ETV Bharat / international

ಪದಗ್ರಹಣ ವೇಳೆ ಸೀರೆಯುಡುತ್ತಾರಾ ಕಮಲಾ ಹ್ಯಾರಿಸ್? - ಜನವರಿ 20 ರಂದು ಕಮಲಾ ಹ್ಯಾರಿಸ್ ಪದಗ್ರಹಣ

ಜನವರಿ 20 ರಂದು ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ವೇಳೆ ಅವರು ಸೀರೆಯುಟ್ಟು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.

INAUGURATION DAY
ಪದಗ್ರಹಣ ವೇಳೆ ಸೀರೆಯುಡುತ್ತಾರಾ ಕಮಲಾ
author img

By

Published : Jan 19, 2021, 1:13 PM IST

ವಾಷಿಂಗ್ಟನ್ (ಅಮೆರಿಕ): ಕಮಲಾ ಹ್ಯಾರಿಸ್ ಸೀರೆಯುಟ್ಟು ಅಮೆರಿಕ ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಚುನಾವಣಾ ಪ್ರಚಾರದ ವೇಳೆ ಕಮಲಾ ತಮ್ಮ ಭಾರತೀಯ ಮೂಲವನ್ನು ಪದೇ ಪದೆ ಬಹಿರಂಗಪಡಿಸುತ್ತಿದ್ದರು. ಹಾಗಾಗಿ ಪದಗ್ರಹಣ ವೇಳೆ ಭಾರತೀಯ ಸಂಸ್ಕೃತಿಯಂತೆ ಸೀರೆಯುಡಲಿದ್ದಾರೆ ಎಂದು ಹೇಳಲಾಗ್ತಿದೆ.

INAUGURATION DAY
ಪದಗ್ರಹಣ ವೇಳೆ ಸೀರೆಯುಡುತ್ತಾರಾ ಕಮಲಾ?

ನೀವು ಸೀರೆ ಧರಿಸುತ್ತೀರಾ?

2019 ರಲ್ಲಿ ನಡೆದ ಚುನಾವಣಾ ಱಲಿಯಲ್ಲಿ ಗೆದ್ದರೆ ನೀವು ಸೀರೆ ಉಡುತ್ತೀರಾ ಎಂದು ಕೇಳಿದಾಗ, ಮೊದಲು ಗೆಲ್ಲೋಣ ಎಂದು ಕಮಲಾ ಉತ್ತರಿಸಿದ್ದರು. ಕಮಲಾ ತಾಯಿ ಶ್ಯಾಮಲಾ ಗೋಪಾಲನ್ ಚೆನ್ನೈನಲ್ಲಿ ಹುಟ್ಟಿ ಬೆಳೆದು ಅಮೆರಿಕಕ್ಕೆ ವಲಸೆ ಬಂದರು. ಅವರು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅಪಾರ ಗೌರವ ಹೊಂದಿದ್ದು, ಎಲ್ಲ ಹಬ್ಬಗಳನ್ನು ಆಚರಿಸುವುದಾಗಿ ಹೇಳಿದರು. ಹಾಗಾಗಿ ಭಾರತೀಯ ಸಂಸ್ಕೃತಿಗನುಗುಣವಾಗಿ ಅವರು ಸೀರೆಯುಡುವ ಸಾಧ್ಯತೆ ದಟ್ಟವಾಗಿದೆ.

ಬನಾರಸ್​ ಸೀರೆಯುಡುವ ಸಾಧ್ಯತೆ

ನ್ಯೂಯಾರ್ಕ್ ಮೂಲದ ಫ್ಯಾಷನ್ ಡಿಸೈನರ್ ಬಿಬು ಮೊಹಾಪಾತ್ರ ಇತ್ತೀಚಿನ ಸಂದರ್ಶನವೊಂದರಲ್ಲಿ ಯುಎಸ್ ಉಪಾಧ್ಯಕ್ಷೆ ಮೇಡಂ, ಪದಗ್ರಹಣ ವೇಳೆ ಬನಾರಸ್ ಸೀರೆಯಲ್ಲಿ ಕಾಣಿಸಿಕೊಂಡರೆ ಆಶ್ಚರ್ಯವೇನಿಲ್ಲ ಎಂದಿದ್ದರು.

ಕಮಲಾ ಯುಎಸ್​ನ ಅತ್ಯುನ್ನತ ಹುದ್ದೆ ಅಲಂಕರಿಸಿದ ಮಹಿಳೆ ಮಾತ್ರವಲ್ಲ. ಕಪ್ಪು ವರ್ಣೀಯಳಾಗಿದ್ದು, ದಕ್ಷಿಣ ಏಷ್ಯಾ ಮೂಲದವರಾಗಿದ್ದಾರೆ. ಈ ಐತಿಹಾಸಿಕ ಕ್ಷಣದಲ್ಲಿ ಅವರು ಅನುಸರಿಸುವ ಸಣ್ಣ ಸಣ್ಣ ವಿಚಾರಗಳೂ ದೊಡ್ಡ ಪರಿಣಾಮ ಬೀರುತ್ತವೆ. ಅಲ್ಲದೆ ಅಮೆರಿಕದ ಅಲ್ಪಸಂಖ್ಯಾತರ ಪ್ರತಿನಿಧಿಯಾಗಿ ಸೀರೆಯುಟ್ಟು ಜಗತ್ತಿಗೆ ಉತ್ತಮ ಸಂದೇಶ ಸಾರಲಿದ್ದಾರೆ ಎನ್ನಲಾಗ್ತಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.