ETV Bharat / international

ಈ ಎರಡು ದೇಶಗಳನ್ನು ಬಿಟ್ಟು ಜಗತ್ತೇ ಆರ್ಥಿಕ ಹಿಂಜರಿತ ಅನುಭವಿಸಲಿದೆ: ವಿಶ್ವಸಂಸ್ಥೆ - ವಿಶ್ವಸಂಸ್ಥೆ ವರದಿ

ಜಗತ್ತಿನ ಪ್ರಬಲ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಆಘಾತಕಾರಿ​ ಸುದ್ದಿ​ ಕೊಟ್ಟಿದೆ. ಕೊರೊನಾ ವೈರಸ್​ ಅಟ್ಯಾಕ್​ನಿಂದಾಗಿ ಜಾಗತಿಕ ಆರ್ಥಿಕತೆಗೆ ಈ ವರ್ಷ ಟ್ರಿಲಿಯನ್​ಗಟ್ಟಲೆ ಡಾಲರ್ ನಷ್ಟವಾಗಲಿದೆಯಂತೆ. ಆದರೆ ಇದರಿಂದ ಭಾರತ ಹಾಗೂ ಚೀನಾಗೆ ಯಾವುದೇ ತೊಂದರೆಯಾಗಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.

recession
ಆರ್ಥಿಕ ಹಿಂಜರಿತ
author img

By

Published : Mar 31, 2020, 11:00 AM IST

ನ್ಯೂಯಾರ್ಕ್​: ಕೊರೊನಾ ವೈರಸ್​​ ಜಗತ್ತಿನ ವಿವಿಧ ರಾಷ್ಟ್ರಗಳ ಆರ್ಥಿಕತೆಯ ಬುಡವನ್ನೇ ಹಿಡಿದು ಅಲುಗಾಡಿಸುತ್ತಿದ್ದು, ಅಭಿವೃದ್ಧಿ ಹೊಂದಿದ ಪ್ರಮುಖ ರಾಷ್ಟ್ರಗಳಿಗೂ ವೈರಸ್​ ಬಲವಾದ ಗುದ್ದು ಕೊಟ್ಟಿದೆ. ಈ ನಡುವೆ ವಿಶ್ವಸಂಸ್ಥೆ ನೀಡಿರುವ ವರದಿಯೊಂದು ಪ್ರಬಲ ರಾಷ್ಟ್ರಗಳನ್ನು ಬೆಚ್ಚಿಬೀಳಿಸಿದೆ.

ಸಾಂಕ್ರಾಮಿಕ ರೋಗ ಕೊರೊನಾ ವೈರಸ್​ ದಾಳಿಯಿಂದಾಗಿ ಜಾಗತಿಕ ಆರ್ಥಿಕತೆಗೆ ಈ ವರ್ಷ ಟ್ರಿಲಿಯನ್​ಗಟ್ಟಲೆ ಡಾಲರ್ ನಷ್ಟವಾಗಲಿದೆಯಂತೆ. ವಿಶೇಷವೆಂದರೆ, ಪ್ರಮುಖ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹೆಚ್ಚು ನಷ್ಟ ಅನುಭವಿಸಲಿದೆಯಂತೆ.

ಭಾರತ, ಚೀನಾಗಿಲ್ಲ ಸಂಕಷ್ಟ:

ವಿಶೇಷವೆಂದರೆ ಕೊರೊನಾ ಹುಟ್ಟಿಕೊಂಡ ಚೀನಾಗೆ ಈ ಆರ್ಥಿಕ ಹಿಂಜರಿತದ ಹೊಡೆತ ಬೀಳಲ್ವಂತೆ. ಅದರಂತೆ ಕೊರೊನಾ ವಿರುದ್ಧ ನಿರಂತರ ಹೋರಾಟದಲ್ಲಿರುವ ಭಾರತಕ್ಕೂ ಇದರಿಂದ ತೊಂದರೆಯಾಗಲ್ಲ ಎಂದು ವಿಶ್ವಸಂಸ್ಥೆ ತನ್ನ ವರದಿಯೊಂದರಲ್ಲಿ ಹೇಳಿದೆ.

ವಿಶ್ವದ ಒಟ್ಟು ಜನಸಂಖ್ಯೆಯ ಮೂರನೇ ಎರಡರಷ್ಟು ಜನರಿರುವ ಅಭಿವೃದ್ಧಿಶೀಲ ರಾಷ್ಟ್ರಗಳು COVID-19 ಬಿಕ್ಕಟ್ಟಿನಿಂದ ಆರ್ಥಿಕ ನಷ್ಟವನ್ನು ಎದುರಿಸುತ್ತಿವೆ. ಹೀಗಾಗಿ ಈ ರಾಷ್ಟ್ರಗಳಿಗೆ 2.5 ಟ್ರಿಲಿಯನ್ ಯುಎಸ್​ ಡಾಲರ್​ ರಕ್ಷಣಾ ಪ್ಯಾಕೇಜ್​ ನೀಡಲು ವಿಶ್ವಸಂಸ್ಥೆ ಮುಂದಾಗಿದೆ.

ಆದ್ರೆ ಇನ್ನೊಂದೆಡೆ, ವಿಶ್ವ ಬ್ಯಾಂಕ್‌ ಸಾಂಕ್ರಾಮಿಕ ರೋಗ ಚೀನಾದ ಆರ್ಥಿಕಾಭಿವೃದ್ಧಿಯನ್ನು ಸಂಪೂರ್ಣವಾಗಿ ಬುಡಮೇಲು ಮಾಡಬಹುದು ಎಂದು ಎಚ್ಚರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.