ETV Bharat / international

ಅಚ್ಚರಿ.. ಪ್ರಾಣಿಗಳಿಂದ ಪೋಷಿಸಲ್ಪಟ್ಟ ಮಕ್ಕಳು ಹೀಗಿದ್ದಾರೆ..! - ನಾಯಿ ಮತ್ತು ಬೆಕ್ಕುಗಳ ನಡುವೆ ಬೆಳೆದ ಬಾಲಕಿ

ಸುಮಾರು ಮೂರು ವರ್ಷ ಮಂಗಗಳ ಜೊತೆಗೆ ಅನಿವಾರ್ಯವಾಗಿ ವಾಸವಿದ್ದ ಜಾನ್​ಗೆ ಆಹಾರ ಹುಡುಕುವುದನ್ನು ಮತ್ತು ಮರ ಹತ್ತುವುದನ್ನು ಮಂಗಗಳೇ ಹೇಳಿಕೊಟ್ಟಿವೆಯಂತೆ.

world feral kids in real life
ಅಚ್ಚರಿ.. ಪ್ರಾಣಿಗಳಿಂದ ಪೋಷಿಸಲ್ಪಟ್ಟ ಮಕ್ಕಳು ಹೀಗಿದ್ದಾರೆ..!
author img

By

Published : Jan 27, 2022, 10:35 AM IST

ಯಾರೊಂದಿಗೆ ಮನುಷ್ಯ ಇರುತ್ತಾನೋ, ಅವರಂತೆಯೇ ಆಗುತ್ತಾನೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಮಂಗಗಳ ಜೊತೆ ಇದ್ದರೆ, ಮಂಗನಂತೆಯೇ ಆಗುತ್ತಾನೆಯೇ.. ಎಲ್ಲೋ ಕೆಲವು ಸಂಗತಿಗಳನ್ನು ನಾವು ಕೇಳಿ ತಿಳಿದುಕೊಂಡಿದ್ದೆವು. ಕೆಲವೊಂದು ಸಿನಿಮಾಗಳಲ್ಲೂ ಈ ರೀತಿಯ ಸಂಗತಿಗಳನ್ನು ಚಿತ್ರಿಸಲಾಗಿದೆ.

ಅದು 1991, ಆರು ವರ್ಷದ ಬಾಲಕನೋರ್ವ ಉಗಾಂಡಾದ ಗ್ರಾಮಸ್ಥನೊಬ್ಬನಿಗೆ ಪತ್ತೆಯಾಗಿದ್ದ. ಅವರನ್ನು ಅನಾಥಾಶ್ರಮದಲ್ಲಿಟ್ಟು ಪೋಷಣೆ ಮಾಡಲಾಗಿತ್ತು. ಅನಾಥಾಶ್ರಮದಲ್ಲಿ ಆತ ಆಫ್ರಿಕಾದ ಮಕ್ಕಳೊಂದಿಗೆ ಸೇರಿ ಮಾತನಾಡುವುದನ್ನು ಕಲಿತುಕೊಂಡನು.

ಆತನ ಹೆಸರು ಜಾನ್. ಆತನನ್ನು ದತ್ತು ತೆಗೆದುಕೊಂಡ ವ್ಯಕ್ತಿಯ ಹೆಸರು ಪೌಲ್ ವಾಸ್ವಾ. 'ಆತನನ್ನು ದತ್ತು ತೆಗೆದುಕೊಂಡಾಗ ​ಮೈತುಂಬಾ ಕೂದಲುಗಳಿದ್ದವು. ಕಾಡಿನಲ್ಲಿ ವಾಸಿಸುವ ಜನರ ಮಕ್ಕಳಿದ್ದಂತೆ ಆತನಿದ್ದನು. ಅವನ ಉಗುರುಗಳು ಜಾಸ್ತಿ ಬೆಳೆದು ಸುರುಳಿಯಾಕಾರದಲ್ಲಿ ಸುತ್ತಿಕೊಂಡಿದ್ದವು ಎಂದು ಪೌಲ್ ವಾಸ್ವಾ ಹೇಳಿದ್ದಾರೆ.

