ಹೈದರಾಬಾದ್: ಮಹಾಮಾರಿ ಕೋವಿಡ್‌ನಿಂದಾಗಿ ಕಳೆದ ವರ್ಷ ಜಗತ್ತಿನಾದ್ಯಂತ 811 ಮಿಲಿಯನ್ (81 ಕೋಟಿ 10 ಲಕ್ಷ) ಜನರು ಅಪೌಷ್ಟಿಕತೆಗೆ ಒಳಗಾಗಿದ್ದಾರೆ ಎಂದು ವಿಶ್ವ ಸಂಸ್ಥೆ (ಯುಎನ್) ಕಳವಳ ವ್ಯಕ್ತ ಪಡಿಸಿದೆ.
'ಸ್ಟೇಟ್ ಆಫ್ ಫುಡ್ ಸೆಕ್ಯೂರಿಟಿ ಅಂಡ್ ನ್ಯುಟ್ರಿಷನ್ ಇನ್ ದಿ ವರ್ಲ್ಡ್2021' ವರದಿ ಬಿಡುಗಡೆ ಮಾಡಿರುವ ಯುಎನ್, 2020ರಲ್ಲಿ ವಿಶ್ವದಲ್ಲಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. 2005ರ ಬಳಿ ಕಳೆದ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜನರ ಜೀವನ ಮಟ್ಟದ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ಹೇಳಿದೆ.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ), ಕೃಷಿ ಅಭಿವೃದ್ಧಿಗೆ ಅಂತಾರಾಷ್ಟ್ರೀಯ ನಿಧಿ (ಐಎಫ್‌ಎಡಿ), ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್), ವಿಶ್ವಸಂಸ್ಥೆ ಆಹಾರ ಕಾರ್ಯಕ್ರಮಗಳು (ಡಬ್ಲ್ಯೂಎಫ್‌ಪಿ) ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಜಂಟಿಯಾಗಿ ವರದಿಯನ್ನು ಪ್ರಕಟಿಸಿವೆ. ಮಹಾಮಾರಿ ವೈರಸ್ ಕಾಣಿಸಿಕೊಂಡ ಬಳಿಕ ಈ ಸಂಸ್ಥೆಗಳು ಪ್ರಕಟಿಸುತ್ತಿರುವ ಮೊದಲ ಜಾಗತಿಕ ವರದಿ ಇದಾಗಿದೆ.
ಯುಎನ್‌ನ ಈ ಸಂಸ್ಥೆಗಳು ಮುಖ್ಯಸ್ಥರು, ದುರಾದೃಷ್ಟವಶಾತ್ ಕೋವಿಡ್ ನಮ್ಮ ಆಹಾರದ ವ್ಯವಸ್ಥೆಯನ್ನು ನಿರಂತರವಾಗಿ ದೌರ್ಬಲ್ಯಗೊಳಿಸುತ್ತಿದೆ. ಇದು ಜಗತ್ತಿನಾದ್ಯಂತದ ಜನರ ಜೀವನ ಮತ್ತು ಜೀವನೋಪಾಯಕ್ಕೆ ಧಕ್ಕೆ ತರುತ್ತಿದೆ. ಜಾಗತಿಕವಾಗಿ, ವೈರಸ್‌ನಿಂದ ಆರ್ಥಿಕ ಚಟುವಟಿಕೆಯಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಿದೆ. ಇದರಿಂದಾಗಿ ಆಹಾರದ ಪ್ರವೇಶವನ್ನೂ ಅಪಾಯಕ್ಕೆ ತಳ್ಳುತ್ತಿದೆ. ಇದು ಹಸಿವು ಹರಡುವಿಕೆ ಮತ್ತು ಅಪೌಷ್ಟಿಕತೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತೀಯ ವ್ಯಾಪಾರಿ ಹಡಗುಗಳ ಸುಗಮ ಸಂಚಾರ ಖಾತ್ರಿ: 'ಆಪರೇಷನ್ ಸಂಕಲ್ಪ' ಕಾರ್ಯಾಚರಣೆ
ಸಂಘರ್ಷ, ಹೆಚ್ಚಿನ ಅಸಮಾನತೆ, ಹವಾಮಾನ ಬದಲಾವಣೆ ಮತ್ತು ಆರ್ಥಿಕ ಚಟುವಟಿಕೆಯ ಕುಸಿತ ಆಹಾರ ಮತ್ತು ಅಪೌಷ್ಟಿಕತೆಯ ಕೊರತೆಗೆ ಪ್ರಮುಖ ಕಾರಣವಾಗುತ್ತದೆ. ಆಹಾರದ ಬೆಲೆಗಳು 10 ವರ್ಷಗಳಲ್ಲಿ ಗರಿಷ್ಠ ಮಟ್ಟದಲ್ಲಿದೆ ಎಂದು ವರದಿ ಹೇಳಿದೆ. ಹೆಚ್ಚಾಗಿ ಆಮದುಗಳ ಮೇಲೆ ಅವಲಂಬಿತವಾಗಿರುವ ಉದಯೋನ್ಮುಖ ರಾಷ್ಟ್ರಗಳಿಗೆ ಇದು ಕಷ್ಟಕರವಾಗಿದೆ. ಹಸಿವು ಮುಕ್ತಗೊಳಿಸಲು ಪಣ ತೊಟ್ಟಿರುವ ವಿಶ್ವಸಂಸ್ಥೆ, 2030ರ ವೇಳೆ ಪ್ರಪಂಚದಲ್ಲಿ ಎಲ್ಲರಿಗೂ ಆಹಾರ ಸಿಗುವಂತೆ ನೋಡಿಕೊಳ್ಳಬೇಕು. ಕಳೆದ ಐದು ವರ್ಷಗಳಲ್ಲಿ ಅಪೌಷ್ಟಿಕತೆ (ಪಿಒಯು) ಹರಡುವಿಕೆಯು ಒಂದೇ ವರ್ಷದಲ್ಲಿ ಶೇಕಡಾ 8.4 ರಿಂದ 9.9 ಕ್ಕೆ ಏರಿಕೆಯಾಗಿದೆ. ಪಿಒಯುನಲ್ಲಿನ ಹೆಚ್ಚಳವು ಈಗ 'ಶೂನ್ಯ ಹಸಿವು' ಸಾಕಾರಗೊಳಿಸುವ ಗುರಿಯನ್ನು ಒಂಬತ್ತು ವರ್ಷಗಳವರೆಗೆ ಮುಂದೂಡಲು ವಿಶ್ವಸಂಸ್ಥೆಯನ್ನು ಒತ್ತಾಯಿಸಿದ್ದಾರೆ.