ನ್ಯೂಯಾರ್ಕ್: ಪ್ರತಿ ವರ್ಷ 4 ಲಕ್ಷಕ್ಕೂ ಅಧಿಕ ಜನರನ್ನು ಬಲಿ ಪಡೆಯುವ ಮಲೇರಿಯಾ ರೋಗಕ್ಕೆ ಕೊನೆಗೂ ಔಷಧ ದೊರೆಯುವುದು ಖಾತ್ರಿಯಾಗಿದೆ. ಮಕ್ಕಳಿಗಾಗಿ ಅಭಿವೃದ್ಧಿಪಡಿಸಲಾದ ಜಗತ್ತಿನ ಮೊದಲ ಮಲೇರಿಯಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಅನುಮೋದನೆ ನೀಡಿದೆ.
'ಮಾಸ್ಕಿರಿಕ್ಸ್' (mosquirix) ಹೆಸರಿನ ಮಲೇರಿಯಾ ಲಸಿಕೆ ಇದಾಗಿದೆ. ಮೊದಲು ಇದನ್ನು ಮಲೇರಿಯಾಪೀಡಿತ ಖಂಡವಾದ ಆಫ್ರಿಕದಾದ್ಯಂತ ನೀಡಲು ಡಬ್ಲ್ಯುಹೆಚ್‌ಒ ಒತ್ತಾಯಿಸಿದೆ. ಈ ಲಸಿಕೆಯನ್ನು ಒಂದೂವರೆ ತಿಂಗಳ ಮಗುವಿನಿಂದ ಹಿಡಿದು 17 ತಿಂಗಳ ಮಕ್ಕಳಿಗೆ ನೀಡಬಹುದಾಗಿದೆ. ಅಷ್ಟೇ ಅಲ್ಲ, ಇದು ಹೆಪಟೈಟಿಸ್ ಬಿ ವೈರಸ್ನಿಂದ ಉಂಟಾಗುವ ಯಕೃತ್ತಿನ ಸೋಂಕಿನ ವಿರುದ್ಧವೂ ಹೋರಾಡುತ್ತದೆ.
-
A child dies from #malaria every two minutes.
— World Health Organization (WHO) (@WHO) October 6, 2021 " class="align-text-top noRightClick twitterSection" data="
One death is one too many.
🚨 Today, WHO recommends RTS,S, a groundbreaking malaria vaccine, to reduce child illness & deaths in areas with moderate and high malaria transmission https://t.co/xSk58nTIV1#VaccinesWork pic.twitter.com/mSECLtRhQs
">A child dies from #malaria every two minutes.
— World Health Organization (WHO) (@WHO) October 6, 2021
One death is one too many.
🚨 Today, WHO recommends RTS,S, a groundbreaking malaria vaccine, to reduce child illness & deaths in areas with moderate and high malaria transmission https://t.co/xSk58nTIV1#VaccinesWork pic.twitter.com/mSECLtRhQsA child dies from #malaria every two minutes.
— World Health Organization (WHO) (@WHO) October 6, 2021
One death is one too many.
🚨 Today, WHO recommends RTS,S, a groundbreaking malaria vaccine, to reduce child illness & deaths in areas with moderate and high malaria transmission https://t.co/xSk58nTIV1#VaccinesWork pic.twitter.com/mSECLtRhQs
ಹೆಣ್ಣು ಅನಾಫಿಲಿಸ್ ಸೊಳ್ಳೆಯ ಮೂಲಕ ಹರಡುವ ಮಲೇರಿಯಾದಿಂದ ವಿಶ್ವದಲ್ಲಿ ಪ್ರತಿ ಎರಡು ನಿಮಿಷಕ್ಕೊಮ್ಮೆ ಒಂದು ಮಗು ಮರಣ ಹೊಂದುತ್ತದೆ. ಮಲೇರಿಯಾ ವಿರುದ್ಧ ಹೋರಾಡುವ ಲಸಿಕೆಗಾಗಿ ಶತಮಾನದಿಂದ ಪ್ರಯತ್ನಗಳು ನಡೆಯುತ್ತಲೇ ಇದ್ದವು.
ಮಾಸ್ಕಿರಿಕ್ಸ್ ವ್ಯಾಕ್ಸಿನ್ ಅನ್ನು 1987 ರಲ್ಲೇ ಗ್ಲಾಕ್ಸೊಸ್ಮಿತ್‌ಕ್ಲೈನ್ ಹೆಸರಿನ ಔಷಧ ಕಂಪನಿ ಅಭಿವೃದ್ಧಿಪಡಿಸಿತ್ತಾದರೂ ಅನೇಕ ಸವಾಲುಗಳನ್ನು ಎದುರಿಸುತ್ತಿತ್ತು. 2019ರಲ್ಲಿ ಲಸಿಕೆ ಪ್ರಯೋಗ ಆರಂಭಿಸಲಾಗಿದ್ದು, ಆಫ್ರಿಕಾದ ಘಾನಾ, ಕೀನ್ಯಾ ಮತ್ತು ಮಲಾವಿ ರಾಷ್ಟ್ರಗಳಲ್ಲಿ 2.3 ಮಿಲಿಯನ್ ಡೋಸ್ಗಳನ್ನು ನೀಡಲಾಗಿದೆ.
4 ಡೋಸ್ ಲಸಿಕೆ
ಒಟ್ಟು ಈ ಲಸಿಕೆಯ ನಾಲ್ಕು ಡೋಸ್ಗಳನ್ನು ಪಡೆದುಕೊಳ್ಳಬೇಕು. ಪ್ರತಿ ಡೋಸ್ ನಡುವೆ ಒಂದು ತಿಂಗಳ ಅಂತರದಂತೆ ಮಗುವಿಗೆ ಮೂರು ಡೋಸ್ಗಳನ್ನು ನೀಡಲಾಗುತ್ತದೆ. ಮೂರನೇ ಡೋಸ್ ತೆಗೆದುಕೊಂಡ 18 ತಿಂಗಳ ಬಳಿಕ ನಾಲ್ಕನೇ ಡೋಸ್ ಹಾಕಲಾಗುತ್ತದೆ.