credit: youtube
ಕೃಪೆ- ಯೂಟ್ಯೂಬ್

ಅಚ್ಚರಿಯ ವಿಚಾರವೆಂದರೆ ಕೆಲವು ವರ್ಷಗಳು ಕಳೆದ ಮೇಲೆ ಬಿಬಿಸಿ ಚಾನೆಲ್ ವೆರ್ವೆಟ್ ಮಂಗಗಳ ಕುರಿತ ಸಾಕ್ಷ್ಯಚಿತ್ರ ತಯಾರಿಸಲು ಜಾನ್​ನನ್ನು ಕರೆದುಕೊಂಡು ಕಾಡಿಗೆ ತೆರಳಿತ್ತು. ಈ ವೇಳೆ ಮಂಗಗಳೊಂದಿಗೆ ಈತ ಮಂಗಗಳ ಭಾಷೆಯಲ್ಲಿ ಸಂಭಾಷಣೆ ನಡೆಸಿದ್ದನು. ಅವನೇ ಹೇಳುವಂತೆ ಮಂಗಗಳೇ ಆತನಿಗೆ ಮರಹತ್ತುವುದು ಮತ್ತು ಆಹಾರವನ್ನು ಹುಡುಕುವುದನ್ನು ಹೇಳಿಕೊಟ್ಟಿವೆಯಂತೆ.

ಜಾನ್ 1988ರಲ್ಲಿ ತನ್ನ ತಂದೆ-ತಾಯಿ ಹತ್ಯೆಯಾದ ಬಳಿಕ ತನ್ನ ಮನೆಯಿಂದ ಕಾಡಿಗೆ ಓಡಿ ಹೋಗಿ ಕೋತಿಗಳ ಜೊತೆಯಲ್ಲಿ ವಾಸ ಮಾಡಿದ್ದನು ಎಂದು ಹೇಳಲಾಗುತ್ತಿದೆ. ಅಂದರೆ ಮೂರು ವರ್ಷದವನಿದ್ದಾಗಲೇ ಆತ ಮಂಗಗಳೊಂದಿಗೆ ವಾಸ ಮಾಡಲು ಆರಂಭಿಸಿದ್ದನು ಎಂದು ತಿಳಿದುಬಂದಿದೆ

ನಾಯಿಯ ರೀತಿಯ ಬಾಲಕಿ

ಜಾನ್​ನದು ಮಂಗದ ರೀತಿಯ ವರ್ತನೆಯಾದರೆ, ನತಾಶ ಮಿಖೈಲೋವಾ ಶ್ವಾನಗಳ ರೀತಿಯ ವರ್ತನೆ ಹೊಂದಿದ್ದಾಳೆ. ನಾಲ್ಕು ಕಾಲಿನಿಂದ ನಡೆಯುವ ಆಕೆ, ನಾಲಿಗೆಯಿಂದ ನೀರನ್ನು ಕುಡಿಯುತ್ತಾಳೆ. ನಾಯಿಯಂತೆ ಬೊಗಳುತ್ತಾಳೆ.

credit: youtube
ಕೃಪೆ- ಯೂಟ್ಯೂಬ್

ರಷ್ಯಾದ ಚಿಟಾದಲ್ಲಿರುವ ಆಕೆ ಹಸುಗೂಸು ಇದ್ದಾಗಲೇ, ಒಂದು ಕೊಠಡಿಯಲ್ಲಿ ಬಂಧಿಯಾಗಿದ್ದಳು. ಆಕೆ ಅಲ್ಲಿಗೆ ಹೇಗೆ ಬಂದಳು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಆಕೆ ನಾಯಿ ಮತ್ತು ಬೆಕ್ಕುಗಳೊಂದಿಗೆ ಬೆಳೆದಿದ್ದಳು. ಹೀಗಾಗಿ ಪ್ರಾಣಿಯ ವರ್ತನೆ ಆಕೆಗೆ ಬಂದಿತ್ತು ಎನ್ನಲಾಗಿದೆ.

ಆಕೆ ಇಷ್ಟು ದಿನಗಳ ಕಾಲ ಅಲ್ಲಿದ್ದಳು ಎಂಬುದು ಗೊತ್ತೇ ಇರಲಿಲ್ಲ. ಆಕೆಯ ಬಳಿ ಮೂರು ನಾಯಿಗಳಿವೆ ಎಂದು ನೆರೆಯ ವ್ಯಕ್ತಿಯೊಬ್ಬನು ಹೇಳಿದ್ದನು. ಈಗ ಆಕೆ ಮಾನವರ ನಡವಳಿಕೆಗಳನ್ನು ಅಭ್ಯಾಸ ಮಾಡುತ್ತಿದ್ದು, ಅನಾಥಾಶ್ರಮದಲ್ಲಿ ಮಾತನಾಡಲು ಕಲಿಯುತ್ತಿದ್ದಾಳೆ.

ಇದನ್ನೂ ಓದಿ: ವಿಶ್ವದ ಅತಿ ಚಿಕ್ಕ ನದಿ ಇರೋದು ಎಲ್ಲಿ ಗೊತ್ತಾ? ಏನಿದರ ವಿಶೇಷ.. ಅದರ ಪುಟ್ಟ ಪುಟ್ಟ ಹೆಜ್ಜೆಗಳು ಇಲ್ಲಿವೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.