾರದ ಈ ಯೋಜನೆಯು ಕಾರ್ಮಿಕರಿಗೆ ಬೆಂಬಲ, ನಿರುದ್ಯೋಗಿ ಮತ್ತು ಜನರ ಆರೋಗ್ಯ ವೆಚ್ಚ ಒಳಗೊಂಡಿರಲಿದೆ. ಇದರ ಪೂರ್ಣ ಪ್ರಮಾಣದ ಯೋಜನೆಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಖಾಸಗಿ ಸಂಪತ್ತು ಮರೆಮಾಚಲು ಯುಕೆ ಸರ್ಕಾರಕ್ಕೆ ಒತ್ತಡ ಹೇರಿದ್ದ ರಾಣಿ ಎಲಿಜಬೆತ್-2!