ವಾಷಿಂಗ್ಟನ್: ಉಕ್ರೇನ್ ಮತ್ತು ರಷ್ಯಾ ಬಿಕ್ಕಟ್ಟಿನ ಮಧ್ಯೆ ಯಾರೂ ತಲೆದೂರಿಸಕೂಡದು ಎಂಬ ರಷ್ಯಾದ ಬೆದರಿಕೆಯ ಮಧ್ಯೆಯೂ ವಿಶ್ವಬ್ಯಾಂಕ್ ದಾಳಿಯಿಂದ ತತ್ತರಿಸಿರುವ 'ಉಕ್ರೇನ್ಗೆ ತಕ್ಷಣಕ್ಕೆ ಹಣಕಾಸಿನ ನೆರವು ನೀಡಲು ಸಿದ್ದ' ಎಂದು ಘೋಷಿಸಿದೆ.
ಉಕ್ರೇನ್ಗೆ ತಕ್ಷಣದ ಆರ್ಥಿಕ ನೆರವು ಒದಗಿಸಲು ಸಿದ್ಧರಾಗಿದ್ದೇವೆ. ಅಭಿವೃದ್ಧಿ ಪಾಲುದಾರ ದೇಶಗಳಿಗೆ ವಿಶ್ವಬ್ಯಾಂಕ್ ಸಮೂಹವು ತ್ವರಿತವಾಗಿ ಹಣಕಾಸು ಸಹಾಯ ಮತ್ತು ರಾಜತಾಂತ್ರಿಕ ಬೆಂಬಲವನ್ನು ನೀಡಲು ಸಿದ್ಧ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
-
"The @WorldBank Group is horrified by the shocking violence & loss of life as a result of the events unfolding in Ukraine. We are a long-standing partner of Ukraine & stand with its people at this critical moment."
— World Bank (@WorldBank) February 24, 2022 " class="align-text-top noRightClick twitterSection" data="
Full statement from @DavidMalpassWBG: https://t.co/KRchiYfNtR
">"The @WorldBank Group is horrified by the shocking violence & loss of life as a result of the events unfolding in Ukraine. We are a long-standing partner of Ukraine & stand with its people at this critical moment."
— World Bank (@WorldBank) February 24, 2022
Full statement from @DavidMalpassWBG: https://t.co/KRchiYfNtR"The @WorldBank Group is horrified by the shocking violence & loss of life as a result of the events unfolding in Ukraine. We are a long-standing partner of Ukraine & stand with its people at this critical moment."
— World Bank (@WorldBank) February 24, 2022
Full statement from @DavidMalpassWBG: https://t.co/KRchiYfNtR
ಉಕ್ರೇನ್‌ನಲ್ಲಿ ರಷ್ಯಾ ದಾಳಿಯಿಂದಾಗುತ್ತಿರುವ ಹಿಂಸಾಚಾರ ಮತ್ತು ಜೀವಹಾನಿಗೆ ವಿಶ್ವ ಬ್ಯಾಂಕ್ ಆತಂಕಗೊಂಡಿದೆ. ಉಕ್ರೇನ್, ವಿಶ್ವಬ್ಯಾಂಕ್ನ ದೀರ್ಘಕಾಲದ ಪಾಲುದಾರ ಸದಸ್ಯ ರಾಷ್ಟ್ರವಾಗಿದೆ. ಈ ನಿರ್ಣಾಯಕ ಸಮಯದಲ್ಲಿ ಆ ದೇಶದ ಬೆಂಬಲವಾಗಿ ನಿಲ್ಲಲಾಗುವುದು ಎಂದು ವಿಶ್ವ ಬ್ಯಾಂಕ್ ಗ್ರೂಪ್‌ನ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಹೇಳಿಕೆ ನೀಡಿದ್ದಾರೆ.
ಉಕ್ರೇನ್‌ನಲ್ಲಿನ ವಿನಾಶಕಾರಿ ಬೆಳವಣಿಗೆಗಳು ದೂರಗಾಮಿ ಆರ್ಥಿಕ ಮತ್ತು ಸಾಮಾಜಿಕ ದುಷ್ಪರಿಣಾಮಗಳನ್ನು ಸೃಷ್ಟಿಸುತ್ತವೆ. ಇದನ್ನು ಭರಿಸಲು ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF)ಯೊಂದಿಗೆ ನಿಕಟ ಸಂಪರ್ಕ ಸಾಧಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ರಷ್ಯಾ ಯುದ್ಧ ಘೋಷಿಸುವ ಮುನ್ನ ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ವಿಶ್ವಬ್ಯಾಂಕ್ ಅಧ್ಯಕ್ಷ, ನಿರ್ದೇಶಕರನ್ನು ಭೇಟಿಯಾಗಿ ಒಂದು ವೇಳೆ ಯುದ್ಧ ನಡೆದಲ್ಲಿ ಆರ್ಥಿಕ ನೆರವು ನೀಡಬೇಕು ಎಂದು ಕೋರಿದ್ದರು.
ಇದನ್ನೂ ಓದಿ: ಪುಟಿನ್ ಜೊತೆ ಮೋದಿ ಮಾತುಕತೆ: ಯುದ್ಧಕ್ಕೆ ವಿರಾಮ ಹಾಕುವಂತೆ ಮನವಿ