ETV Bharat / international

ಕೊರೊನಾ ಜಾಗೃತಿಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ 2 ಆ್ಯಪ್​ ಬಿಡುಗಡೆ - ವಿಶ್ವ ಆರೋಗ್ಯ ಸಂಸ್ಥೆ ಸುದ್ದಿ

ಡಬ್ಲ್ಯುಎಚ್‌ಒ ಒಂದು ಅಪ್ಲಿಕೇಷನ್ ಅನ್ನು ಸಾಂಕ್ರಾಮಿಕ ಸೋಂಕು ಹಬ್ಬಿದ ಸಮಯದಲ್ಲಿ ಆರೋಗ್ಯ ಕಾರ್ಯಕರ್ತರು ತಮ್ಮ ಜೀವ ಉಳಿಸಿಕೊಳ್ಳುವ ಕೌಶಲ್ಯ ಬೆಳೆಸಿಕೊಳ್ಳಲು ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಎರಡನೇ ಆ್ಯಪ್​ನಲ್ಲಿ ಡಬ್ಲ್ಯುಎಚ್‌ಒ ಜನರಿಗೆ ಸೋಕಿನ ಬಗ್ಗೆ ಮಾಹಿತಿ ಒದಗಿಸಲಾಗಿದೆ.

ಕೊರೊನಾ ಜಾಗೃತಿಗೆ ವಿಶ್ವ ಆರೋಗ್ಯ ಸಂಸ್ಥೆ ಮೊಬೈಲ್​ ಆ್ಯಪ್​

author img

By

Published : May 15, 2020, 10:58 PM IST

ಜಿನೀವಾ: ಕೋವಿಡ್​-19 ವಿರುದ್ಧದ ಹೋರಾಟಕ್ಕೆ ಆರೋಗ್ಯ ಸಿಬ್ಬಂದಿಗೆ ನೆರವಾಗಲು ಹಾಗೂ ಜನ ಸಾಮಾನ್ಯರಿಗೆ ಸೋಂಕಿನ ಬಗ್ಗೆ ತಿಳವಳಿಕೆ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್​ಒ) ಎರಡು ಮೊಬೈಲ್ ಅಪ್ಲಿಕೇಷನ್​ಗಳನ್ನು ಬಿಡುಗಡೆ ಮಾಡಿದೆ.

ಡಬ್ಲ್ಯುಎಚ್‌ಒ ಅಕಾಡೆಮಿಯ ಒಂದು ಅಪ್ಲಿಕೇಷನ್ ಅನ್ನು ಸಾಂಕ್ರಾಮಿಕ ಸೋಂಕು ಹಬ್ಬಿದ ಸಮಯದಲ್ಲಿ ಆರೋಗ್ಯ ಕಾರ್ಯಕರ್ತರು ತಮ್ಮ ಜೀವ ಉಳಿಸಿಕೊಳ್ಳುವ ಕೌಶಲ್ಯ ಬೆಳೆಸಿಕೊಳ್ಳಲು ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಎರಡನೇ ಆ್ಯಪ್​ನಲ್ಲಿ ಡಬ್ಲ್ಯುಎಚ್‌ಒ ಜನರಿಗೆ ಸೋಕಿನ ಬಗ್ಗೆ ಮಾಹಿತಿ ಒದಗಿಸಲಾಗಿದೆ.

ಆರೋಗ್ಯ ಕಾರ್ಯಕರ್ತರು ಡಬ್ಲ್ಯುಎಚ್​ಒ ಅಭಿವೃದ್ಧಿಪಡಿಸಿದ ಕೊರೊನಾ ಬಗೆಗಿನ ಹೆಚ್ಚಿನ ತಿಳವಳಿಗೆ ಈ ಅಪ್ಲಿಕೇಷನ್‌ ನೆರವು ಪಡೆಯಬಹುದು. ಇದರಲ್ಲಿ ರೋಗಿಗಳ ಆರೈಕೆಗೆ ನೆರವಾಗುವ ಮಾರ್ಗದರ್ಶನ, ಪರಿಕರಗಳು, ತರಬೇತಿ ಮತ್ತು ವರ್ಚುವಲ್ ಕಾರ್ಯಾಗಾರಗಳು ಸೇರಿವೆ. ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಕುರಿತು ವಿವರಣೆ ಸೇರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹೊಸ ಮೊಬೈಲ್ ಅಪ್ಲಿಕೇಷನ್‌ನೊಂದಿಗೆ ಡಬ್ಲ್ಯುಎಚ್‌ಒ ಕಲಿಕೆ ಮತ್ತು ಜ್ಞಾನ ಹಂಚಿಕೆಯನ್ನು ಆರೋಗ್ಯ ಕಾರ್ಯಕರ್ತರಿಗೆ ಕೈಗೆಟಕುವಂತೆ ಮಾಡಿದೆ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದರು.

20,000 ಜಾಗತಿಕ ಆರೋಗ್ಯ ಕಾರ್ಯಕರ್ತರ ಸಮೀಕ್ಷೆಯ ಆಧಾರದ ಮೇಲೆ ಈ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದೆ. ಸಾಂಕ್ರಾಮಿಕ ರೋಗದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ವರ್ಚುವಲ್ ಕಲಿಕೆಗೆ ಇವು ಸಹಾಯಕವಾಗಿವೆ.

ಕೊರೊನಾ ಕುರಿತಾದ ಸುತ್ತಮುತ್ತಲಿನ ಇತ್ತೀಚಿನ ಸುದ್ದಿಗಳು ಮತ್ತು ಬೆಳವಣಿಗೆಗಳ ಬಗ್ಗೆ ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಈ ಆ್ಯಪ್​ ಮೂಲಕ ಡಬ್ಲ್ಯುಎಚ್​ಒ ಮಾಹಿತಿ ಒದಗಿಸುತ್ತದೆ. ಎರಡೂ ಅಪ್ಲಿಕೇಷನ್‌ಗಳು ಆ್ಯಪಲ್ ಆ್ಯಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್​ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.